News Karnataka Kannada
Tuesday, April 30 2024
ಚಿಕಮಗಳೂರು

ಚಿಕಮಗಳೂರು: ವಿದ್ಯಾರ್ಥಿಗಳಿಗಾಗಿ ಐಎಎಸ್/ಕೆಎಎಸ್ ಪರೀಕ್ಷೆಗಳ ಮಾರ್ಗದರ್ಶನ ಶಿಬಿರ

Guidance camp for IAS/KAS exams for students
Photo Credit : News Kannada

ಚಿಕಮಗಳೂರು: ನಗರದ ಬಿಜಿಎಸ್ ಸಭಾಂಗಣದಲ್ಲಿ ಆದಿಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲಯ ಕೃಷಿಕ್ ಸರ್ವೋದಯ ಫೌಂಡೇಶನ್ ಮತ್ತು ಜಿಲ್ಲಾ ಒಕ್ಕಲಿಗರ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಐಎಎಸ್/ಕೆಎಎಸ್ ಪರೀಕ್ಷೆಗಳ ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಬೆಂಗಳೂರಿನ ಕೆ.ಎಸ್.ಎಫ್ ಕಾರ್ಯದರ್ಶಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇ ಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡಿ ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ಹಿರಿಯರ ಸಲಹೆ ಮಾರ್ಗದರ್ಶನದಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್ ಶಾಖೆಯನ್ನು ಪೂಜ್ಯ ಬಾಲಗಂಗಾಧರನಾಥ ಮಹಾ ಸ್ವಾಮಿಗಳ ಆಶೀರ್ವಾದದೊಂದಿಗೆ ಅವರ ಜನ್ಮ ದಿನದಂದು ಚಿಕ್ಕಮಗಳೂರಿನಲ್ಲಿ ಪ್ರಾರಂಭ ಮಾಡಲಾಯಿತೆಂದು ತಿಳಿಸಿದರು.

ಸಮಾಜ ಸೇವೆಯ ಮೂಲಕ ಹತ್ತಾರು ಜನರಿಗೆ ಅನುಕೂಲವಾಗು ವಂತ ಕೆಲಸವನ್ನು ಮಾಡುವ ಉದ್ದೇಶದಿಂದ ಮಹತ್ವಾಕಾಂಶೆಯ ಗುರಿಯನ್ನಿಟ್ಟುಕೊಂಡು ಅಧ್ಯಾಯನವನ್ನು ಮಾಡುತ್ತಿದ್ದೆ, ನ್ಯಾಷನಲ್ ಇಂಟರ್ ನ್ಯಾಷನಲ್ ರೆಫರೆನ್ಸ್ ಬುಕ್‌ಗಳನ್ನು ಓದಲು ನನ್ನ ಸಮಯವನ್ನು ಮೀಸಲಿಟ್ಟಿದ್ದೆ, ನನ್ನ ಹಿತೈಷಿಗಳಾದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಉಪಾಧ್ಯಕ್ಷರು ತಾಂತ್ರಿಕ ಮಹಾ ವಿದ್ಯಾಲಯವು ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಕೇಂದ್ರವಾಗಬೇಕೆಂದು ಅವರ ಅಭಿಪ್ರಾಯ ಮತ್ತು ಸಲಹೆ ನೀಡಿದರು ಎಂದರು.

ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಮಾರ್ಗದರ್ಶನ ಶಿಬಿರವನ್ನು ಏರ್ಪಡಿಸಿದ್ದು, ವಿದ್ಯಾರ್ಥಿಗಳು ಮಹಾತ್ವಾಕಾಂಶೆಯನ್ನು ಇಟ್ಟು ಕೊಂಡು ನಿರಂತರ ಅಧ್ಯಾಯನದ ಮೂಲಕ ಕನಸುಗಳನ್ನು ನನಸು ಮಾಡುವಂತಹ ಪ್ರಯತ್ನ ನಿಮ್ಮದಾಗಬೇಕು ಎಂದರು.

ಕೃಷಿಕ್ ಸರ್ವೋದಯ ಫೌಂಡೇಶನ್‌ನ ಗೌರವಾನ್ವಿತ ಡಾ! ವೈ.ಕೆ.ಪುಟ್ಟಸ್ವಾಮಿಗೌಡ ರವರು ೧೯೯೨ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯನ್ನು ಬೆಂಗಳೂ ರಿನಲ್ಲಿ ಪ್ರಾರಂಭಿಸಿ, ಬಾಲಗಂಗಾ ಧರನಾಥ ಮಹಾ ಸ್ವಾಮಿಗಳ ಉಪಸ್ಥಿತಿಯಲ್ಲಿ ಎಸ್.ಎಂ.ಕೃಷ್ಣ ರವರು ಶಂಕುಸ್ಥಾಪನೆ ನೆರೆವೇರಿಸಿ ದ್ದರು, ಸ್ಪರ್ಧಾತ್ಮಕ ದಿನಗಳಲ್ಲಿ ಐಎಎಸ್/ಕೆಎಎಸ್ ಪರೀಕ್ಷೆಗಳಿಗೆ ಹಾಜರಾಗುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಉದ್ದೇಶದಿಂದ, ಮೈಸೂರು, ಹಾಸನ, ತುಮಕೂರು, ಮಡಿಕೇರಿ ಮತ್ತು ಚಿಕ್ಕಮಗಳೂರು ಸೇರಿದಂತೆ ೫ ಜಿಲ್ಲೆಗಳಲ್ಲಿ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಪ್ರಾರಂ ಭಿಸಲಾಯಿತೆಂದು ತಿಳಿಸಿದರು.

ವಿದ್ಯಾರ್ಥಿಗಳ ಅಧ್ಯಾಯನ ಮತ್ತು ಭವಿಷ್ಯದ ಚಿಂತನೆ ಪದವಿ ಹಂತಕ್ಕೆ ಮುಗಿಸದೆ, ತಮ್ಮ ಆಸಕ್ತಿಯಾನುಸಾರ ಜೀವನದಲ್ಲಿ ಮಹತ್ತರ ಸಾಧನೆಯ ಜತೆಗೆ ಸಮಾಜದ ಉನ್ನತ ಸ್ಥಾನವನ್ನೇರಿ ಸಮಾಜ ಸೇವೆಯನ್ನು ಮಾಡುವ ಮಹತ್ವಾಕಾಂಶೆಯನ್ನು ಹೊಂದಬೇಕು ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಏನಾದರು ಹೊಸದನ್ನು ಮಾಡುವುದರ ಬಗ್ಗೆ ಚರ್ಚಿಸಿದ ಸಂದರ್ಭದಲ್ಲಿ, ಉನ್ನತ ಹುದ್ದೆಗಳು ಹಣವಂತರ ಪಾಲಾಗದೆ, ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಯ ವಿದ್ಯಾರ್ಥಿಗಳಿಗೂ ಹಾಗೂ ವಿದ್ಯಾವಂತ ವಿದ್ಯಾರ್ಥಿಗಳ ಸ್ವತ್ತಾಗಬೇಕು ಎಂಬ ಉದ್ದೇಶದಿಂದ ಕೃಷಿಕ್ ಫೌಂಡೇಶನ್ ಅವರನ್ನು ಸಂಪರ್ಕ ಮಾಡಿ ತಿಮ್ಮೇಗೌಡರ ಮಾರ್ಗದರ್ಶನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಜೆವಿಎಸ್ ಶಾಲೆಯ ಆವರಣದಲ್ಲಿ ಜಾಗವನ್ನು ನೀಡಲಾಯಿತೆಂದು ತಿಳಿಸಿದರು.

ವಿದ್ಯಾರ್ಥಿಗಳು ನಿಮ್ಮ ೧೫ ವರ್ಷಗಳ ವಿದ್ಯಾರ್ಥಿ ಜೀವನ ಫಲ ನೀಡಬೇಕಾದರೆ ಉನ್ನತ ಅಧಿಕಾರವನ್ನು ಹಿಡಿಯಬೇಕು, ನಿಮ್ಮ ಕುಟುಂಬದ ಹೆಸರನ್ನು ರಾಜ್ಯ ಮತ್ತು ದೇಶದಲ್ಲಿ ಗುರುತಿಸು ಕೊಳ್ಳುವ ಸಾಧನೆ ಮಾಡಬೇಕು, ಅಂಬೆಗಾಲಿನಿಂದ ಪ್ರಾರಂಭ ವಾಗಿರುವ ಕೃಷಿಕ್ ಫೌಂಡೇಶನ್ ಒಂದು ಜಾತಿಗೆ, ಸಂಸ್ಥೆಗೆ ಸೀಮಿತವಾಗದೆ ಪ್ರತಿಯೊಂದು ಜನಾಂಗದ ಬಡ ವಿದ್ಯಾರ್ಥಿಗಳು ರೈತರ ಮಕ್ಕಳಿಗೂ ಇದರ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಪ್ರಾಂಭಿಸಲಾಗಿದೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಅನುಕೂಲಗಳನ್ನು ಜಿಲ್ಲಾ ಒಕ್ಕಲಿಗರ ಸಂಘದಿಂದ ಮಾಡುತ್ತದೆ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ ಯುವಕರು ಅನೇಕ ಕಲ್ಪನೆ ಮತ್ತು ಕನಸ್ಸನ್ನು ಹೊಂದಿರುತ್ತಾರೆ, ಆ ಕನಸ್ಸನ್ನು ನನಸು ಮಾಡಿಕೊಳ್ಳುವ ದಾರಿ ತಿಳಿಯದೆ ಚರ್ಚೆ ಮಾಡುತ್ತಿರುತ್ತಾರೆ, ಅಂತವರ ಮುಂದಿನ ಭವಿಷ್ಯದ ದೃಷ್ಟಿಯಿಂದ ಮಾನಸಿಕವಾಗಿ ದೃಡಗೊಳಿಸಲು ಇಂದಿನ ಕಾರ್ಯಕ್ರಮ ಅನುಕೂ ಲವಾಗಲಿದೆ, ತಾಳ್ಮೆಯಿಂದ ಮನಸ್ಸಿಟ್ಟು ಭಾಗವಹಿಸಿ ಅರ್ಥ ಮಾಡಿಕೊಂಡಲ್ಲಿ ಈ ದಿನ ನಿಮ್ಮ ಜೀವನದ ಅತಿ ಅಮೂಲ್ಯ ದಿನವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಕೃಷ್ಣೇಗೌಡ, ಎಐಟಿ ರಿಜಿಸ್ಟರ್ ಡಾ.ಸಿ.ಕೆ.ಸುಬ್ಬರಾಯ್, ಕಾಫಿಬೆಳೆಗಾರರಾದ ಕೆ.ಮೋಹನ್, ಡಾ. ಹೇಮಚಂದ್ರ, ಎಐಟಿ ಪ್ರಾಂಶುಪಾಲ ಜಯದೇವ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ರಾದ ಲಕ್ಷ್ಮಣ್‌ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶರ್ವಾಣಿ ಪ್ರಾರ್ಥಿಸಿ, ವಿವೇಕಾನಂದ ನಿರೂಪಿಸಿ ದೀಪಕ್ ದೊಡ್ಡಯ್ಯ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು