News Karnataka Kannada
Saturday, May 18 2024
ಉತ್ತರಕನ್ನಡ

ಕಾರವಾರ: ಅಕ್ರಮ ಮದ್ಯ ಸಾಗಾಟದ ವೇಳೆ ಅಬಕಾರಿ ಕಾರ್ಯಾಚರಣೆ

Karwar: Excise operations in case of illegal liquor smuggling
Photo Credit : By Author

ಕಾರವಾರ: ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ನಲ್ಲಿ ಭಾನುವಾರ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಕಾರು ಹಾಗೂ ಲಾರಿಯನ್ನು ತಡೆದು ಲಕ್ಷಾಂತರ ರೂ. ಮೌಲ್ಯದ ಮದ್ಯ, ವಾಹನ ಹಾಗೂ ಕ್ಲೋರಿಂಗ್ ಸಿಲಿಂಡರ್ ಗಳನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಾಜಾಳಿ ಚೆಕ್ ಪೋಸ್ಟ್ನಲ್ಲಿ ಕಾರೊಂದನ್ನು ತಡೆದ ಅಬಕಾರಿಗಳು ತಪಾಸಣೆ ನಡೆಸಿದಾಗ ಅದರಲ್ಲಿ ಅಕ್ರಮ ಮದ್ಯ ಪತ್ತೆಯಾಗಿದ್ದು ಆರೋಪಿ ಚಾಲಕ ಗೋವಾ ಕಾಣಕೋಣದ ಪ್ರಸಾದ ಲಿಂಗು ನಾಯ್ಕ ಎಂಬಾತನನ್ನು ಬಂಧಿಸಿ 2 ಲಕ್ಷ ರೂ. ಮೌಲ್ಯದ ಕಾರು ಹಾಗೂ 78,450 ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಖಾಲಿ ಕ್ಲೋರಿಂಗ್ ಸಿಲಿಂಡರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಲಾರಿಯಲ್ಲಿ ಅಕ್ರಮ ಗೋವಾ ಮದ್ಯ ಹಾಗೂ 5 ಲೀ. ಬಿಯರ್ ಪತ್ತೆಯಾಗಿದೆ. ತಕ್ಷಣ ಆರೋಪಿ ಚಾಲಕ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ನಾಗಪ್ಪ ಶಿವಬಸು ಕಾಂಬಳೆ ಎಂಬಾತನನ್ನು ಬಂಧಿಸಿ ಸುಮಾರು 90 ಸಾವಿರ ರೂ. ಮೌಲ್ಯದ ಮದ್ಯ, 30 ಲಕ್ಷ ರೂ. ಮೌಲುಯದ ಲಾರಿ ಹಾಗೂ ಲಾರಿಯಲ್ಲಿದ್ದ 8 ಲಕ್ಷ ರೂ. ಮೌಲ್ಯದ 10 ಖಾಲಿ ಕ್ಲೋರಿಂಗ್ ಸಿಲಿಂಡರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ತನಿಕೆ ಮುಂದುವರಿದಿದೆ.

ಜಿಲ್ಲಾ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ಅವರ ನಿರ್ದೇಶನದಲ್ಲಿ, ಕಾರವಾರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಬಸವರಾಜ ಕರವಿನಕೋಪ್ಪ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ದಯಾನಂದ, ಅಬಕಾರಿ ಉಪ ನಿರೀಕ್ಷಕ ಎಂ. ಎಂ. ನಾಯ್ಕ ಸಿಬ್ಬಂದಿಗಳಾದ ಎನ್. ಜಿ. ಜೋಗಳೆಕರ, ಸುರೇಶ ಹಾರೂಗೋಪ್ಪ, ರಂಜನಾ ನಾಯ್ಕ, ನಾಗರಾಜ, ಎ. ಎಸ್. ಪೊಂಡೇಕರ ಹಾಗೂ ಎನ್. ಎನ್. ಖಾನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು