ಕೊಡಗು : ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಕೊಡಗಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಹೊಸ ವರ್ಷಚರಣೆಗೆ ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ.

ಇನ್ ಡೋರ್ ನಲ್ಲಿ ಮಾತ್ರ ಹೆಚ್ಚಿನ ಸೌಂಡ್ ಬಳಸಲು ಅವಕಾಶವಿದೆ. 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳ ಬಳಕೆ ಇರಲಿದೆ. 10 ಗಂಟೆಯ ನಂತರ ಧ್ವನಿ ವರ್ಧಕಗಳಿಗೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೊಸ ವರ್ಷ ಮಾಡಿ, ಸೀಮಿತ ಡೆಸಿಬಲ್ ನಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶವಿದೆ.

ಕುಡಿದು ವಾಹನ ಚಾಲನೆ ಮಾಡುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾರ್ಟಿ ಹಾಲ್ ನಲ್ಲಿ ಸಿಮಿತ ಸೌಂಡನಲ್ಲಿ ಡಿಜೆ ಬಳಕೆಗೆ ಅವಕಾಶವಿದೆ. ಕಾನೂನು ಉಲ್ಲಂಘನೆ ಆದಲ್ಲಿ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಮಾದಕ ವಸ್ತುಗಳು ಬಳಕೆ ಆಗದಂತೆ ಕೂಡ ಕ್ರಮ ವಹಿಸಲಾಗಿದೆ. ಮಾದಕ ವಸ್ತುಗಳ ಬಳಕೆ ಸೂಚನೆ ಬೆನ್ನಲೆ ಕೆಲವರನ್ನ ವಿಚಾರಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ರೇವ್ ಪಾರ್ಟಿ, ಮಾದಕ ವಸ್ತುಗಳ ಪಾರ್ಟಿ ಆಯೋಜಿಸಿದಲ್ಲಿ NOC ,ಕ್ಯಾನ್ಸಲ್ ಮಾಡಲಾಗುತ್ತದೆ.

ಹೋಂ ಸ್ಟೇಗಳ ಸಂಪೂರ್ಣ ಜವಬ್ದಾರಿ ಹೋಂ ರೆಸಾರ್ಟ್ ಮಾಲೀಕರದ್ದು, ನಿಯಮ ಮೀರಿದಲ್ಲಿ ಮಾಲೀಕರೆ ನೇರ ಹೊಣೆಮಾಡಲಾಗುವುದು. ಅನುಮಾನ ಬಂದಲ್ಲಿ ಕೂಡ ಯಾವುದೇ ಕ್ಷಣದಲ್ಲಿ ತಪಾಸಣೆ ನಡೆಸಲಾಗುವುದು. ಮಡಿಕೇರಿಯಲ್ಲಿ ಕೊಡಗು ಎಸ್ಪಿ ರಾಮರಾಜನ್ ಖಡಕ್ ಸೂಚನೆ ನೀಡಿದ್ದಾರೆ.

ಪರ್ಮಿಟ್ ಇಲ್ಲದೆ ಲಿಕ್ಕರ್ ಇಟ್ಟಿದಲ್ಲಿ ಅವರ ವಿರುದ್ದವು ಕ್ರಮ ಕೈಗೊಳ್ಳಲಾಗುವುದು. ಟ್ರಾಫಿಕ್ ಸಮಸ್ಯೆಗೂ ಹಲವು ಪೊಲೀಸರ ನಿಯೋಜನೆ ಮಾಡಲಾಗಿದೆ. ಮಾದಕ ವಸ್ತು ಪಾರ್ಟಿ ಮಾಡುವ ಸೂಚನೆ ಬೆನ್ನಲ್ಲೇ ಇಬ್ಬರ ವಿಚಾರಣೆ ಮಾಡಲಾಗಿದೆ. ನಗರದಲ್ಲಿ ಪೋಲಿಸ್ ಬಂದೋಬಸ್ತ್ ಹೆಚ್ಚಾಗಿದ್ದು, ಗಸ್ತುವಾಹನ ನಿಯೋಜಿಸಲಾಗಿದೆ. ಕಾನೂನು ಮೀರಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮದ ಎಚ್ಚರಿಕೆಯನ್ನು ಕೊಡಗು ಎಸ್ಪಿ ರಾಮರಾಜನ್ ನೀಡಿದ್ದಾರೆ.