ಚಿಕ್ಕಮಗಳೂರು: ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ರಸ್ತೆಯ ಮಧ್ಯೆ ಗಾಢವಾಗಿ ನಿದ್ದೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಸಮೀಪದ ಹಳಸೆ ಗ್ರಾಮದ ಬಳಿ ನಡೆದಿದೆ.
ಕುಡಿದ ಮತ್ತಿನಲ್ಲಿ ವ್ಯಕ್ತಿ ಮಧ್ಯರಾತ್ರಿ ಸಮಯದಲ್ಲಿ ರಸ್ತೆ ಮಧ್ಯೆಯೇ ನಿದ್ದೆ ಮಾಡಿದ್ದಾನೆ. ದಾರಿಯಲ್ಲಿ ಬರುತ್ತಿದ್ದ ವಾಹನ ಸಾವರರೊಬ್ಬರು ವ್ಯಕ್ತಿಯನ್ನು ಕಂಡು ಗಾಬರಿಯಾಗಿದ್ದಾರೆ.
ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ವ್ಯಕ್ತಿ ಎದ್ದೇಳಿಲ್ಲ. ಆ ಬಳಿಕ ಕೆಲ ಹೊತ್ತು ಎದ್ದು ಕುಳಿತು ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ಇದ್ದರಿಂದ ವಾಹನ ಸವಾರರು ಪರದಾಡಿದ್ದಾರೆ.