News Karnataka Kannada
Monday, April 29 2024
ಉಡುಪಿ

ಕಾಂಗ್ರೆಸ್ ನ ಅಭಿವೃದ್ಧಿಯ ಅಲೆಯಲ್ಲಿ ಬಿಜೆಪಿಯ ಹಿಂಸೆಯ ರಾಜಕಾರಣ ಕೊಚ್ಚಿ ಹೋಗಲಿದೆ

BJP's politics of violence will be washed away in Congress' wave of development
Photo Credit : News Kannada

ಕುಂದಾಪುರ: ರಾಜ್ಯದ 2013ರ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ಮತ್ತು ಬಿಜೆಪಿಯ 40% ಕಮಿಷನ್ ಹಾಗೂ ಹಿಂಸೆಯ ರಾಜಕಾರಣದ ನಡುವೆ ನಡೆಯಲಿದೆ ಆದರೆ ಕಾಂಗ್ರೆಸ್ ಅಲೆಯಲ್ಲಿ ಬಿಜೆಪಿಯ ಜನವಿರೋಧಿ ರಾಜಕಾರಣ ಕೊಚ್ಚಿ ಹೋಗಲಿದೆ ಎಂದು ಕೆಪಿಸಿಸಿ ಸೋಶಿಯಲ್ ಮೀಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಆಧಾರರಹಿತ,ಬಾಲಿಷವಾದ ವದಂತಿಗಳನ್ನು ಸದಾ ಹರಡಿಕೊಂಡು ದೇಶದ ಯುವ ಜನತೆಯ ಹಾದಿ ತಪ್ಪಿಸಿ ಅನೈತಿಕ ರಾಜಕಾರಣ ಮಾಡುತ್ತಿರುವ ಬಿಜೆಪಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡದೆ ಲವ್ ಜಿಹಾದ್ ಮೇಲೆ ನಡೆಯಲಿದೆ ಎಂದು ಬಾಲಿಶವಾದ ಹೇಳಿಕೆಯನ್ನು ನೀಡಿ ಮತದಾರರನ್ನು ಮೂರ್ಖರನ್ನಾಗಿಸುವ ಪ್ರಯತ್ನ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಅದಕ್ಕೆ ಉದಾಹರಣೆ ಎಂಬಂತೆ ಈಗಾಗಲೇ ಹಿಜಾಬ್,ಹಲಾಲ್, ಅಝಾನ್, ಉರಿಗೌಡ- ನಂಜೇಗೌಡ ಮುಂತಾದ ಹೆಸರಲ್ಲಿ ಮತದಾರರ ದಿಕ್ಕು ತಪ್ಪಿಸಲು ಪ್ರಯತ್ನಿಸಿ ಇದೀಗ ಜನರಿಂದ ಛೀಮಾರಿ ಹಾಕಿಸಿಕೊಂಡಿದೆ ಎಂದು ವಿಶ್ಲೇಷಿಸಿದೆ.

ಹಿಂದೂಗಳು,ಮುಸ್ಲಿಮರು ಹಾಗೂ ಕ್ರೈಸ್ತರು ಅವರವರ ನಂಬಿಕೆಯ ಪ್ರಕಾರ ಸಂವಿಧಾನದ ಆಶಯಕ್ಕೆ ಬದ್ದವಾಗಿ ಅವರವರು ಬದುಕುತ್ತಿದ್ದಾರೆ.ಆ ಕುರಿತು ಸಮಯ ಹಾಳುಮಾಡುವುದರಿಂದ, ನಮ್ಮ ಹುಡುಗರು ಪರಧರ್ಮಿಯರ ಜೊತೆ ಹೊಡೆದಾಡುವುದರಿಂದ ನಮಗಾಗುವ ಲಾಭವೇನು?.

ಲವ್ ಜಿಹಾದ್ ಎಂದರೇನು? ಆ ಬಗ್ಗೆ ಸರ್ಕಾರದ ಬಳಿ ದಾಖಲೆಗಳು ಏನಾದರೂ ಇದೇಯಾ ಎಂದು ಪ್ರಶ್ನಿಸಿದರು‌‌.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಪದವಿಧರರಿಗೆ ಉದ್ಯೋಗವನ್ನು ನೀಡಲು ಆದ್ಯತೆಯನ್ನು ನೀಡಲಿದೆ ಮತ್ತು ಯುವನಿಧಿ ಯೋಜನೆಯಡಿಯಲ್ಲಿ ತಿಂಗಳಿಗೆ ಮೂರು ಸಾವಿರ ರೂಪಾಯಿ ನಿರುದ್ಯೋಗ ಭತ್ಯೆಯನ್ನು ನೀಡುತ್ತೇವೆ ಹಾಗೂ ಅಕ್ಕಿ,ಬೇಳೆ,ಮೆಣಸು ಮುಂತಾದ ಅಗತ್ಯ ದಿನಸಿ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಲಿದೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನತಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಸಹಾಯಧನ ಕೊಡುತ್ತೇವೆ,ಪೆಟ್ರೋಲ್, ಡಿಸೇಲ್, ಗ್ಯಾಸ್ ಮುಂತಾದವುಗಳ ಮೇಲಿನ ಜಿಎಸ್ಟಿ ಇಳಿಸುತ್ತೇವೆ ಹಾಗೂ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ತನಕದ ವಿದ್ಯುತ್ ಅನ್ನು ಪ್ರತಿ ಮನೆಗೆ ಉಚಿತವಾಗಿ ಕೊಡುತ್ತೇವೆ. ಹಾಗೆಯೇ ಇದೆಲ್ಲವುದರ ಜೊತೆಗೆ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಿದೆ ಇವೆಲ್ಲವೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಆಗಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರ ಸಹಿ ಇರುವ ಕಾಂಗ್ರೆಸ್ ಗ್ಯಾರಂಟಿ ಕಾರ್ಡನ್ನು ಮನೆಮನೆಗೆ ವಿತರಿಸತೊಡಗಿದ್ದು ಬಿಜೆಪಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದರು.

2013ರ ವಿಧಾನಸಭಾ ಚುನಾವಣೆಯಲ್ಲಿ ನಾವು ಘೋಷಿಸಿದ್ದ 165 ಆಶ್ವಾಸನೆಗಳಲ್ಲಿ 165ನ್ನೂ ಈಡೇರಿಸಿದ ಪಕ್ಷ ನಮ್ಮದು.
ಎಂದು ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿಯವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು