ಮೈಸೂರು : ನ್ಯೂ ಇಯರ್ ಸಂಭ್ರಮಕ್ಕೆ ಕೊಡಗು ಜಿಲ್ಲೆ ಸಜ್ಜಾಗಿದ್ದು, ಹೊಸ ವರ್ಷಕ್ಕೆ ಕೊಡಗು ಜಿಲ್ಲೆಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಕೊಡಗಿನ ಪ್ರವಾಸಿ ತಾಣಗಳಲ್ಲಿ ರಶ್ ಆಗಿದೆ.
ಕಣ್ಣು ಹಾಯಿಸಿದಲ್ಲೆಲ್ಲಾ ಜನವೋ ಜನ ಇದ್ದಾರೆ. ಮಂಜಿನ ನಗರಿಯ ಪಾರ್ಕ್‌ನಲ್ಲಿ ಪುಟಾಣಿಗಳು ಆಟವಾಡುತ್ತಿದ್ದು, ತಂಗಾಳಿಗೆ ಮೈಯೊಡ್ಡಿ ಮೈಮರೆತು ಪ್ರವಾಸಿಗರು ಕುಳಿತಿದ್ದಾರೆ. ಹಚ್ಚ ಹರಿಸಿನಿಂದ ಕಂಗೊಳಿಸೋ ಗಿರಿಕಾನನ, ನಿಸರ್ಗದ ಸೌಂದರ್ಯಕ್ಕೆ ಟೂರಿಸ್ಟ್ ಫಿದಾ ಆಗಿದ್ದಾರೆ.

ಮಡಿಕೇರಿಯ ರಾಜಾಸೀಟ್ ನಲ್ಲಿ ಕಳೆದ ಒಂದು ವಾರಗಳಿಂದ ಈ ದೃಶ್ಯ ಕಂಡುಬರುತ್ತಿದೆ. ಇಯರ್ ಎಂಡ್‌ನಲ್ಲಿ ರಾಜಾಸೀಟ್ ಪ್ರವಾಸಿಗರಿಂದ ಗಿಜಿಗುಡುತ್ತಿದೆ. ಕೊಡಗು ಜಿಲ್ಲೆಯ ರಾಜಾಸೀಟ್, ಅಬ್ಬಿಫಾಲ್ಸ್, ದುಬಾರೆ ಆನೆ ಶಿಬಿರ, ಚಿಕ್ಲಿ ಹೊಳೆ, ಗದ್ದುಗೆ, ಮಲ್ಲಳ್ಳಿ ಫಾಲ್ಸ್, ಇರ್ಪು ಫಾಲ್ಸ್, ಕಬ್ಬೆ ಬೆಟ್ಟ ಸೇರಿ ಪ್ರವಾಸಿ ಸ್ಥಳಗಳು ಭರ್ತಿಯಾಗಿದೆ.
ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಕೊಡಗು ಜಿಲ್ಲೆ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಹೊಸ ವರ್ಷಾಚರಣೆಗೆ ಸ್ನೇಹಿತರು, ಫ್ಯಾಮಿಲಿಗಳೊಂದಿಗೆ ತಂಡೋಪ ತಂಡವಾಗಿ ಟೂರಿಸ್ಟ್ ಎಂಟ್ರಿ ಕೊಟ್ಟಿದ್ದಾರೆ.

