ಕಾರವಾರ: ಕುಮಟಾದ ಯಕ್ಷಗಾನ ಕಲಾವಿದ ಸುಬ್ರಮಣ್ಯ ಅವರ ಮಡಿಲಿಗೆ ರಾಜ್ಯೋತ್ಸವ ಪ್ರಶಸ್ತಿ

ಕಾರವಾರ: ಯಕ್ಷಗಾನ ಕಲಾವಿದ ಕುಮಟಾ ತಾಲೂಕಿನ ಧಾರೇಶ್ವರದ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಮೂಲಕ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದಂತಾಗಿದೆ.

ಕಳೆದ ಅನೇಕ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಬ್ರಮಣ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಜಿಲ್ಲೆಗೆ ಹರ್ಷದ ಸಂಗತಿಯಾಗಿದೆ. ಅವರ ವಿದ್ಯಾ­ಭ್ಯಾ­ಸವು ಪ್ರಥಮ ಪಿಯು­ಸಿಗೆ ಆಗಿದೆ. ಆಮೇಲೆ ಹೊಟ್ಟೆ­ಪಾಡಿಗಾಗಿ ಎಲೆ­ಕ್ಟ್ರಿಕ್‌ ಕೆಲಸ ಕಲಿತರು. ಯಕ್ಷಗಾನದ ಭಾಗ­ವ­ತರಾದ ಅವರ ಅದೇ ಕ್ಷೇತ್ರದಲ್ಲಿ ಮಿಂಚಿದರು.

ಸಂಗೀ­ತ­ಗಾ­ರ­ನಾ­ಗ­ಬೇ­ಕೆಂ­ದಿದ್ದ ಸುಬ್ರಮಣ್ಯ ಅವರಿಗೆ ಯಕ್ಷ­ಗಾ­ನದ ಭಾಗ­ವ­ತ­ನಾ­ಗ­ಬೇ­ಕಾದ ಸ್ಥಿತಿ ಬಂತು. ದಿ.ಕಾಳಿಂಗ ನಾವುಡ, ಚಿಟ್ಟಾಣಿ ರಾಮ­ಚಂದ್ರ ಹೆಗಡೆ, ದಿ. ದುರ್ಗಪ್ಪ ಗುಡಿ­ಗಾ­ರರು ನನಗೆ ಉತ್ತಮ ಅವ­ಕಾ­ಶ­ಗ­ಳನ್ನು ನೀಡುತ್ತ ನನ್ನ ಬೆಳ­ವ­ಣಿ­ಗೆಗೆ    ಕಾರ­ಣ­ರಾ­ದರು.

ವಿಭಿ­ನ್ನ­ತೆ­ಯನ್ನು ಬಯ­ಸುವ ಮನಸ್ಸು ಸುಬ್ರಮಣ್ಯ ಅವರದ್ದಾಗಿತ್ತು. ಸಂಗೀ­ತ­ಗಾ­ರ­ನಾ­ಗುವ ಕನ­ಸನ್ನು ಇಟ್ಟು­ಕೊಂಡು  ಯಕ್ಷ­ಗಾ­ನ­ದಲ್ಲೂ ಸಂಗೀ­ತದ ರುಚಿ­ಯನ್ನು ಕಾಣತೊ­ಡ­ಗಿದರು . ಹೃದ­ಯಕ್ಕೆ ಹತ್ತಿ­ರ­ವಿ­ರುವ ಪೌರಾ­ಣಿಕ ಪ್ರಸಂ­ಗ­ಗಳು   ಅನಿ­ವಾ­ರ್ಯ­ವಾಗಿ ಕಡಿಮೆ ಆಗುತ್ತ ಬಂದವು. ಜನ ಬಯ­ಸುವ ಪ್ರಸಂಗ­ಗ­ಳನ್ನು ನೀಡ­ಬೇ­ಕಾದ ಸ್ಥಿತಿ ನಿರ್ಮಾ­ಣವಾ­ಯಿತು. ಸಾಮಾ­ಜಿಕ ಪ್ರಸಂ­ಗ­ಗಳು ಕಿಸೆಗೆ ಹತ್ತಿ­ರ­ವಾ­ಯಿತು. ಅವರು ಮಾಡಿದ ಪ್ರಯೋ­ಗ­ಗ­ಳನ್ನು ಜನ ಒಪ್ಪಿ­ಕೊಂ­ಡರು. ಅಷ್ಟರದಲ್ಲಿ ಯಕ್ಷ­ಗಾ­ನ­ದಲ್ಲಿ ಒಂದು ಹಂತಕ್ಕೆ ಬೆಳೆದಿ­ದ್ದೇನೆ. ಕಳೆದ ವರ್ಷ ಶ್ಯಾಮಲಾ ಭಾವೆ ಅವರ ಶಿಷ್ಯ­ನಾಗಿ ಸಂಗೀತ ಕಲಿ­ಯಲು     ಪ್ರಾರಂ­ಭಿ­ಸಿ­ದ್ದಾರೆ.

Sneha Gowda

Recent Posts

ಮೈಸೂರಿನ ಸ್ಪಂದನ ಸೇವಾ ಸಂಸ್ಥೆಯಿಂದ ʼಅಕ್ಷಯ ಅನ್ನʼ ಕಾರ್ಯಕ್ರಮ

ಅಕ್ಷಯ ತೃತೀಯ ಅಂದ್ರೆ ಜನರು ಒಡವೆ ವಸ್ತ್ರ ತಗೋಬೇಕು. ಇದರಿಂದ ನಮ್ಮ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಈ‌…

6 mins ago

ಮರುಬಿಡುಗಡೆಗೆ ತಯಾರಾಗಿದೆ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ ‘ಎ’ ಸಿನೆಮಾ

ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು…

11 mins ago

ಬಸವೇಶ್ವರ ಉದ್ಯಾನವನಕ್ಕೆ ‘ಸಾಂಸ್ಕೃತಿಕ ನಾಯಕ’ ಮರು ನಾಮಕರಣ

ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಬಸವೇಶ್ವರ ಉದ್ಯಾನವನಕ್ಕೆ 'ಸಾಂಸ್ಕೃತಿಕ ನಾಯಕ', ಮರು ನಾಮಕರಣದ ಉದ್ಘಾಟನೆಯನ್ನು ಕರ್ನಾಟಕ ಕಾಲೇಜಿನ ಪೌರ ಕಾರ್ಮಿಕ ಮಹಿಳೆ…

17 mins ago

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಾಟ: ಚಾಲಕನಿಗೆ ತರಾಟೆ

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ದ ಘಟನೆಯೊಂದು ಉಡುಪಿ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

27 mins ago

ಕರ್ನಾಟಕದ ಎಲ್ಲಾ ಭಾಷೆಗಳಲ್ಲಿಯೇ ವೈಶಿಷ್ಟ್ಯ ಪಡೆದ ಲಂಬಾಣಿ ಭಾಷೆ

ರಾಜ್ಯದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಏಳು ಭಾಷೆಗಳ ಪೈಕಿ ಲಂಬಾಣಿ ಭಾಷೆಯೂ ಒಂದಾಗಿದ್ದು, ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಈ…

37 mins ago

ಜಿಲ್ಲಾಧಿಕಾರಿಗಳಿಂದ ವಿಶ್ವಗುರು ಬಸವಣ್ಣನಿಗೆ ಪುಷ್ಪ ನಮನ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891 ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ…

54 mins ago