ಕಾರವಾರ: ನೂತನ ಶಾಸಕ ಸತೀಶ್ ಸೈಲ್ ಬೆಂಬಲಿಗರೊಂದಿಗೆ ಕಾರವಾರದಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು. ಕಾರವಾರದ ಕೋಡಿಬೀರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಬೆಂಬಲಿಗರೊಂದಿಗೆ ಬೃಹತ್ ಸಂಭ್ರಮಾಚರಣೆ ರ್ಯಾಲಿಯಲ್ಲಿ ಭಾಗವಹಿಸಿದರು.
ನಗರದ ಕೋಡಿಬೀರ ದೇವಸ್ಥಾನದಿಂದ ಸುಭಾಷ್ ವೃತ್ತ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ಸಂಚರಿಸಿದ್ದು ಪಟಾಕಿ ಸಿಡಿಸಿ, ಜೈಕಾರ ಹಾಕುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ಇದೇ ವೇಳೆ ಸೈಲ್ ಬೆಂಬಲಿಗರು ಗುಲಾಬಿ ಹೂವಿನ ಬೃಹತ್ ಹಾರವನ್ನು ಸತೀಶ್ ಸೈಲ್ ಕುಟುಂಬಸ್ಥರಿಗೆ ಹಾಕಿ ಅಭಿನಂದಿಸಿದರು.