ಕಾರವಾರ: ಚಲಿಸುತ್ತಿದ್ದ ಲಾರಿಯ ಟಯರ್ ಸ್ಪೋಟಗೊಂಡು ಲಾರಿಗೆ ಬೆಂಕಿ ಹೊತ್ತಿ ಉರಿದ ಘಟನೆ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ನಡೆದಿದೆ.
ಮುಂಬಯಿನಿಂದ ಕೇರಳ ಕಡೆಗೆ ಹೊರಟಿದ್ದ ಲಾರಿಯ ಟಯರ್ ಅರಬೈಲ್ ಬಳಿ ಬ್ಲಾಸ್ಟ್ ಆಗಿದೆ. ತಕ್ಷಣ ಲಾರಿಯ ಹಿಂಭಾಗಕ್ಕೆ ಬೆಂಕಿ ಹೊತ್ತಿ ಉರಿದಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ ಹೆದ್ದಾರಿ ಮಧ್ಯೆ ಲಾರಿ ಹೊತ್ತಿ ಉರಿಯುತ್ತಿರುವ ಕಾರಣಕ್ಕೆ ಟ್ರ್ಯಾಫಿಕ್ ಜಾಮ್ ಆಗಿತ್ತು. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.