ಕಾರವಾರ: ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವೆ – ಸತೀಶ್ ಸೈಲ್

ಕಾರವಾರ: ಈಗಲ್ ಇನ್ಫ್ರಾ ಇಂಡಿಯಾ ಲಿ. ಕಂಪನಿಯಲ್ಲಿ ನನ್ನ ಹೂಡಿಕೆ ಇರುವುದು ಸಾಬೀತು ಮಾಡಿದರೆ, ಶಾಶ್ವತವಾಗಿ ರಾಜಕೀಯದಿಂದ ದೂರವಾಗುತ್ತೇನೆ. ಇಲ್ಲದಿದ್ದರೆ ಶಾಸಕಿ ರೂಪಾಲಿ ನಾಯ್ಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಮಾಜಿ ಶಾಸಕ ಸತೀಸ ಸೈಲ್ ಸವಾಲು ಹಾಕಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಂಪನಿಗೆ ಸಂಬಂಧಿಸಿದ ದಾಖಲೆ ಸಮೇತ ಮಾತನಾಡಿದರು.

‘ನಗರದ 6.5 ಕೋಟಿ ರೂ. ವೆಚ್ಚದ ಕಾಮಗಾರಿ ಪಡೆದಿರುವ ಈಗಲ್ ಇನ್ಫಾç ಇಂಡಿಯಾ ಲಿ. ಕಂಪನಿಯಲ್ಲಿ ನನ್ನ ಹೂಡಿಕೆ ಇದೆ ಎಂದು ಶಾಸಕಿ ಆರೋಪಿಸಿದ್ದಾರೆ. ಅವರು ಅಪ್ಪಟ್ಟ ಸುಳ್ಳು ಹೇಳಿದ್ದಾರೆ. ಕಂಪನಿಯಲ್ಲಿ ನಯಾ ಪೈಸೆ ಹೂಡಿಕೆ ಆಗಿದ್ದರೆ, ರಾಜಕೀಯದಿಂದ ದೂರವಾಗಿ ಕಾರವಾರ ಕೂಡ ಬಿಡುತ್ತೇನೆ ಎಂದರು. ಶಾಸಕಿ ರೂಪಾಲಿ ನಾಯ್ಕ ಚುನಾವಣೆಯಲ್ಲಿ ಗೆದ್ದ ಎರಡನೇ ದಿನದಲ್ಲಿ ಫೋನ್ ಮಾಡಿದ್ದರು.

ಬೈತಖೋಲ್ ಬಳಿ ಕೆಲವರು ಕಾರು ಅಡ್ಡ ಹಾಕಿದ್ದಾರೆ ಏನು ಮಾಡಬೇಕು ಎಂದು ಕೇಳಿ ಕರೆ ಮಾಡಿದ್ದರು. ಆಗ ಅವರಿಗೆ ಸಹಾಯ ಮಾಡಿದ್ದೆ. ಅದು ಸುಳ್ಳು ಎಂದಾದರೆ ಶಾಸಕಿ ರೂಪಾಲಿ ನಾಯ್ಕ ಆರ್ಯದುರ್ಗ ದೇವರ ಎದುರು ಆಣೆ ಮಾಡಲಿ, ತಾನೂ ಮಾಡುತ್ತೇನೆ. ಜೀವ ಬೆದರಿಕೆಯಂಥ ಕ್ಷುಲ್ಲಕ ರಾಜಕಾರಣ ಎಂದೂ ಮಾಡುವುದಿಲ್ಲ ಶಾಸಕಿ ಅವರು ನನ್ನ ಲಿವರ್ ಹಾಳಾಗಿದೆ ಎಂದು ಹೇಳುತ್ತಿದ್ದಾರೆ.

ನಮಗೂ ಕುಟುಂಬ, ಹೆಂಡತಿ, ಮಕ್ಕಳು ಇದ್ದಾರೆ. ಅವರ ಮೇಲೆ ಇಂಥ ಮಾತು ಯಾವ ರೀತಿ ಪ್ರಭಾವ ಬೀರುತ್ತದೆ. ಲಿವರ್ ಹಾಳಾಗಿದೆ ಎಂದು ಹೇಳಲು ರೂಪಾಲಿ ನಾಯ್ಕ ಏನು ತಜ್ಞರೇ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವರೇ ಹೋಗಿ ತಪಾಸಣೆ ಮಾಡುತ್ತಾರಾ?, ಇಷ್ಟೊಂದು ಕೆಳ ಮಟ್ಟದ ಸುಳ್ಳು ಆರೋಪ ಮಾಡಬಾರದು ಎಂದು ಖಾರವಾಗಿ ಹೇಳಿದರು. ಲಿವರ್ ತಪಾಸಣೆ ಮಾಡುವುದಾದರೆ, ಅವರದ್ದೂ ಮಾಡಲಿ ಎಂದರು. ಮಾತು ಮಾತಿಗೂ ಜೈಲಿಗೆ ಹೋಗಿ ಬಂದವರು ಎಂದು ನನ್ನನ್ನು ಹಂಗಿಸುತ್ತಾರೆ. ಬಾಕಿಯವರ ಲಿಸ್ಟ್ ತೆಗೆದರೆ ದೊಡ್ಡದಾಗುತ್ತದೆ. ಅದೆಲ್ಲ ಈಗ ಬೇಡ.

ಎಲ್ಲವನ್ನು ಇಲ್ಲಿಗೇ ಮುಗಿಸಬೇಕು ಎಂದುಕೊಂಡಿದ್ದೇನೆ. ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ನಡೆದ ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಪೊಲೀಸರು ಪಡೆದಿದ್ದಾರೆ ಎಂದು ಗೊತ್ತಾಗಿದೆ. ಅದು ಇನ್ನೂ ಕೊಟ್ಟಿಲ್ಲ. ನಾವು ಕೊಟ್ಟ ಕೇಸು ಏನಾಯಿತು ಎನ್ನುವುದು ಇನ್ನೂ ಹೇಳಿಲ್ಲ ಎಂದರು. ಶಾಸಕರು ಆರೋಪ ಮಾಡುವಾಗ ಸಾಕ್ಷಿ ಇಟ್ಟು ಮಾತನಾಡಲಿ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಮಾತನಾಡಿ, ಈಗಲ್ ಇನ್ಫ್ರಾ ಇಂಡಿಯಾ ಲಿ. ಕಂಪನಿಯಲ್ಲಿ ತಾನೊಬ್ಬ ಉದ್ಯೋಗಿ. ಈ ಭಾಗದಲ್ಲಿ ಕಂಪನಿಯ ಕೆಲಸಗಳನ್ನು ನೋಡಕೊಳ್ಳುತ್ತೇನೆ. ಇದು ಬಿಟ್ಟರೆ ಕಂಪನಿಯೊಂದಿಗೆ ಬೇರೆ ಯಾವುದೇ ಹೆಚ್ಚುವರಿ ಸಂಬಂಧ ಇಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಕೆ ಶಂಭು ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ ಹಾಗೂ ಇನ್ನಿತರರು ಇದ್ದರು.

Ashika S

Recent Posts

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ : ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿ ನ್ಯೂ ಗಾಂಧಿನಗರದಲ್ಲಿ ನಡೆದಿದೆ.

6 mins ago

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಮುಸ್ತಾಫ ಸೆರೆ

ದೇಶವನ್ನೇ ಬೆಚ್ಚಿಬೀಳಿಸಿದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ…

7 mins ago

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಸುಳ್ಯದಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಹಚ್ಚಿದ್ದಾರೆ

11 mins ago

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

21 mins ago

ಉಡುಪಿ: ಇಂದಿನಿಂದ ಮೂರು ದಿನಗಳ ಕರಾವಳಿ ಕಲಾವಿದೆರ್ ತುಳು ನಾಟಕೋತ್ಸವ

ಮಲ್ಪೆಯ ಕರಾವಳಿ ಕಲಾವಿದೆರ್ ತಂಡದಿಂದ ಮೂರು ದಿನಗಳ ತುಳು ನಾಟಕೋತ್ಸವ ಇದೇ ಇಂದಿನಿಂದ (ಮೇ 10) ತೊಟ್ಟಂ ಸಾರ್ವಜನಿಕ ಗಣೇಶೋತ್ಸವ…

27 mins ago

ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ 5 ಭಾರತೀಯ ನಾವಿಕರ ಬಿಡುಗಡೆ

ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ.

42 mins ago