News Karnataka Kannada
Saturday, May 18 2024
ಉತ್ತರಕನ್ನಡ

ಕಾರವಾರ: ಗ್ರೂಪ್ ಡಿ ಮತ್ತು ಸಿ ನೌಕರರ ಸೂಕ್ತ ರೀತಿಯಲ್ಲಿ ವೇತನ ನೀಡಿ

Photo Credit : By Author

ಕಾರವಾರ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಸುಮಾರು ಕಳೆದ ಅನೇಕ ವರ್ಷಗಳಿಂದ ಗ್ರೂಪ್ ಡಿ ಮತ್ತು ಸಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರ, ಗುಮಾಸ್ತ, ಕ್ಲರ್ಕ, ಡೇಟಾ ಎಂಟ್ರಿ ಅಪರೇಟರ್, ವಾಟರ್ ಮ್ಯಾನ್, ಸಿಪಾಯಿ, ಸ್ವಚ್ಛತಾಗಾರರಿಗೆ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಬಸವರಾಜ ಸಂಗಮೇಶ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರ ಹಿರಿತನ ಮತ್ತು ಬಾಹ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪಡೆದಿರುವ ಅಂಕಪಟ್ಟಿಯನ್ನು ಪರಿಗಣಿಸಿ ಅವರು ನಿರ್ವಹಿಸುತ್ತಿರುವ ಹುದ್ದೆಗಳಿಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯತ್ ಸಿಬ್ಬಂದಿ ವೇತನವನ್ನು ಪಂಚತಂತ್ರ ತಂತ್ರಾಂಶದ ಇ. ಎಫ್. ಎಂ.ಎಸ್ /ಪಂಚತಂತ್ರ ೨.೦ ತಂತ್ರಾಂಶದ ಫೈನಾನ್ಸ್, ಅಕೌಂಟಿಗ್ ಮತ್ತು ಎಚ್‌ಆರ್‌ಎಮ್‌ಎಸ್ ಮಾಡ್ಯೂಲ್‌ಗಳನ್ನು ಗ್ರಾಮ ಪಂಚಾಯಿತಿ ಮತ್ತು ತಾಲೂಕಾ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಿ ಸಿಬ್ಬಂದಿಗಳಿಗೆ ವೇತನ ನೀಡಬೇಕು ಎಂದು ಅವರು ಒತ್ತಾಯಿಸಿದರು. ಮನವಿಗೆ ಸ್ಪಂದಿಸದೇ ಇದ್ದರೆ ಜಿಲ್ಲಾ ಪಂಚಾಯಿತಿ ಎದುರು ನವೆಂಬರ್ ೧೪ರಂದು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸುಮಾರು ೨೦ವರ್ಷಗಳಿಂದ ಗ್ರಾಮ ಪಂಚಾಯತ್‌ಗಳಲ್ಲಿ ಕರ ವಸೂಲಿಗಾರ, ಗುಮಾಸ್ತ, ಕ್ಲರ್ಕ್, ಡೇಟಾ ಎಂಟ್ರಿ ಅಪರೇಟರ್, ವಾಟರ್ ಮ್ಯಾನ್, ಸಿಪಾಯಿ, ಸ್ವಚ್ಛತಾಗಾರರಿಗೆ ಹೀಗೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರವು ೨೦೧೬-೧೭ರಲ್ಲಿ ಇವರನ್ನು ಅನುಮೋಧನೆ ಮಾಡಿ ಸರಕಾರಿ ನೌಕರರೆಂದು ಪರಿಗಣಿಸಲು ಅದೇಶಿಸಿರುತ್ತದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು ೪೫೦ -ಸಿಬ್ಬಂದಿ ಇದುವರೆಗೂ ಅನುಮೋದನೆ ನೀಡಿರುವುದಿಲ್ಲ ಎಂದು ಅವರು ದೂರಿದರು. ಪಂಚತಂತ್ರ ತಂತ್ರಾಂಶದ ಇ. ಎಎಫ್ ಎಂ.ಎಸ್ /ಪಂಚತಂತ್ರ ೨.೦ ತಂತ್ರಾಂಶದ ಇ. ಎಫ್. ಎಂ.ಎಸ್ /ಪಂಚತಂತ್ರ ೨.೦ ತಂತ್ರಾಂಶದ ಫೈನಾನ್ಸ್, ಅಕೌಂಟಿಗ್ ಮತ್ತು ಎಚ್‌ಆರ್‌ಎಮ್‌ಎಸ್ ಮಾಡ್ಯೂಲ್‌ನ ಆನ್‌ಲೈನ್ ವೇತನದಿಂದ ಈ ನೌಕರರನ್ನು ವಂಚಿಸಲಾಗಿದೆ ಎಂದು ಬಸವರಾಜ ತಿಳಿಸಿದರು. ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ನಗದು /ಚೆಕ್ ಡಿ.ಡಿ/ ನೆಫ್ಟ್/ಆರ್‌ಟಿಜಿಎಸ್ ಮೂಲಕ ಸಿಬ್ಬಂದಿ ವೇತನವನ್ನು ಪಾವತಿಸುವುದನ್ನು ೨೦೨೧ರಲ್ಲಿ ನಿಷೇಧಿಸಲಾಗಿದೆ.

ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪಂಚತಂತ್ರ ತಂತ್ರಾಂಶದಲ್ಲಿ ತಿಂಗಳುವಾರು ಪ್ರತಿ ತಿಂಗಳ ೫ನೇ ತಾರೀಕಿನ ಒಳಗಾಗಿ ಸಿಬ್ಬಂದಿಗಳಿಗೆ ಆನೈನ್ ಮೂಲಕ ಸಿಬ್ಬಂದಿ ವೇತನ ಪಾವತಿಸತಕ್ಕದ್ದು ಎಂದು ಸರಕಾರವು ೨೦೧೭ ರಿಂದ ೨೦೨೧ ರವರೆಗೆ ಈ ಆದೇಶಗಳನ್ನು ಹೊರಡಿಸಿದ್ದು ಇರುತ್ತದೆ. ಇಷ್ಟಿದ್ದರೂ ಜಿ.ಪಂ. ಅಧಿಕಾರಿಗಳು ವೇತನ ಬಿಡುಗಡೆ ಮಾಡುತ್ತಿಲ್ಲ ಎಂದರು.

ಸುಮಾರು ಇಪ್ಪತ್ತು ವರ್ಷಗಳಿಂದ ಗ್ರಾಮ ಪಂಚಾಯತಿ ಗಳಲ್ಲಿ ಸೇವಾ ಭದ್ರತೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳನ್ನು ಖಾಯಂಗೊಳಿಸಿ ಅನುಮೋದಮನೆ ನೀಡಬೇಕು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ವರ್ಗದ ಸಿಬ್ಬಂದಿಗಳನ್ನು ಕಡೆಗಣಿಸದ ಅನುಮೋದನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅನುಮೋದನೆಯಾಗದ ಎಲ್ಲ ಗ್ರಾಮ ಪಂಚಾಯಿತ ಸಿಬ್ಬಂದಿಗಳನ್ನು ಅನುಮೋದಿಸಿ ಸರ್ಕಾರೀ ನೌಕರರೆಂದು ಪರಿಗಣಿಸಿ ಸರ್ಕಾರ ನೌಕರರಿಗಿರುವ ವೇತನ, ಮುಂಬಡ್ತಿ, ರಜೆ ನಿವೃತ್ತಿ, ಶಾಸನ ಬದ್ಧ ವೇತನ ಪ್ರಯಾಣ ಭತ್ಯೆ, ಇಎಸ್‌ಐ, ಪಿಎಫ್, ಆರೋಗ್ಯ ವಿಮೆ ಮತ್ತಿಪರ ಸೌಕರ್ಯಗಳನ್ನೂ ನಿಗದಿಪಡಿಸಿ ಸರ್ಕಾರ ಆದೇಶ ಮಾಡಬೇಕು ಎಂದು ಅವರು ಮನವಿ ಮಾಡಿದರು.ಎಲ್ಲ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಪ್ರತಿ ತಿಂಗಳ ವೇತನವನ್ನು ೧ ರಿಂದ ೫ ನೇ ತಾರೀಕಿನೊಳಗಾಗಿ ಪಂಚತಂತ್ರ ತಂತ್ರಾಂಶದ ಇಎಫ್‌ಎಂಎಸ್ ಮಾಡ್ಯೂಲ್ ಮೂಲಕ ನೀಡಬೇಕು ಬಾಕಿಯಿರುವ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಮಲ್ಲಿಕಾರ್ಜುನ ಸುಣಗಾರ, ಅರ್ಜುನ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು