News Karnataka Kannada
Thursday, May 02 2024
ಚಿಕಮಗಳೂರು

ಕೊಟ್ಟಿಗೆಹಾರ ಮುಖ್ಯವೃತ್ತದಲ್ಲಿ ಅನುಮಾನ ಮೂಡಿಸಿದ ರಕ್ತದ ಕಲೆ

Blood stains on the main circle of kottigehara that raised suspicions
Photo Credit : News Kannada

ಕೊಟ್ಟಿಗೆಹಾರ: ಕೊಟ್ಟಿಗೆಹಾರ ವೃತ್ತದ ಬಳಿ ರಸ್ತೆಯ ಮೇಲೆ ರಕ್ತದ ಕಲೆಯ ಗುರುತುಗಳು ಕಂಡು ಬಂದಿದ್ದು ಅನುಮಾನಕ್ಕೆ ಕಾರಣವಾಗಿದೆ.

ಕೊಟ್ಟಿಗೆಹಾರದಲ್ಲಿ ನಾಲ್ಕೈದು ಅಡಿ ವಿಸ್ತಾರದಲ್ಲಿ ರಕ್ತದ ಕಲೆ ಕಂಡು ಬಂದಿದ್ದು ರಕ್ತದ ಗುರುತು ಕಾಣದಿರುವ ಹಾಗೇ ಸಗಣ ಯಿಂದ ಸಾರಿಸಲಾಗಿದ್ದು ಅನುಮಾನಕ್ಕೆ ಕಾರಣವಾಗಿದೆ. ರಾತ್ರಿ ಸಮಯ ದಲ್ಲಿ ಈ ನಡೆದ ಯಾವುದೋ ಘಟನೆ ಯಿಂದ ರಸ್ತೆಯಲ್ಲಿ ರಕ್ತದ ಕಲೆ ಮೂಡಿದೆ.

ಕೊಟ್ಟಿಗೆಹಾರ ಮುಖ್ಯವೃತ್ತದ ಬಳಿ ಅಂಗಡಿ ಮುಂಗಟ್ಟುಗಳಿದ್ದು ರಾತ್ರಿ ೧೦ ರವರೆಗೆ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ರಾತ್ರಿ ೧೧ ಗಂಟೆಯವರೆಗೂ ಜನಸಂಚಾರವಿರುತ್ತದೆ. ಬೆಳಿಗ್ಗೆ ೫ ಗಂಟೆಗೆ ಅಂಗಡಿ ಮುಂಗಟ್ಟುಗಳು ತೆರೆಯುತ್ತವೆ. ಈ ಅಂಗಡಿ ಮುಂಗಟ್ಟುಗಳ ವರ್ತಕರ ಗಮನಕ್ಕೆ ಬಾರದಂತೆ ಈ ಘಟನೆ ನಡೆದಿದ್ದು ನಡುರಾತ್ರಿ ಯಾವುದೋ ಘಟನೆಯಿಂದ ರಸ್ತೆಯಲ್ಲಿ ರಕ್ತ ಹರಿದಿದ್ದು ರಕ್ತ ಹರಿದಿರುವುದು ತಿಳಿಯದಿರಲು ಸಗಣಿಯನ್ನು ರಕ್ತದ ಮೇಲೆ ಸಾರಿಸಲಾಗಿದೆ. ಆದರೂ ಅಲ್ಲಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು