News Karnataka Kannada
Thursday, May 02 2024
ಚಿಕಮಗಳೂರು

ಚಿಕ್ಕಮಗಳೂರು: ಕೋಡ್ ಆಫ್ ಕಂಡಕ್ಟ್ ಜಾರಿ ಹಿನ್ನೆಲೆ ಪೊಲೀಸರ ಕಟ್ಟೆಚ್ಚರ

Police on high alert in the wake of code of conduct enforcement
Photo Credit : News Kannada

ಚಿಕ್ಕಮಗಳೂರು: ರಾಜ್ಯದ ವಿಧಾನಸಭೆಗೆ ನಡೆಯುವ ೨೦೨೩-೨೪ ರ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಡೆಯೂ ಪೊಲೀಸರು ಬಿಗಿ ಭದ್ರತೆ ವಹಿಸಿದ್ದು ಚುನಾವಣೆಯನ್ನು ಸುಲಲಿತ ಹಾಗೂ ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಬಾರಿ ಬಂದೂಬಸ್ತ್ ಸೇರಿದಂತೆ ಹಾಗೆಯೇ ರಸ್ತೆಯಲ್ಲಿ ಓಡಾಡುವಂತಹ ಪ್ರತಿಯೊಂದು ವಾಹನವನ್ನು ತಪಾಸಣೆಗೈದು ಬಿಡುತ್ತಿರುವುದು ರಾಜ್ಯದ ಎಲ್ಲೆಡೆಯೂ ಸಹಜವಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇಲ್ಲಿನ ಪೊಲೀಸರು ಪಟ್ಟಣದ ಲಯನ್ಸ್ ವೃತ್ತದ ಬಳಿ ನಿನ್ನೆ ರಾತ್ರಿ ಪ್ರತಿಯೊಂದೂ ವಾಹನವನ್ನು ತಪಾಸಣೆಗೆ ಒಳಪಡಿಸಿ ವಾಹನವನ್ನು ಕುಡಿದು ಚಲಾಯಿಸು ತ್ತಿದ್ದಾರೆಯೇ ಅಥವಾ ಚುನಾವಣಾ ಸಂದರ್ಭದಲ್ಲಿ ಹಣವನ್ನು ಸಾಗಾಟ ಮಾಡುತ್ತಿದ್ದಾರೆಯೇ ಎಂದು ಪರೀಕ್ಷಿಸಿ ಬಿಡುತ್ತಿದ್ದರು.

ಆದರೆ ಈ ಸಂದರ್ಭದಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುವವರನ್ನು ಸಹ ಅಡ್ಡಗಟ್ಟಿ ಅಂತವರಿಗೆ ದಂಡದ ಬಿಸಿ ಯನ್ನು ಮುಟ್ಟಿಸುತ್ತಿದ್ದಂತಹ ಸಂದರ್ಭದಲ್ಲಿ ಅಜಾಗರೂಕತೆಯಿಂದ ಬಂದಂತಹ ಒಂದು ಕಾರು ಪೊಲೀಸರು ಅಡ್ಡಗಟ್ಟಿದರು ನಿಲ್ಲಿಸದೆ ಸ್ವಲ್ಪ ದೂರ ಹೋದಾಗ ಪೊಲೀಸರು ಇನ್ನೂ ಅಲರ್ಟ್ ಆಗಿ ಆ ವಾಹನವನ್ನು ಅಲ್ಲೇ ತಡೆದು ನಿಲ್ಲಿಸಿ ತಪಾಸಣೆಗೈದು ನಂತರ ವಾಹನವನ್ನು ಚಲಾಯಿಸುತ್ತಿದ್ದ ವ್ಯಕ್ತಿಯು ಪಾನಮತ್ತನಾಗಿದ್ದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಪೊಲೀಸರು ತಪಾಸಣೆಗೆ ಒಳಪಡಿಸಿದಾಗ ಆ ವ್ಯಕ್ತಿಯು ಕ್ಯಾತೆ ತೆಗೆದಿದ್ದು ನಾನು ಯಾವುದೇ ಕಾರಣಕ್ಕೂ ಕುಡಿದಿಲ್ಲ ನೀವು ಸುಮ್ಮನೆ ಅಡ್ಡಗಟ್ಟುತ್ತೀರಿ ಎಂದು ತೇಲಾಡುತ್ತ ತೋರಲಾಡುತ್ತ ಪೊಲೀಸರೆದರು ಹೈಡ್ರಾಮವನ್ನೇ ಸೃಷ್ಟಿಸಿ ತನ್ನ ಮೊಬೈಲ್ ನಲ್ಲಿ ಪೊಲೀಸರದ್ದೇ ವಿಡಿಯೋ ಚಿತ್ರೀಕರಿಸಿ ಪೊಲೀಸರ ತಪಾಸಣೆಗೆ ಸಹಕಾರ ನೀಡಿದೆ ಸತಾಯಿಸಿದ ದೃಶ್ಯ ಪೊಲೀಸರಿಗೆ ತಲೆ ನೋವು ತಂದಿತ್ತು.

ಕೂಡಲೇ ಇನ್ನೂ ಕಾರ್ಯಪ್ರವೃತ್ತರಾದ ಪೊಲೀಸರು ವ್ಯಕ್ತಿಯನ್ನು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಯ ಯಂತ್ರದಲ್ಲಿ ತಪಾಸಣೆಗೆ ಸಹಕರಿಸಿದದ್ದಾಗ ಕೊನೆಗೆ ಆ ವ್ಯಕ್ತಿಯನ್ನು ಪೊಲೀಸರು ತಮ್ಮ ಜೀಪಿನಲ್ಲಿ ಕೂರಿಸಿಕೊಂಡು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಪಾನಮತ್ತನಾಗಿರುವ ಕುರಿತು ದೃಡಪಟ್ಟಿದ್ದು ನಂತರ ಆ ವ್ಯಕ್ತಿಯ ವಿರುದ್ಧ ದಂಡವನ್ನು ವಿಧಿಸಿ ನ್ಯಾಯಾಲಯಕ್ಕೆ ದಂಡದ ಪಾವತಿಯನ್ನು ಪಾವತಿಸಲು ಸೂಚಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು