News Karnataka Kannada
Tuesday, April 23 2024
Cricket
ಪ್ರವಾಸ

ಮಾನ್ಸೂನ್‌ನಲ್ಲಿ ಒಮ್ಮೆಯಾದರೂ ಕರ್ನಾಟಕದ ಈ ಸ್ಥಳಗಳಿಗೆ ಭೇಟಿ ನೀಡಲೇಬೇಕು

best places
Photo Credit : By Author

ಪ್ರವಾಸ ಕೆಲವರ ಹವ್ಯಾಸವಾದರೆ, ಇನ್ನೂ ಕೆಲವರಲ್ಲಿ ಮೂಡ್ ಚೇಂಜ್ ಮಾಡಬಲ್ಲ ಮ್ಯಾಜಿಕ್. ಈ ಮಾನ್ಸೂನ್‌ನಲ್ಲಿ ನೀವು ಪ್ರವಾಸಕ್ಕಾಗಿ ಪ್ಲಾನ್ ಮಾಡುತ್ತಿದ್ದರೆ ಕರ್ನಾಟಕದಲ್ಲಿರುವ ಈ ತಾಣಗಳಿಗೆ ತಪ್ಪದೇ ಭೇಟಿ ನೀಡಿ. ಆ ಸ್ಥಳಗಳು ಯಾವುವೆಂದರೆ…

ಜಲಪಾತಗಳ ನಾಡು ಆಗುಂಬೆ: ಜಲಪಾತಗಳ ನಾಡು ಆಗುಂಬೆ ಯು ತನ್ನ ರಮಣೀಯ ಸೌಂದರ್ಯ ಮತ್ತು ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ದಕ್ಷಿಣದ ಚಿರಾಪುಂಜಿ ಎಂತಲೇ ಖ್ಯಾತಿ ಪಡೆದಿರುವ ಆಗುಂಬೆ ಸಹ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಆಗುಂಬೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಂದು ಊರು. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇದು ಕೂಡಾ ಒಂದಾಗಿದೆ. ಈ ಸ್ಥಳವು ಎತ್ತರದ ಜಲಪಾತಗಳು, ಅಳಿವಿನಂಚಿನಲ್ಲಿರುವ ಸಸ್ತನಿಗಳು, ಹಾವುಗಳನ್ನು ಒಳಗೊಂಡಿದೆ. ಪ್ರತ್ಯೇಕವಾಗಿ ಮಳೆಗಾಲದಲ್ಲಿ ನೋಡಲೇಬೇಕಾದ ತಾಣಗಳಲ್ಲಿ ಕರ್ನಾಟಕದ ಆಗುಂಬೆ ಕೂಡ ಒಂದಾಗಿದೆ.

ಹಂಪಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯನ್ನು ಅವಶೇಷಗಳ ನಗರ ಎಂದು ಕರೆಯಲಾಗುತ್ತದೆ. ಇತಿಹಾಸವನ್ನು ಆನಂದಿಸುವ ಪ್ರವಾಸಿಗರು ಕರ್ನಾಟಕದ ಆಳವಾದ ಕಣಿವೆಗಳು ಮತ್ತು ಬೆಟ್ಟಗಳಲ್ಲಿ ಅಡಗಿರುವ ಈ ಸ್ಥಳಕ್ಕೆ ಭೇಟಿ ನೀಡಬಹುದು.

ದಾಂಡೇಲಿ ವನ್ಯಜೀವಿ ಅಭಯಾರಣ್ಯ: ನೀವು ಸಫಾರಿ ಪ್ರಿಯರಾಗಿದ್ದರೆ ಮಾನ್ಸೂನ್‌ನಲ್ಲಿ ದಾಂಡೇಲಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಬಹುದು. ಸುಮಾರು 334.52 ಚದರ ಮೈಲಿಗಳಷ್ಟು ದೊಡ್ಡದಾಗಿರುವ ಈ ತಾಣವನ್ನು ಪ್ರಕೃತಿ ಪ್ರೇಮಿಗಳು ರಿಪೂರ್ಣ ರಜೆಯ ತಾಣವೆಂದು ಭಾವಿಸುತ್ತಾರೆ.

ನಂದಿ ಬೆಟ್ಟ: ನಂದಿ ಬೆಟ್ಟ ಒಂದು ಅದ್ಭುತವಾದ ಪ್ರವಾಸಿ ತಾಣ. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ. ಬೆಂಗಳೂರಿನಿಂದ ನಂದಿ ಬೆಟ್ಟ ಕೇವಲ ೪೫ ಕಿ. ಮೀ ದೂರದಲ್ಲಿದೆ.ಒಂದು ದಿನದ ಪ್ರವಾಸಕ್ಕೆ ಅತ್ಯುತ್ತಮವಾದ ಸ್ಥಳ ಇದಾಗಿದೆ. ಇಲ್ಲಿ ಪುರಾತನವಾದ ಕೋಟೆಯನ್ನು ಕಾಣಬಹುದು. ಇದು ಸುಮುದ್ರಮಟ್ಟದಿಂದ ಸುಮಾರು ೪೮೫೧ ಅಡಿ ಎತ್ತರದಲ್ಲಿದೆ.

ಕೂರ್ಗ್: ಕೂರ್ಗ್ ತನ್ನ ಪ್ರಾಕೃತಿಕ ಸೌಂದರ್ಯದಿಂದ ವಿಶ್ವವಿಖ್ಯಾತಿ ಪಡೆದಿದೆ. ಕೂರ್ಗ್ ನ ಸೊಬಗು ಕಣ್ಣುತುಂಬಿಕೊಳ್ಳಲು ದೇಶದ ನಾನಾ ಮೂಲೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಪ್ರಕೃತಿಯ ವೈಭವಕ್ಕೆ ಸರಿಸಾಟಿ ಬೇರೆ ಯಾವುದು ಇಲ್ಲವೆನೂ ಎಂಬಂತೆ ಭಾಸವಾಗುತ್ತದೆ. ಮಳೆಗಾಲದಲ್ಲಿ ದಟ್ಟವಾದ ಮಂಜಿನಿಂದ ಆವೃತವಾಗಿರುವ ಹಚ್ಚ ಹಸಿರಿನ ಕಾಫಿ ತೋಟಗಳ ಮೇಲೆ ಮಳೆ ಸುರಿಯುತ್ತದೆ. ಇಲ್ಲಿ ಅಬ್ಬೆಫಾಲ್ಸ್ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ಹೊಸ ಸೆರ್ಪಡೆ ಎಂಬಂತೆ ದಕ್ಷಿಣ ಭಾರತದ ಎರಡನೇ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್ ಮಡಿಕೇರಿಯಲ್ಲಿದೆ. ಹಾಗೇ ಗೊಲ್ಡಾನ್ ಟೆಂಪಲ್ ಗೆ ಭೇಟಿ ನೀಡಬದುದು.

ಮುಳ್ಳಯ್ಯನಗಿರಿ
ಚಿಕ್ಕಮಗಳೂರಿನಲ್ಲಿರುವ ಈ ಮುಳ್ಳಯ್ಯನಗಿರಿಯು ಸಮುದ್ರ ಮಟ್ಟದಿಂದ ಸುಮಾರು 1930 ಮೀಟರ್‌ ಎತ್ತರದಲ್ಲಿ ನೆಲೆಸಿದೆ. ದಕ್ಷಿಣ ಭಾರತದ ಅತ್ಯುತ್ತಮವಾದ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಈ ಸ್ಥಳವು ಒಂದು. ಪ್ರಶಾಂತವಾದ ವಾತಾವರಣದಲ್ಲಿ ಪ್ರಕೃತಿಯ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ಶಿಖರವು ಹಸಿರು ಹುಲ್ಲುಗಾವಲು, ಒರಟಾದ ಬಂಡೆಗಳಿಂದ ಅಲಂಕರಿಸಲ್ಪಟ್ಟಿದೆ. .

​ಕೆಮ್ಮಣ್ಣುಗುಂಡಿ ಗಿರಿಧಾಮ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಸುಂದರವಾದ ಗಿರಿಧಾಮವಾಗಿರುವ ಈ ಕೆಮ್ಮಣ್ಣುಗುಂಡಿ ಗಿರಿಧಾಮವು ಅತ್ಯಂತ ಅದ್ಭುತವಾದ ಪ್ರವಾಸಿ ತಾಣವಾಗಿದೆ. ವಿಶೇಷವಾಗಿ ಕೆಮ್ಮಣ್ಣುಗುಂಡಿಯ ಸೌಂದರ್ಯವನ್ನು ಸವಿಯಲು ಮಳೆಗಾಲದಲ್ಲಿ ಭೇಟಿ ನೀಡಲೇಬೇಕು. ಇಲ್ಲಿ ಹಲವಾರು ಆಕರ್ಷಣೆಗಳಿಂದ ತುಂಬಿದೆ. ನೀವು ಸಾಹಸ ಚಟುವಟಿಕೆಗಳ ಜೊತೆಗೆ, ಗುಲಾಬಿ ಉದ್ಯಾನ, ಹೆಬ್ಬೆ ಜಲಪಾತ, ಝಡ್ ಪಾಯಿಂಟ್ ಸೇರಿದಂತೆ ಇನ್ನು ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು