News Karnataka Kannada
Friday, April 19 2024
Cricket
ಚಿಕಮಗಳೂರು

ಬಸ್​​ ಬ್ರೇಕ್​ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಚಾರ್ಮಾಡಿ ಘಾಟ್​​ನಲ್ಲಿ ಬ್ರೇಕ್​ ಇದ್ದಕ್ಕಿಂದ್ದಂತೆ ಫೇಲ್ ಆಗಿದ್ದು, ಚಾಲಕನ‌ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
Photo Credit : News Kannada

ಚಿಕ್ಕಮಗಳೂರು: ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಚಾರ್ಮಾಡಿ ಘಾಟ್​​ನಲ್ಲಿ ಬ್ರೇಕ್​ ಇದ್ದಕ್ಕಿಂದ್ದಂತೆ ಫೇಲ್ ಆಗಿದ್ದು, ಚಾಲಕನ‌ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಬ್ರೇಕ್  ಫೇಲ್ ಆಗಿದ್ದು ಗೊತ್ತಾಗ್ತಿದ್ದಂತೆ ಗಾಬರಿಯಾಗದ ಡ್ರೈವರ್, ಪ್ರಯಾಣಿಕರಿಗೆ ಧೈರ್ಯದಿಂದ ಮತ್ತು ಜಾಗೃತರಾಗಿ ಇರುವಂತೆ ಮಾಹಿತಿ ನೀಡಿದ್ದಾರೆ.

ನಂತರ ಯಾವುದಾದರೂ ಮೂರಿ ಅಥವಾ ಧರೆಗೆ ಗುದ್ದಿ ನಿಲ್ಲಿಸುವುದಾಗಿ ತಿಳಿಸಿದ್ದಾರೆ. ಅಂತೆಯೇ ಚಾಲಕ ಸಂತೋಷ್​ ಅವರು ಬಸ್​ ಅನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸೇಫ್ ಆಗಿದ್ದಾರೆ. ಚಾಲಕ ಸಂತೋಷ್​​ ಸಮಯ ಪ್ರಜ್ಞೆಗೆ ಪ್ರಯಾಣಿಕರು ಹಾಗೂ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಸ್ಸಿನಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು