News Karnataka Kannada
Saturday, April 27 2024
ಚಿಕಮಗಳೂರು

ಚಿಕ್ಕಮಗಳೂರು: ಬಿಜೆಪಿ ಸರ್ಕಾರದಿಂದ ಒಳ ಮೀಸಲು ಜಾರಿಗೆ

The BJP government has implemented internal reservation
Photo Credit : News Kannada

ಚಿಕ್ಕಮಗಳೂರು: ಸುಮಾರು ೩೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿ ಗಳ ಒಳಮೀಸಲಾತಿ ಜಾರಿಯನ್ನು ಇಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತರಲು ಮುಂದಾಗಿರುವುದನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ವಕ್ತಾರ ದೀಪಕ್‌ದೊಡ್ಡಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು ಪರಿಶಿಷ್ಟ ಜಾತಿಯ ಒಳಗಿರುವ ಅನೇಕ ಉಪಜಾತಿಗಳಿಗೆ ಪ್ರತ್ಯೇಕ ಮೀಸಲಾತಿಯಿಲ್ಲದೇ ಎಲ್ಲ ರಿಗೂ ಅನ್ಯಾಯವಾಗುತ್ತಿತ್ತು. ಅದಕ್ಕಾಗಿ ರಾಜ್ಯದಲ್ಲಿ ಜನಸಂಖ್ಯೆಗೆ ಆಧಾರ ವಾಗಿ ಪರಿಶಿಷ್ಟ ಜಾತಿಯಲ್ಲೇ ಇರುವ ಉಪಜಾತಿಗಳನ್ನು ವರ್ಗೀಕರಿಸಿ ಮೀಸಲಾತಿ ನೀಡಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿದ್ದು ಅದಕ್ಕೆ ಸಂಬಂಧಿಸಿದಂತೆ ನೂರಾರು ಚಳುವಳಿಗಳು, ಪ್ರತಿಭಟನೆಗಳು ಮತ್ತು ಸತ್ಯಾಗ್ರಹಗಳು ನಡೆದಿದ್ದವು ಎಂದರು.

ಇದನ್ನು ಮನಗಂಡ ಧರ್ಮ ಸಿಂಗ್ ನೇತೃತ್ವದ ಸರ್ಕಾರ ಜಸ್ಟಿಸ್ ಎ.ಜೆ.ಸದಾಶಿವ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು. ಆ ಯೋಗವು ಆಳವಾದ ಅಧ್ಯಯನ ನಡೆಸಿ ವರದಿಯನ್ನು ಡಿ.ವಿ.ಸದಾ ನಂದಗೌಡ ಅವರ ಸರ್ಕಾರಕ್ಕೆ ಸಲ್ಲಿಸಿತ್ತು.

ಹಲವಾರು ಕಾರಣಗಳಿಂದ ಈ ವರದಿಯು ಜಾರಿಗೆ ಬರದೇ ನೆನೆ ಗುದಿಗೆ ಬಿದ್ದಿತ್ತು. ಇದರ ಅವಶ್ಕಕತೆ ಯನ್ನು ಅರ್ಥಮಾಡಿಕೊಂಡ ಬಸವ ರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿತ್ತು. ಸಮಿತಿ ಯು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವರ್ಗೀಕರಿಸಿ ವರದಿ ನೀಡಿದ್ದು ಅದರಂತೆ ಮುಖ್ಯ ಮಂತ್ರಿಗಳು ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದರು.

ಎರಡು ಸಿ.ವರ್ಗದಡಿ ಒಕ್ಕಲಿಗ ಸಮು ದಾಯದವರಿಗೆ ಮೀಸಲಾತಿ ಪ್ರಮಾಣವನ್ನು, ಎರಡು ಡಿ.ವರ್ಗದ ಡಿ ವೀರಶೈವ ಲಿಂಗಾಯಿತ ಸಮುದಾಯದ ಮೀಸಲಾತಿ ಪ್ರಮಾಣವ ನ್ನು ಹೆಚ್ಚಿಸಿರುವುದು ಅಭಿನಂದನಾ ರ್ಹ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮು ಖಂಡರುಗಳಾದ ಟಿ.ರಾಜಶೇಖರ್, ಬೀಕನಹಳ್ಳಿ ಸೋಮಶೇಖರ್, ವೆಂಕ ಟೇಶ್, ದಿನೇಶ್, ಅಂಕಿತ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು