ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚಿಗೆ ಹುಲ್ಲುಗಾವಲು ಹೊತ್ತಿ ಉರಿದಿರುವಂತಹ ಘಟನೆ ನಡೆದಿದೆ.
ಮಸ್ಲಿಂ ಸಮುದಾಯದಿಂದ ಉರುಸ್ ಆಚರಣೆ ವೇಳೆ ಟೆಂಟ್ ಹಾಕಿ ಅಡುಗೆ ಮಾಡುವಾಗ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಆಕಸ್ಮಿಕ ಬೆಂಕಿಯಿಂದ 2 ಟೆಂಟ್ಗಳು ಕೂಡ ಸಂಪೂರ್ಣ ಭಸ್ಮವಾಗಿದೆ.
ಬೆಂಕಿ, ಹುಲ್ಲುಗಾವಲು ಪ್ರದೇಶ ಭಸ್ಮ ಇಡೀ ಬೆಟ್ಟವನ್ನು ಆವರಿಸಿಕೊಂಡಿದೆ. ಹೊತ್ತಿ ಉರಿಯುತ್ತಿರುವ ಬೆಂಕಿ ನಂದಿಸಲು ಸ್ಥಳೀಯರಿಂದ ಹರಸಾಹಸ ಮಾಡಲಾಯಿತು.
ಸೂಕ್ಷ್ಮ ಪ್ರದೇಶದಲ್ಲಿ ಅಡುಗೆ ತಯಾರಿ ಮಾಡದಂತೆ ಜಿಲ್ಲಾಡಳಿತ ಸೂಚನೆ ಇದ್ದರೂ ಧಿಕ್ಕರಿಸಿ ಅಡುಗೆ ತಯಾರು ಮಾಡಲಾಗಿದೆ.