News Karnataka Kannada
Sunday, May 12 2024
ಉತ್ತರಕನ್ನಡ

ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ ನೂತನ ಕಮಾಂಡರ್ ಆಗಿ ಮನೋಜ್ ಬಾಡ್ಕರ್ ನೇಮಕ

Manoj Badkar appointed as new Commander of Indian Coast Guard
Photo Credit : By Author

ಕಾರವಾರ: ಕಾರವಾರ ಮೂಲದ ಮನೋಜ ಬಾಡ್ಕರ ಅವರು ಭಾರತೀಯ ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ನೂತನ ಕಮಾಂಡರ್ ಆಗಿ ನೇಮಕಗೊಂಡಿದ್ದಾರೆ.

ಮುಂಬೈನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಇನಸ್ಪೆಕ್ಟರ್ ಆಫ್ ಜನರಲ್ ಆಗಿದ್ದು ಬಡ್ತಿ ಪಡೆದ ಮನೋಜ ವಷಂತ ಬಾಡ್ಕರ ಅವರು ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ಅವರು ಈಗ ಮಹಾರಾಷ್ಟç, ಗೋವಾ, ಕೇರಳ, ಲಕ್ಷದ್ವೀಪ ದ್ವೀಪಗಳು ಮತ್ತು ಕರ್ನಾಟಕ ಸೇರಿದಂತೆ ಇಡೀ ಪಶ್ಚಿಮ ಪ್ರದೇಶಕ್ಕೆ ಕೋಸ್ಟ್ ಗಾರ್ಡ್ ಸೇವೆಯ ಮುಖ್ಯಸ್ಥರಾಗಿರುತ್ತಾರೆ.

ಅವರು 2006 ರಿಂದ 2008 ರವರೆಗೆ ಕರ್ನಾಟಕ ಹಾಗೂ 2013 ರಿಂದ 2018 ರವರೆಗೆ ಗೋವಾದ ರಾಜ್ಯಗಳಿಗೆ ಭಾರತೀಯ ಕೋಸ್ಟ್ ಗಾರ್ಡ್ನ ಮುಖ್ಯಸ್ಥರಾಗಿದ್ದರು. 2018 ರಲ್ಲಿ ಐಜಿ ಶ್ರೇಣಿಗೆ ಬಡ್ತಿ ಪಡೆದಿದ್ದ ಅವರು ದೆಹಲಿಯಲ್ಲಿ ಸಿಜಿಎಸ್‌ಬಿ ಅಧ್ಯಕ್ಷರಾಗಿ ನೇಮಕಗೊಂಡು ಕರ್ತವ್ಯದಲ್ಲಿದ್ದರು. ಇದೀಗ ಮನೋಜ ಬಾಡ್ಕರ್ ಅವರು ಭಾರತೀಯ ಕೋಸ್ಟ್ ಗಾರ್ಡ್ ಪಶ್ಚಿಮವಲಯದ ನೂತನ ಕಮಾಂಡರ್ ನೇಮಕಗೊಂಡು ಕಾರವಾರ ಹಾಗೂ ಇಡೀ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

ಕಾರವಾರದ ಸೇಂಟ್ ಜೋಸೆಫ್ ಪ್ರೌಢಶಾಲೆ ಮತ್ತು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾದ್ದ ಇವರು ಕಾರವಾರಕ್ಕೆ ನಿಯಮಿತವಾಗಿ ಆಗಮಿಸಿ ಇಲ್ಲಿನ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು