News Karnataka Kannada
Wednesday, May 15 2024
ಚಿಕಮಗಳೂರು

ಯಡಿಯೂರಪ್ಪ ಹೆಸರು ಬಳಸಿ ಅಧಿಕಾರ ಹಿಡಿದವರು ಸಿ.ಟಿ.ರವಿ -ಬೋಜೇಗೌಡ

It was C.T. Ravi who took over using Yediyurappa's name.
Photo Credit : News Kannada

ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೆಸರು ಹೇಳಿ ಕೊಂಡು ನಾಲ್ಕು ಬಾರಿ ಶಾಸಕರು, ಸಚಿವರೂ ಆದ ಸಿ.ಟಿ.ರವಿಯವರು ಕೊನೆಗೆ ಅವರನ್ನು ಜೈಲಿಗೆ ಕಳುಹಿಸುವ ವಿಚಾರದಲ್ಲಿ ಪಾತ್ರ ವಹಿಸಿದ್ದರು. ಜನರಿಗೆ ಇದು ತಿಳಿದಿದ್ದು ಸರಿಯಾದ ಸಮಯದಲ್ಲಿ ಉತ್ತರ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ರವಿಯವರ ನಾಲ್ಕು ಬಾರಿ ಗೆಲುವು ಸಾಧಿಸಲು ಬಿಜೆಪಿ ಪಕ್ಷದಿಂದ ಅನುಕೂಲವಾ ಯಿತೋ, ಯಡಿಯೂರಪ್ಪನವರ ಹೆಸರು ಅನುಕೂ ಲವಾಯಿತೋ ಅಥವಾ ಇವರ ಅಭಿವೃದ್ದಿ ಗೆಲುವಿಗೆ ಸಹಕಾರ ನೀಡಿತೋ ಎಂಬುದರ ಬಗ್ಗೆ ಯೋಚನೆ ಮಾಡಬೇಕು ಎಂದರು.

ಬಿಜೆಪಿಯವರಿಗೆ ಈಗ ಎದೆಗಾರಿಕೆ ಬರಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕಾರಣ. ಜೆಡಿಎಸ್ ಮತ್ತು ಕಾಂಗ್ರೆಸ್‌ನವರನ್ನು ಹೊತ್ತುಕೊಂಡು ಹೋಗಿ ಅಧಿಕಾರ ನಡೆಸಿದ ಕಾರಣ ಬಿಜೆಪಿಯವರಿಗೀಗ ಹಲ್ಲು ಬಂದಿದೆ ಎಂದರು.

ಪಕ್ಷವನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪನವರನ್ನು ಈಗ ಕೆಳ ಗಿಳಿಸಿದ್ದಾರೆ. ಜನ ಅದನ್ನು ಮರೆತಿಲ್ಲ. ಆದರೂ ಬಿಜೆಪಿಯವರು ಸಣ್ಣಮಟ್ಟದ ಬುದ್ದಿವಂತಿಕೆ ಮಾಡಿ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯ ಮಂತ್ರಿ ಸ್ಥಾನಕ್ಕೆ ಕೂರಿಸಿದರು. ಇದರಿಂದಾಗಿ ಉಳಿದಿದ್ದಾರೆ. ಇಲ್ಲದಿ ದ್ದರೆ ಅವರು ಸರ್ವನಾಶವಾಗುತ್ತಿ ದ್ದರು ಎಂದರು. ಯಡಿಯೂರಪ್ಪನವರಿಗೆ ಶಕ್ತಿ ಇಲ್ಲ. ನಡೆದಾಡಲು ಸಾಧ್ಯವಿಲ್ಲ ಎಂಬ ನೆಪವೊಡ್ಡಿ ಅಧಿಕಾರದಿಂದ ಇಳಿಸಿದ್ದ ಬಿಜೆಪಿಯವರು ಈಗ ಅವ ರನ್ನೇ ಮುಂದಿಟ್ಟುಕೊಂಡು ಚುನಾ ವಣೆಗೆ ಹೊಂಟಿದ್ದಾರೆ. ಯಡಿಯೂ ರಪ್ಪನವರಿಗೆ ಈಗ ವಿಶೇಷ ಶಕ್ತಿ ಎಲ್ಲಿಂದ ಬಂತು ಎಂದು  ಪ್ರಶ್ನಿಸಿ ದರು.

ರಾಜಕೀಯವಾಗಿ ಎದುರಿಸುವ ಬದಲು ವೈಯಕ್ತಿಕ ವಿಚಾರಗಳನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಬಾರದು. ನಿಮ್ಮ ಬುದ್ದಿವಂತಿಕೆ ಅಭಿವೃದ್ದಿಗೆ ಬಳಕೆಯಾಗಲೀ. ಶಾಸಕ ಸಿ.ಟಿ. ರವಿ ಮತ್ತು ಸಚಿವ ಸುನೀಲ್ ಯಾರೋ ಹೋರಾಟ ಮಾಡಿದ ಲಾಭದ ಫಲವನ್ನು ಅನುಭವಿಸುತ್ತಿದ್ದಾರೆ. ಆರ್‌ಎಸ್‌ಎಸ್ ಧ್ಯೇಯೋದ್ದೇಶಗಳನ್ನು ಗಾಳಿಗೆ ತೂರಿ ಎಳ್ಳು ನೀರು ಬಿಟ್ಟಿ ದ್ದಾರೆ.
ಸರ್ವಜನಾಂಗದ ಶಾಂತಿಯ ತೋಟದ ಬಗ್ಗೆ ಮಾತನಾಡುವ ನೈ ತಿಕತೆ ಶಾಸಕ ರವಿಯವರಿಗಿಲ್ಲ. ಮೈನಸ್ ಯಡಿಯೂರಪ್ಪ ಬಿಜೆಪಿ ಬಿಗ್ ಝೀರೋ ಎಂದ ಅವರು ಶಾಸಕ ರವಿ ಚಿಕ್ಕಮಗಳೂರು ಕ್ಷೇತ್ರ ವನ್ನು ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಗೆದ್ದು ತೋರಿಸಲಿ ಅಥವಾ ಬೇರೆ ಕ್ಷೇತ್ರದಲ್ಲಿ ಇತರರನ್ನು ಗೆಲ್ಲಿಸಿ ತಮ್ಮ ಸಾಮರ್ಥ್ಯ ತೋರಿಸಲಿ ಎಂದು ಸವಾಲು ಹಾಕಿದರು.

ಕಂದಾಯ ಸಚಿವ ಆರ್. ಅ ಶೋಕ್ ಅವರು ಹುಲಿಕೆರೆಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದಾರೆ. ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನ ನಮ್ಮ ಪಕ್ಷದ ಕಾರ್ಯಕ್ರಮ. ಗ್ರಾಮ ವಾಸ್ತವ್ಯವನ್ನು ಕುಮಾರಸ್ವಾಮಿ ನಡೆ ಸಿದ ಸಂದರ್ಭದಲ್ಲಿ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.  ಆಗ ರವಿ ಯವರು ಈ ಬಗ್ಗೆ ಅನೇಕ ಟೀಕೆ ಮಾಡಿದ್ದರು. ಅವರೀಗ ಅವಲೋಕನ ಮಾಡಿಕೊಳ್ಳಬೇಕು ಎಂದರು.

ಚುನಾವಣೆ ಮುಗಿದ ನಂತರ ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ.ಕುಮಾರಸ್ವಾಮಿ ಮತ್ತು ಸಿದ್ದರಾ ಮಯ್ಯ ಅವರು ಗಂಟುಮೂಟೆ ಕಟ್ಟ ಬೇಕಾಗುತ್ತದೆ ಎಂದು ಗ್ರಾಮವಾಸ್ತವ್ಯದಲ್ಲಿ ಟೀಕೆ ಮಾಡಿದ್ದಾರೆ.

ಅಶೋಕ್ ಅವರು ಹಿರಿಯ ರಾಜಕಾರಣಿ, ಸಚಿವರಾಗಿ ಈ ರೀತಿ ಮಾತನಾಡು ವುದು ಸರಿಯಲ್ಲ. ಮುಂದಿನ ಚುನಾ ವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಹಾಗಾದರೆ ಅವರೂ ಗಂಟುಮೂಟೆ ಕಟ್ಟುತ್ತಾರಾ ಎಂದು ಪ್ರಶ್ನಿಸಿದ ಅವರು ಆರ್.ಅಶೋಕ್ ಆಗಲೀ, ಸಿ.ಟಿ.ರವಿ ಯಾಗಲೀ ಹೀಗೆ ಇರಲು ಸಾಧ್ಯವಿಲ್ಲ ಎಂದ ಬೋಜೇಗೌಡ ನಾಲಿಗೆ ಹರಿಯಬಿಡಬಾರದು. ನಮಗೂ ಹರಿತವಾದ ನಾಲಿಗೆಯಿದೆ. ನಾವು ಸಮಾಜಕ್ಕೆ ಹೆದರಿ ಸುಮ್ಮನಿದ್ದೇವೆ. ನಾವು ಅವರಿಗಿಂತ ಹೆಚ್ಚು ಮಾತನಾ ಡಬಹುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ಬಿ.ಎಂ. ತಿಮ್ಮಶೆಟ್ಟಿ, ಎ.ಸಿ.ಕುಮಾರಗೌಡ, ಹೊಲದಗದ್ದೆ ಗಿರೀಶ್, ಮೂರ್ತಿ, ನಂದನ್, ರೇವಣ್ಣ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು