ಕಾರವಾರ: ಮೀನುಗಾರಿಕೆ ವೇಳೆ ನೌಕಾನೆಲೆ ಸಿಬ್ಬಂದಿಗಳಿಂದ ದೌರ್ಜನ್ಯ

ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭಲ್ಲಿ ಸ್ಥಳೀಯ ಮೀನುಗಾರರು ನೌಕಾನೆಲೆ ಸಿಬ್ಬಂದಿಗಳು ತೊಂದರೆ ನೀಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿ ಮುದಗಾ ಹಾಗೂ ಹಾರವಾಡ ಭಾಗದ ಮೀನುಗಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಮೀನುಗಾರರು ಜಿಲ್ಲಾಡಳಿಕ್ಕೆ ಸಲ್ಲಿಸಿದ ಮನವಿಯಲ್ಲಿ ಮೀನುಗಾರರು ಪ್ರತಿನಿತ್ಯ ಮೀನು ಹಿಡಿಯಲು ಸಮುದ್ರಕ್ಕೆ ಹೋಗಿ, ಮೀನು ಹಿಡಿದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ನೌಕಾನೆಲೆ ಸಿಬ್ಬಂದಿಗಳು ಮೀನು ಹಿಡಿಯಲು ಹೋದಾಗ ನಮ್ಮ ದೋಣಿಗಳನ್ನು ದೂಡಿ ಪಲ್ಪಿ ಮಾಡುವುದು, ಮೀನಿನ ಬಲೆ ಕತ್ತರಿಸುವುದು ಹಾಗೂ ಮೀನುಗಾರರ ಮೇಳೆ ದೌರ್ಜನ್ಯ ಮಾಡುವುದು ಮಾಡುತ್ತಿದ್ದಾರೆ.

ಈ ಬಗ್ಗೆ ಈ ಹಿಂದೆಯೂ ದೂರು ನೀಡಲಾಗಿದೆ. ಮೀನುಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ನೌಕಾನೆಲೆ ಸಿಬ್ಬಂದಿಗಳು ಅವಾಚ್ಯವಾಗಿ ಬೈದು, ಬಲೆ ಕತ್ತರಿಸುತ್ತಾರೆ. ದಿನದಿಂದ ದಿನಕ್ಕೆ ನೌಕಾನೆಲೆ ಸಿಬ್ಬಂದಿಗಳ ದೌರ್ಜನ್ಯ ಹೆಚ್ಚುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮಕಗಳನ್ನು ಕೈಗೊಳ್ಳದೆ ಇದ್ದರೇ, ಮುದಗಾ ಹಾರವಾಡ ನಿರಾಶ್ರಿತ ಮೀನುಗಾರರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಮನವಿ ಸ್ವೀಕರಿಸಿ, ಈ ಬಗ್ಗೆ ಸಂಬಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲಿ ಮೀನುಗಾರಿಕಾ ಸಂಘಟನೆಯ ದೇವಾನಂದ ಶ್ರೀಕಾಂತ ದುರ್ಗೇಕರ್, ಜಗದೀಶ್ ಬೊಬ್ರುಕರ್, ದಿನಕರ ಮಾಜಾಳಿಕರ್, ಭಗಿರಥ ಬೊಬ್ರುಕರ್ ಹಾಗೂ ಇನ್ನಿತರರು ಇದ್ದರು.

Ashika S

Recent Posts

ಸಂಚಾರಕ್ಕೆ ಅಡಚಣೆ; ಕಾಂಕ್ರೀಟ್ ಮಿಶ್ರಣ ಸಾಗಾಟದ ಟ್ಯಾಂಕರ್ ಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮಣಿಪಾಲ- ಅಲೆವೂರು ರಸ್ತೆಯು ಕಾಂಕ್ರೀಟ್ ಧೂಳಿನಿಂದ ಮುಳುಗಿಹೋಗಿದ್ದು, ಜನರು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ.

1 min ago

ಉಡುಪಿ: ನೀತಿ ಸಂಹಿತೆ ಉಲ್ಲಂಘನೆ; 15 ಲಕ್ಷ ರೂ. ನಗದು ವಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ…

17 mins ago

ಪ್ರಜ್ವಲ್ ಜಾಗದಲ್ಲಿ ಮುಸ್ಲಿಂ ವ್ಯಕ್ತಿ ಇದ್ದಿದ್ದರೆ ಹೋರಾಟದ ಸ್ವರೂಪವೇ ಬೇರೆ: ನಟಿ ಸ್ವರಾ ಭಾಸ್ಕರ್

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದು, ತಪ್ಪು ಮಾಡಿರುವ ವ್ಯಕ್ತಿ ಯಾವ ಧರ್ಮದವನು…

33 mins ago

“ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ”

ಪ್ರಧಾನಿ ನರೇಂದ್ರ ಮೋದಿಯವರ ಸಾವಿನ ಕುರಿತಾಗಿ ಮಾತನಾಡಿ ಕಾಂಗ್ರೆಸ್​ ಶಾಸಕ ರಾಜು ಕಾಗೆ ವಿವಾದ ಹುಟ್ಟು ಹಾಕಿದ್ದಾರೆ. "ನರೇಂದ್ರ ಮೋದಿ…

46 mins ago

ಜನರ ಕೆಲಸ ಮಾಡದ ಬಿಜೆಪಿಯನ್ನು ಈ ಬಾರಿ ಕಿತ್ತೊಗೆಯಿರಿ: ರಾಮಲಿಂಗಾರೆಡ್ಡಿ

ಕೇಂದ್ರದ ಮೋದಿಯವರ ಬಿಜೆಪಿ ಸರಕಾರ ದೇಶದ ಆರ್ಥಿಕ ಸ್ಥಿತಿ ಹದಗೆಡಿಸಿದ್ದಲ್ಲದೇ ಬೆಲೆ ಏರಿಕೆಯಿಂದ ಜನರ ಜೀವನ ಕಷ್ಟವಾಗಿದೆ. ಈ ಸಲ…

52 mins ago

ಕೈದಿ ಹೊಟ್ಟೆಯಲ್ಲಿ ಮೊಬೈಲ್‌ ಕಂಡು ದಂಗಾದ ವೈದ್ಯರು

ಕೈದಿಯೊಬ್ಬ ಮೊಬೈಲ್ ನ್ನು ನುಂಗಿ ಹೊಟ್ಟೆನೋವು ಎಂದು ಕೂಗಾಡುತ್ತಿದ್ದ ವೇಳೆ ವೈದ್ಯರ ಬಳಿ ಕರೆದುಕೊಂಡು ಹೋದಾಗ ಹೊಟ್ಟೆಯಲ್ಲಿ ಮೊಬೈಲ್  ಕಂಡು…

1 hour ago