ವೃಕ್ಷಮಾತೆ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು

ಕಾರವಾರ: ವೃಕ್ಷಮಾತೆ ಎಂದೇ ಪ್ರಸಿದ್ಧರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರಾಗಿದ್ದು,  ವಯೋಸಹಜ ಕಾಯಿಲೆ, ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದಾರೆ.

ಅವರನ್ನು ಕಾರವಾರದ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಅವರ ಕೆಲಸವನ್ನು ಮೆಚ್ಚಿ ಭಾರತ ಸರ್ಕಾರವು 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಯಾವುದೇ ಜಾತಿಯ ಮರಗಳ ತಾಯಿ ಮರವನ್ನು ಗುರುತಿಸುವ ಸಾಮರ್ಥ್ಯ ಹೊಂದಿರುವ ತುಳಸಿ ಗೌಡ ಅವರನ್ನು “ಎನ್ಸೈಕ್ಲೋಪೀಡಿಯಾ ಆಫ್ ದಿ ಫಾರೆಸ್ಟ್” ಎಂದು ಕೂಡ ಕರೆಯಲಾಗುತ್ತದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದವರಾದ ತುಳಸಿ ಗೌಡ ಅವರು ಹಾಲಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ.

ಅವರ ಈ ಪರಿಸರ ಪ್ರೇಮ ಮತ್ತು ಅದರ ಬಗೆಗಿನ ನಿಷ್ಠೆಯನ್ನು ಪರಿಗಣಿಸಿ ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​ ನೀಡಿದೆ.

Ashika S

Recent Posts

ಇಂದು 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…

8 mins ago

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

26 mins ago

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

40 mins ago

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

50 mins ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

9 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

9 hours ago