News Karnataka Kannada
Tuesday, May 07 2024
ಚಿಕಮಗಳೂರು

ಮೋದಿ ಬಂದ ಮೇಲಷ್ಟೇ ದೇಶ ಅಭಿವೃದ್ಧಿ ಆಗಿಲ್ಲ: ಎಚ್.ಡಿ.ಕೆ

Country has not developed only after Modi's arrival: HDK
Photo Credit : News Kannada

ಚಿಕ್ಕಮಗಳೂರು:  ಹಾಸನ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿ ಹೈವೋಲ್ಟೇಜ್ ಮಾಡಿದ್ದು ಮಾಧ್ಯಮದವರು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಹಾಸನ ಟಿಕೆಟ್ ಗೊಂದಲ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹಾಸನ ಬಗ್ಗೆ ರಾಜ್ಯದಲ್ಲಿ ಭಾರೀ ಕುತೂಹಲ. ಇದನ್ನು ಹೈವೋಲ್ಟೇಜ್ ಮಾಡಿದವರು ಮಾಧ್ಯಮದವರು ಕಾರಣ. ನಮ್ಮ ಮಾಧ್ಯಮದವರು, ದಿನಕ್ಕೊಂದು ಸೆಗ್ಮೆಂಟ್ ಫಿಕ್ಸ್ ಮಾಡ್ತಾರೆ. ಆದರೆ ಹಾಸನ ಜಿಲ್ಲೆ ಮತ ಹಾಕೋರು ಬೇರೆ ಯೋಚನೆ ಮಾಡ್ತಿದ್ದಾರೆ ಎಂದರು.

ನಾಳೆ ಪಕ್ಷದ ಕಛೇರಿಯಲ್ಲಿ ಜೆಡಿಎಸ್ ಕಾರ್ಯಕರ್ತರ( ಸಭೆ ಕರೆದಿದ್ದೇನೆ. ಪಕ್ಷದ ೩೦೦ ಕಾರ್ಯಕರ್ತರು ಸಭೆಯಲ್ಲಿ ಬರ್ತಾರೆ. ಹಾಸನ ಟಿಕೆಟ್ ವಿಚಾರವಾಗಿ ಕಾರ್ಯಕರ್ತರೊಂದಿ ಮುಕ್ತವಾಗಿ ಚರ್ಚೆ ನಡೆಸುತ್ತೇನೆ. ಅವರು ಓಪನ್ ಆಗಿ ಮಾತಾಡುವುದಕ್ಕೆ ಹೆದರುತ್ತಾರೆ. ಅದಕ್ಕಾಗಿ ಹಾಸನ ಜಿಲ್ಲೆಯ ಪ್ರಮುಖ ನಾಯಕರೊಂದಿಗೆ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಸಿ ಗೊಂದಲಗಳು ಬಗೆಹರಿಸಿಕೊಳ್ಳುತ್ತೇವೆ ಎಂದರು.

ನಾಳೆ ನಡೆಯುವ ಸಭೆಯಲ್ಲಿ ನಮ್ಮ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುತ್ತೇನೆ. ಯಾರಿಗೇ ಟಿಕೆಟ್ ಸಿಕ್ಕರೂ ಅವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಯಾವುದೇ ಕಾರಣಕ್ಕೂ ಹಾಸನ ಜೆಡಿಎಸ್ ಸಂಘಟನೆ ಮೇಲೆ ಎಫೆಕ್ಟ್ ಆಗಬಾರದು ಅಂತ ಸಲಹೆ ನೀಡಿದ್ದೇನೆ ಎಂದರು.

ಬಿಜೆಪಿ ಅಭ್ಯರ್ಥಿ ಏನೇ ಹೇಳಲಿ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಎರಡು ವರ್ಷದ ಹಿಂದೆಯೇ ಹೇಳಿದ್ದೇನೆ ಬಿಜೆಪಿ ಅಭ್ಯರ್ಥಿ ವಿರುದ್ಧ ನಮ್ಮ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿ ಗೆಲ್ಲಿಸಿಕೊಂಡು ಬರ್ತೇನೆ ಎಂದು. ನಾನು ಇಂದಿಗೂ ಆ ಮಾತಿಗೆ ಬದ್ಧವಾಗಿದ್ದೇನೆ ಎಂದು ಎಚ್‌ಡಿ ಕುಮಾರಸ್ವಾಮಿ ಈ ಬಾರಿ ಸಾಮಾನ್ಯ ಕಾರ್ಯಕರ್ತರನಿಗೆ ಟಿಕೆಟ್ ನೀಡ್ತಾರಾ ಕುಮಾರಸ್ವಾಮಿ? ಹಾಗಾದ್ರೆ ಭವಾನಿಗೆ ಟಿಕೆಟ್ ಸಿಗೋದು ಅನುಮಾನ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಈ ಬಿಜೆಪಿಯವರು ನೂರು ಸುಳ್ಳು ಹೇಳಿ ಮೂರು ಕೆಲಸ ಮಾಡ್ತಾರೆ. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದ ಮೇಲೆ ’ಜನಾರ್ಧನ ರೆಡ್ಡಿ ಯನ್ನ ನಾನು ನೋಡಿಕೊಳ್ಳುತ್ತೇನೆ’ ಎಂದು ಅಮಿತ್ ಷಾ( ಯಾಕೆ ಹೇಳಿದ್ದಾರೆ? ಯಾವ ರೀತಿ ನೋಡಿಕೊಳ್ಳುತ್ತಾರೆ ಇಡಿ, ಸಿಬಿಐ ಬಿಟ್ಟು ನೋಡಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.

ರೈತರು ಕೊಟ್ಟ ಭೂಮಿಯಲ್ಲಿ ವಿಮಾನ ನಿಲ್ದಾಣ: ಶಿವಮೊಗ್ಗ ದಲ್ಲಿ ನಿರ್ಮಾಣವಾಗಿ ಉದ್ಘಾಟನೆಗೊಳ್ಳುತ್ತಿರುವ ವಿಮಾನ ನಿಲ್ದಾಣ ವಿಚಾರ ಪ್ರಸ್ತಾಪಿಸಿದ ಎಚ್‌ಡಿ ಕುಮಾರ ಸ್ವಾಮಿಯವರು, ಇದು ನಾಡಿನ ರೈತರು ಕೊಟ್ಟ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ ಇದು ಬಿಜೆಪಿ ಕೊಡುಗೆಯಲ್ಲ ಎಂದರು.

ಪ್ರಧಾನಿ ಬಂದ ಮೇಲಷ್ಟೇ ದೇಶ ಅಭಿವೃದ್ಧಿ ಆಗಿಲ್ಲ:
ಮೈಸೂರು-ಬೆಂಗಳೂರು ರಸ್ತೆ( ಧರ್ಮಕ್ಕೆ ಕೊಟ್ಟಿಲ್ಲ. ನಾನು ೧೪ ತಿಂಗಳಲ್ಲಿ ೯ಮೀಟಿಂಗ್ ಮಾಡಿದ್ದೇನೆ. ಈ ರಸ್ತೆ ನಿರ್ಮಾಣಕ್ಕೆ ರೈತರ ಜೊತೆ ನಾನು ೯ ಸಭೆ ಮಾಡಿದ್ದೇನೆ. ಆ ರಸ್ತೆ ನಿರ್ಮಾಣಕ್ಕೆ ನಾನು ಸಹ ಶ್ರಮ ಪಟ್ಟಿರುವೆ. ಆಗ ನಾನು ಏನು ಮಾಡಿದೆ ಎಂಬುದು ಜನಕ್ಕೆ ಗೊತ್ತು, ರೇವಣ್ಣನವರ ಕೆಲಸವೂ ಗೊತ್ತು ಎಂದರು.

ಪ್ರಧಾನಿ ಮೋದಿ ಬಂದ ಮೇಲಷ್ಟೆ ದೇಶ ಅಭಿವೃದ್ದಿ ಆಗಿಲ್ಲ ನಾವು ಹುಟ್ಟುವ ಮುಂಚೆಯೇ ಅಭಿವೃದ್ದಿ ಆಗಿದೆ. ನೆಹರೂ ಕಾಲದಿಂದಲೂ ದೇಶ ಅಭಿವೃದ್ಧಿ ಯಾಗಿದೆ. ಪಂಚ ವಾರ್ಷಿಕ ಯೋಜನೆಗಳಂಥ ಕೆಲಸU ಳಿಂದ ದೇಶ ಅಭಿವೃದ್ಧಿ ಆಗಿದೆ. ಆದರೆ ಆಗ ಇದು ಸವಾಲಿನದ್ದಾಗಿತ್ತು ಎಂದರು.

ಗುಜರಾತ್ ಮಾದರಿ ಅಭಿವೃದ್ಧಿ ಮಾಡ್ತೇವೆ ಅಂತಾರೆ. ಗುಜರಾತ್ ಹೋಗಿ ನೋಡಿ ಅಲ್ಲಿನ ಪರಿಸ್ಥಿರಿ ಹೇಗಿದೆ ಅಂತಾ ಗೊತ್ತಾಗುತ್ತೆ. ಗುಜರಾತ್ ಫೈಲ್ಸ್( ಓದಿದ್ದೇನೆ, ಅವರನ್ನ ಹೇಗೆ ಓಡಿಸಿದರೂ ಅಂತಾ ಗೊತ್ತಿದೆ

ಮುಂದಿನ ಚುನಾವಣೆಯಲ್ಲಿ ಬಿಎಸ್‌ವೈ ೧೨೦ ಸ್ಥಾನ ಗೆಲ್ಲುತ್ತೇವೆ ಎಂದಿದ್ದಾರೆ. ಕೆಜೆಪಿ ಪಕ್ಷ ಕಟ್ಟಿದಾಗ ಜೀವ ಇರೋ ವರೆಗೂ ಬಿಜೆಪಿ ಹೋಗಲ್ಲಅಂದಿದ್ರು. ಈಗ ಜೀವ ಇರೋವರೆಗೆ ಬಿಜೆಪಿ ಅಂತಿದ್ದಾರೆ. ಈಗ ಜ್ಞಾನೋದಯ ಆಗಿರಬಹುದು ಎಂದು ಲೇವಡಿ ಮಾಡಿದರು.

ಜೆಡಿಎಸ್ ಮೊದಲ ಪಟ್ಟಿ ಗೊಂದಲ ಇಲ್ಲ. ಆ ಬಗ್ಗೆ ಮುಂದಿನ ಪ್ರಕ್ರಿಯೆ ನಡೆಯುತ್ತಿವೆ. ಬಿಜೆಪಿ-ಕಾಂಗ್ರೆಸ್ ಪಟ್ಟಿಯೇ ಬಿಡುಗಡೆ ಆಗಿಲ್ಲ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಪರ ಅಲೆ ಇದೆ. ನಮ್ಮ ಪಕ್ಷದ ಬಗ್ಗೆ ಯಾರು ಏನೇ ಮಾತನಾಡಿದರೂ ಈ ಭಾರಿ ನಡೆಯಲ್ಲ. ಈ ಜನತೆಯ ಬಿ ಟೀಂ ನಾವು. ಮುಂದಿನ ಚುನಾವಣೆಯಲ್ಲಿ ೧೨೩ ಗುರಿ ಮುಟ್ಟುತ್ತೇವೆ. ಬಹುಮತದಿಂದ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೃಂಗೇರಿ ಶ್ರೀಗಳ ದರ್ಶನ ಮಾಡಿದ ಕುಮಾರಸ್ವಾಮಿ: ಬ್ರಾಹ್ಮಣ ಸಿಎಂ ಹೇಳಿಕೆ ನೀಡಿದ ಬಳಿಕ ಮೊದಲ ಬಾರಿ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಗಳನ್ನು ಭೇಟಿ ಮಾಡಿದ ಎಚ್‌ಡಿ ಕುಮಾರಸ್ವಾಮಿ ಬಳಿಕ ಶ್ರೀಗಳೊಂದಿಗೆ ಹತ್ತು ನಿಮಿಷ ಮಾತುಕತೆ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು