News Karnataka Kannada
Tuesday, April 23 2024
Cricket
ಉತ್ತರಕನ್ನಡ

ಕಾರವಾರ: ಟ್ಯಾಂಕರ್ ಅನಿಲ ಸೋರಿಕೆ ಜನರಲ್ಲಿ ಆತಂಕ

Karwar: Tanker gas leak scares people
Photo Credit : By Author

ಕಾರವಾರ: ಟ್ಯಾಂಕರ್ ಒಂದರಿಂದ ಅನಿಲ ಸೋರಿಕೆಯಾಗಿ ಜನರಲ್ಲಿ ಆತಂಕ ಸೃಷ್ಟಿಯಾದ ಘಟನೆ ಕುಮಟಾ ತಾಲೂಕಿನ ಕಡೇಕೋಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.

ಗೋವಾ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಹಿಂಭಾಗದ ಪೈಪ್‌ಗಳ ಮೂಲಕ ಬಿಳಿ ಬಣ್ಣದ ದ್ರವವು ಸೋರಿ ತಕ್ಷಣ ಸುತ್ತಲೂ ಮೋಡಗಳಂತೆ ಆವರಿಸಿದ್ದು, ಕೆಲವರು ಗಾಬರಿಯಾಗಿ ಮನೆಗಳಿಂದ ಹೊರಗೆ ಓಡಿ ಬಂದು ಕಂಗಾಲಾಗಿ ನಿಂತರೆ, ಸಂಚರಿಸುವ ವಾಹನಗಳು ಅಲ್ಲಲ್ಲೇ ನಿಂತು ಹಿಂತಿರುಗಿ ದೂರ ಸರಿಯತೊಡಗಿದ್ದವು.

ನಂತರ ಘಟನೆ ಬಗ್ಗೆ ಟ್ಯಾಂಕರ್ ಚಾಲಕನನ್ನು ಜನರು ವಿಚಾರಿಸಿದ್ದು, ಇದು ಲಿಕ್ವಿಡ್ ನೈಟ್ರೋಜನ್ ದ್ರವವಾಗಿದ್ದು ಅಪಾಯವಿಲ್ಲ. ಸ್ವಲ್ಪ ಸಮಸ್ಯೆಯಾಗಿದ್ದು, ತಂತ್ರಜ್ಞರಿಗೆ ಕರೆ ಮಾಡಿದ್ದೇನೆ. ಬಂದು ಸರಿಪಡಿಸುತ್ತಾರೆ, ಇದರಿಂದ ಜನರಿಗೆ ಏನೂ ಸಮಸ್ಯೆ ಇಲ್ಲ. ಯಾರೂ ಹೆದರಬೇಕಾಗಿಲ್ಲ ಎಂದು ತಿಳಿಸಿದ ನಂತರ ಸಾರ್ವಜನಿಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು