News Karnataka Kannada
Monday, April 29 2024
ಚಿಕಮಗಳೂರು

ಚಿಕ್ಕಮಗಳೂರು: ಮನೀಶ್ ಸಿಸೋಡಿಯಾ ಬಂಧನ ಖಂಡಿಸಿ ಎ.ಎ.ಪಿ ಪ್ರತಿಭಟನೆ

AAP protests against Manish Sisodia's arrest
Photo Credit : News Kannada

ಚಿಕ್ಕಮಗಳೂರು: ದೇಶದಾದ್ಯಂತ ಆಮ್‌ಆದ್ಮಿ ಪಕ್ಷ ಬೆಳೆಯುತ್ತಿರುವುದನ್ನು ಕಂಡು ಭಯಗೊಂಡಿರುವ ಬಿಜೆಪಿ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ಸಿ ಸೋಡಿಯಾ ಅವರನ್ನು ಬಂಧಿಸಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಹೇಮಂ ತ್‌ಕುಮಾರ್ ಆರೋಪಿಸಿದರು.

ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನೂತನ ನೀತಿಯನ್ನೂ ಇನ್ನೂ ಜಾರಿಗೆ ತಂದಿಲ್ಲ. ಹಲವು ರಾಜ್ಯಗ ಳಲ್ಲಿ ಈ ನೀತಿಯೇ ಇದೆ. ಸುಮಾರು ಒಂದು ವರ್ಷ ಕಾಲ ಕೇಂದ್ರದ ತನಿಖಾಧಿಕಾರಿಗಳು ಸಿಸೋಡಿಯ ಅವರನ್ನು ಗುರಿಯಾಗಿಸಿ ಕೊಂಡು ದಾಳಿ ಮಾಡುತ್ತಿದ್ದರು. ಆದರೆ, ಆರೋಪ ಸಾಬೀತುಪಡಿಸುವಂತ ಯಾವುದೇ ಸಾಕ್ಷಿ ದೊರೆತಿಲ್ಲ. ನಗದು ಅಥವಾ ಯಾವುದೇ ಅಕ್ರಮ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಮ್ಮನ್ನು ಮಣಿಸಲು ಆಮ್ ಆದ್ಮಿ ಒಂದೇ ಏಕೈಕ ಶಕ್ತಿ ಎಂದು ಅರಿತಿ ರುವ ಬಿಜೆಪಿ ನಮ್ಮನ್ನು ರಾಜಕೀಯ ವಾಗಿ ಎದುರಿಸಲು ಸಾಧ್ಯವಾಗದೆ ಅಧಿಕಾರ ದುರ್ಬಳಕೆ ಮಾಡಿಕೊ ಂಡು ಈ ರೀತಿ ತೊಂದರೆ ಕೊಡುತ್ತಿ ದ್ದಾರೆ ಎಂದು ಆರೋಪಿಸಿದರು.

ಎಎಪಿ ರಾಜ್ಯ ಜಂಟಿ ಕಾರ್ಯ ದರ್ಶಿ ಡಾ.ಸುಂದರಗೌಡ ಮಾತ ನಾಡಿ, ಸತ್ಯ, ನ್ಯಾಯ, ಧರ್ಮವನ್ನು ಮೆಟ್ಟಿ ನಿಲ್ಲುವ ಯಾವುದೇ ಪಕ್ಷಗಳು ಸರ್ವನಾಶವಾಗುತ್ತವೆ. ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರ. ಅನ್ಯಾ ಯದ ರಾಜಕಾರಣವನ್ನು ಜನ ಎಂ ದಿಗೂ ಸಹಿಸಿಕೊಳ್ಳುವುದಿಲ್ಲ. ಬಿಜೆ ಪಿಗೆ ಮರ್ಯಾದೆ ಒದ್ದರೆ ಸಿಸೋಡಿ ಯಾ ಅವರನ್ನು ನಾಳೆಯೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಅಭ್ಯರ್ಥಿ ಆಕಾಂಕ್ಷಿ ಎಂ.ಪಿ. ಈರೇಗೌಡ ಮಾತನಾಡಿ ಶಿಕ್ಷಣ ಸಚಿವರೂ ಆಗಿರುವ ಸಿಸೋಡಿಯಾ ಅವರು ಕರ್ನಾಟಕದ ದಾವಣಗೆರೆ ಯಲ್ಲಿ ಮಾ.೪ ರಂದು ನಡೆಯುವ ಎಎಪಿ ಸಮಾವೇಶಕ್ಕೆ ಆಗಮಿಸಲಿದ್ದು ಇಲ್ಲಿನ ಶಿಕ್ಷಣವ್ಯವಸ್ಥೆಯ ದುಸ್ಥಿತಿಯ ಬಗ್ಗೆ ಪ್ರಶ್ನಿಸಬಹುದು ಎಂಬ ಕಾರ ಣಕ್ಕೆ ಬಿಜೆಪಿ ಸಿಬಿಐ ಮೂಲಕ ಅವ ರನ್ನು ಬಂಧಿಸಿದೆ. ಇದು ಖಂಡನೀ ಯ ಎಂದರು. ಎಎಪಿ ಮುಖಂಡರಾದ ಜಮೀಲ್ ಅಹ್ಮದ್, ಅಂತೋಣಿ, ಸಲ್ಮಾನ್ ಮತ್ತಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು