News Karnataka Kannada
Tuesday, April 30 2024
ಉತ್ತರಕನ್ನಡ

ಹಾಲಕ್ಕಿ, ಹರಿಕಂತ್ರ, ಗುನಗಿ, ಕೊಂಕಣ ಮರಾಠಾ, ಜಿಎಸ್ ಬಿ ಸಮಾಜದ ಸಮುದಾಯ ಭವನಕ್ಕೆ ಶಿಲಾನ್ಯಾಸ

Karwar: Protecting the interests of all communities is my priority: Rupali Naik
Photo Credit : By Author

ಕಾರವಾರ: ಎಲ್ಲ ಸಮಾಜದ ಹಿತಕಾಯುವುದು ನನ್ನ ಆದ್ಯತೆ. ಅದಕ್ಕೆಂದೆ ವಿವಿಧ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.

ಗುನಗಿವಾಡದಲ್ಲಿ 50 ಲಕ್ಷ ರೂ.ಅನುದಾನದಲ್ಲಿ ಗುನಗಿ ಸಮುದಾಯ ಭವನ, ಕೋಡಿಬೀರ ದೇವಾಲಯದ ಬಳಿ 50 ಲಕ್ಷ ರೂ.ವೆಚ್ಚದಲ್ಲಿ ಹರಿಕಂತ್ರ ಸಮಾಜದ ಸಮುದಾಯ ಭವನ, ನಂದನಗದ್ದಾದಲ್ಲಿ ಗಣಪತಿ ದೇವಾಲಯದ ಸಭಾಭವನ ಹಾಗೂ ಜಿಎಸ್ ಬಿ ಸಮಾಜದ ಸಮುದಾಯ ಭವನ ಹಾಗೂ ಅಸ್ನೋಟಿಯಲ್ಲಿ ಕೊಂಕಣ ಮರಾಠಾ ಸಮಾಜದ ಸಮುದಾಯ ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಅನೇಕ ಸಮುದಾಯ ಭವನಗಳಿಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನವನ್ನು ಒದಗಿಸಿದ್ದೇನೆ. ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸಿದ ಆತ್ಮತೃಪ್ತಿ ನನಗಿದೆ‌. ಸತತ ಪ್ರಯತ್ನದಿಂದ ಈ ಅನುದಾನವನ್ನು ತರಲು ಸಾಧ್ಯವಾಗಿದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದೇನೆ. ಪಕ್ಷವನ್ನು ಪರಿಗಣಿಸದೆ, ಜನರಿಗೆ ಅವಶ್ಯಕವಾಗಿರುವ ಕೆಲಸಗಳನ್ನು ಮಾಡಿದ್ದೇನೆ. ಮುಂದೆಯೂ ಕೂಡ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಗುನಗಿ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ರೂಪಾಲಿ ಎಸ್.ನಾಯ್ಕ ಮಾತನಾಡಿ, ಗುನಗಿ ಸಮಾಜದವರು ಮದುವೆ, ಮತ್ತಿತರ ಸಮಾರಂಭಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಈ ಸಮುದಾಯ ಭವನ ನಿರ್ಮಾಣವಾಗಲಿದೆ ಎಂದರು. ಗುನಗಿ ಸಮಾಜದವರು ವಾಸಿಸುವ ಭಾಗದಲ್ಲಿ ಇರುವ ಸಣ್ಣ ಸಣ್ಣ ರಸ್ತೆಗಳ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗಿದೆ‌. ಇದಕ್ಕೆ ಸಮಾಜದ ಸಹಕಾರವೂ ಇರಬೇಕು. ಗುನಗಿ ಸಮಾಜದವರು ದೇವರ ಆರಾಧನೆಯಲ್ಲಿ ತೊಡಿಗಿರುವವರು. ಅವರಿಂದ ನಾವೂ ಕೂಡ ದೇವರ ಕೃಪೆಗೆ ಪಾತ್ರರಾಗುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿ ವರ್ಷ ಗುನಗಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನೀಯ. ನಾನು ಕೂಡ ನಿಮ್ಮೊಟ್ಟಿಗೆ ಇರುವುದಾಗಿ ತಿಳಿಸಿದರು.

ಹರಿಕಂತ್ರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ರೂಪಾಲಿ ಎಸ್.ನಾಯ್ಕ ಅವರು ಮಾತನಾಡಿ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಹಿಂದೆ ಅಧಿಕಾರದಲ್ಲಿ ಇದ್ದರೂ ಮೀನುಗಾರ ಸಮುದಾಯದ ಏಳಿಗೆಗೆ ಶ್ರಮಿಸಿಲ್ಲ. ಅವರನ್ನು ಇನ್ನಷ್ಟು ಕಷ್ಟಕ್ಕೆ ಒಳಗಾಗುವಂತೆ ಮಾಡಿತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಿನುಗಾರರಿಗಾಗಿಯೇ ಪ್ರತ್ಯೇಕ ಸಚಿವಾಲಯ ತೆರೆಯಲಾಗಿದೆ. ಅದಾದ ನಂತರ ಕಿಸಾನ್‌ ಕಾರ್ಡ್‌ನ್ನು ಕೂಡ ನೀಡಿ ಅವರಿಗೆ ಸೌಲಭ್ಯಗಳು ತಲುಪುವಂತೆ ಮಾಡಲಾಗುತ್ತಿದೆ ಎಂದರು.

ಮೀನುಗಾರಿಕೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಬೃಹತ್ತಾಗಿ ಬೆಳೆದಿದೆ. ಮುಂದೆ ನಮ್ಮ ಉತ್ತರಕನ್ನಡ ಜಿಲ್ಲೆ ಬೆಳೆಯ ಬೇಕು. ಯಾವುದೇ ಕಾರ್ಯಕ್ರಮ ಮಾಡಲು ಸಭಾಭವನಗಳಿಗೆ ಹೆಚ್ಚಿನ ಹಣವನ್ನು ಒದಗಿಸಬೇಕಾಗುತ್ತದೆ. ಸಮುದಾಯ ಭವನ ನಿರ್ಮಾಣವಾದರೆ ಜನತೆಗೆ ಅನುಕೂಲವಾಗಲಿದೆ. ಇದರ ಉಪಯೋಗ ಎಲ್ಲರಿಗೂ ಆಗಬೇಕು ಎಂದರು.

ಅಸ್ನೋಟಿಯಲ್ಲಿ ಕೊಂಕಣ ಮರಾಠಾ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕಿ ರೂಪಾಲಿ ಎಸ್.ನಾಯ್ಕ ಮಾತನಾಡಿ, ಸಮಾಜದ ಅಗತ್ಯತೆಯನ್ನು ಮನಗಂಡು ಈ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಸಮಾಜದ ಧಾರ್ಮಿಕ, ಸಾಂಸ್ಕೃತಿಕ, ಕಲೆ ಮತ್ತಿತರ ಕಾರ್ಯಕ್ರಮಗಳಿಗೆ ಸಮುದಾಯ ಭವನದ ಅವಶ್ಯವಾಗಿದೆ. ಸರ್ಕಾರ ಹಾಗೂ ಸಮಾಜದ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಹೇಳಿದರು.

ಜಿಎಸ್ ಬಿ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ರೂಪಾಲಿ ಎಸ್.ನಾಯ್ಕ ಅವರು ಮಾತನಾಡಿ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು, ಎಲ್ಲರೂ ಇದರ ಉಪಯೋಗ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರವಾರ‌ ನಗರ ಮಂಡಲದ ಅಧ್ಯಕ್ಷರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಕೊಂಕಣ ಮರಾಠಾ, ಹರಿಕಂತ್ರ, ಜಿಎಸ್ ಬಿ, ಗುನಗಿ ಸಮಾಜದ ಪ್ರಮುಖರು, ಬಿಜೆಪಿ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಮಧ್ಯೆ ಶಾಸಕಿ ರೂಪಾಲಿ ಎಸ್.ನಾಯ್ಕ ಕಾರವಾರದ ಮೀನು ಮಾರುಕಟ್ಟೆಗೆ ಭೇಟಿ ನೀಡಿ, ಮೀನುಗಾರರ ಮಹಿಳೆಯರೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲನ್ನು ಆಲಿಸಿದರು. ಮೀನುಗಾರ ಮಹಿಳೆಯರ ದುಡಿಮೆಯನ್ನು ಪ್ರಶಂಸಿಸಿದ ಶಾಸಕರು, ಅವರಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು