News Karnataka Kannada
Monday, April 29 2024
ಅಡುಗೆ ಮನೆ

ಸಖತ್ ಟೇಸ್ಟಿಯಾದ ಇಡ್ಲಿ ಮಂಚೂರಿ ನೀವು ಟ್ರೈ ಮಾಡಿ

ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಇಡ್ಲಿ ಮಂಚೂರಿಯನ್ ಒಮ್ಮೆ ಟ್ರೈ ಮಾಡಬಹುದು. ನಿಮ್ಮ ಮನೇಲಿ ಬೆ
Photo Credit : News Kannada

ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಇಡ್ಲಿ ಮಂಚೂರಿಯನ್ ಒಮ್ಮೆ ಟ್ರೈ ಮಾಡಬಹುದು. ನಿಮ್ಮ ಮನೇಲಿ ಬೆಳಗ್ಗೆ ಮಾಡಿರೋ ಇಡ್ಲಿ ಉಳಿದಿದ್ದರೆ ಸಂಜೆಗೆ ಟೀ ಜೊತೆ ಸವಿಯಲು ಇಡ್ಲಿ ಮಂಚೂರಿಯನ್ ಮಾಡಿ ನೋಡಬಹುದು.

ಬೇಕಾಗುವ ಸಾಮಗ್ರಿಗಳು:
* ಇಡ್ಲಿ- 5
* ಮೈದಾ – ಅರ್ಧ ಕಪ್
* ಕಾರ್ನ್ ಫ್ಲೋರ್- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಕೆಂಪು ಮೆಣಸಿನ ಪುಡಿ-2 ಚಮಚ
* ಕರಿಮೆಣಸಿನ ಹುಡಿ-1 ಟೀಸ್ಪೂನ್
* ಸೋಯಾ ಸಾಸ್- 1 ಚಮಸ
* ಅಡುಗೆ ಎಣ್ಣೆ- ಅರ್ಧ ಕಪ್
* ಈರುಳ್ಳಿ – 1
* ಶುಂಠಿ- ಸ್ವಲ್ಪ
* ಬೆಳ್ಳುಳ್ಳಿ- 1
* ಲವಂಗ- 2
* ಕ್ಯಾಪ್ಸಿಕಂ- 1
* ಟೊಮೆಟೊ ಸಾಸ್- 1 ಚಮಚ
* ಚಿಲ್ಲಿ ಸಾಸ್- 2 ಚಮಚ
* ವಿನೆಗರ್ -2 ಚಮಚ
* ಸೋಯಾ ಸಾಸ್ – 1 ಚಮಚ ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

ಮಾಡುವ ವಿಧಾನ: ಮೊದಲಿಗೆ ಇಡ್ಲಿಗಳನ್ನು 4 ಭಾಗಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ. ದೊಡ್ಡ ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪುಮೆಣಸಿನ ಪುಡಿ, ಕರಿಮೆಣಸು ಮತ್ತು ಸೋಯಾ ಸಾಸ್ ಹಾಕಿ, ಒಟ್ಟಿಗೆ ಮಿಶ್ರಣ ಮಾಡಿ. ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇಡ್ಲಿ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಫ್ರೈ ಮಾಡಿ.

ಒಂದು ಪಾತ್ರೆಯಲ್ಲಿ ಅಡುಗೆಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ಟೊಮೆಟೊ ಸಾಸ್, ಚಿಲ್ಲಿ ಸಾಸ್, ಉಪ್ಪು, ಸೋಯಾ ಸಾಸ್, ವಿನೆಗರ್ ಸೇರಿಸಿ, ಚೆನ್ನಾಗಿ ಬೇಯಿಸಿರಿ. ನಂತರ ಹುರಿದ ಇಡ್ಲಿಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದರೆ ಇಡ್ಲಿ ಮಂಚೂರಿ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು