News Karnataka Kannada
Monday, April 29 2024
ಪ್ರವಾಸ

ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು

charmadi ghat
Photo Credit : News Kannada

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುತ್ತಲಿನ ವನರಾಶಿಯ ನಡುವೆ ಸಾಗುವ ಚಾರ್ಮುಡಿ ಘಾಟಿ ರಸ್ತೆಯಲ್ಲಿ ಹತ್ತಾರು ಮಿನಿ ಫಾಲ್ಸ್ ಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಸಾಮಾನ್ಯವಾಗಿ ಮಳೆಗಾಲ ಆರಂಭವಾಯಿತೆಂದರೆ ಸಾಕು ಚಾರ್ಮಾಡಿ ಘಾಟಿಯ ತುಂಬೆಲ್ಲಾ 10ಕ್ಕೂ ಅಧಿಕ ಮಿನಿ ಜಲಪಾತಗಳು ಪ್ರತ್ಯಕ್ಷವಾಗುತ್ತವೆ. ಎಲ್ಲೋ ಹುಟ್ಟಿ ಬೆಟ್ಟದಲ್ಲಿ ಹನಿ ಹನಿಯಾಗಿ ಜಿನುಗಿ, ತದನಂತರ ನೀರ ಹನಿಗಳು ಒಂದೊಂದಾಗಿ ಸೇರಿ  ಎತ್ತರದಿಂದ ಧುಮುಕಿ ಮತ್ತೆ ಒಯ್ಯಾರದಿಂದ ಮೈ ಬಳುಕಿಸಿ ಸಾಗುವ ಜಲಧಾರೆಯನ್ನು ಕಾಣುವುದೇ ಒಂದು ಅದ್ಭುತ. ಇನ್ನು ಗಿಡಗಂಟೆಗಳ ಮೇಲೆಲ್ಲಾ ಸಣ್ಣ ಸಣ್ಣ ಸಿಂಚನ ಮಾಡುತ್ತಾ ಬೃಹದಾಕಾರದ ಬಂಡೆಗಳ ಮೇಲಿಂದ ಹಾಲ್ನೊರೆಯಂತೆ ಪ್ರಪಾತಕ್ಕೆ ಧುಮುಕುವ ಜಲಧಾರೆಗಳು ರಮ್ಯಾದ್ಬುತ ನೋಟವನ್ನು ಸೃಷ್ಟಿಸುತ್ತಿವೆ. ಚಾರ್ಮಾಡಿ ಘಾಟಿಯಲ್ಲಿ ಕಂಡು ಬರುವ ಹತ್ತಾರು ಜಲಧಾರೆಗಳನ್ನು ವೀಕ್ಷಿಸುವುದೇ ಒಂತರಾ ಖುಷಿ.

ಚಿಕ್ಕಮಗಳೂರು – ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕಕೊಂಡಿಯಂತಿರೊ ಚಾರ್ಮಾಡಿ ಘಾಟಿಗೆ ಹೊಂದಿಕೊಂಡಿರೋ ಕೊಟ್ಟಿಗೆಹಾರದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತೆ. ಹೀಗಾಗಿ ಕಳೆದ ಒಂದು ವಾರದ ಮುಂಗಾರು ಮಳೆಯ ಅಬ್ಬರಕ್ಕೆ ಕೊಟ್ಟಿಗೆಹಾರ,ಚಾರ್ಮಾಡಿ ಘಾಟಿ ಸೇರಿದಂತೆ ಸುತ್ತ ಮುತ್ತಲ ಪ್ರದೇಶ ಪ್ರಕೃತಿಯ ಸೌಂದರ್ಯ ಪ್ರತಿಯೊಬ್ಬರನ್ನೂ ಸೆಳೆಯುತ್ತಿದೆ. ಈ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರೋದರಿಂದಾ ಟ್ರಾಫಿಕ್ ಸಮಸ್ಯೆಯೂ ಆಗ ಈಗ ಅಂತಾ ಕಾಣಿಸಿಕೊಳ್ಳುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು