News Karnataka Kannada
Saturday, May 04 2024
ಉತ್ತರಕನ್ನಡ

ಕಾರವಾರ: ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡೆಂಟ್ ಮನೋಜ್ ಬಾಡಕರ್ ಕಾರವಾರಕ್ಕೆ ಆಗಮನ

Karw
Photo Credit : By Author

ಕಾರವಾರ: ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡೆಂಟ್ ಮನೋಜ್ ಬಾಡಕರ್ ಅವರು ಶುಕ್ರವಾರ ಕಾರವಾರಕ್ಕೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ್ದು ಸ್ಥಳೀಯರು ಅವರು ಪುಷ್ಪ ಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು.

ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮೂರು ದಿನಗಳ ಕಾರವಾರ ಪ್ರವಾಸದಲ್ಲಿರುವ ಮನೋಜ್ ಬಾಡಕರ್ ಅವರು ಮೂಲತಃ ಕಾರವಾರದವರೇ ಆಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ಅವರು ಕಾರವಾರದ ಮಾಲಾದೇವಿ ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿಯಲಿದ್ದಾರೆಂಬ ಸುದ್ದಿ ತಿಳಿದು ಅವರ ಸ್ನೇಹಿತರು, ಹಳೆಯ ಸಹಪಾಠಿಗಳು, ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಸೇರಿದಂತೆ ಸಾರ್ವಜನಿಕರು ಮೊದಲೇ ಮೈದಾನದಲ್ಲಿ ಕಾಯುತ್ತಿದ್ದರು.

ಹೆಲಿಕಾಪ್ಟರ್‌ನಿಂದ ಬಂದಿಳಿಯುತ್ತಿದ್ದಂತೆ ಯಾವುದೇ ಹಬ್ಬು ಬಿಮ್ಮು ಇಲ್ಲದೆ ಎಲ್ಲರನ್ನೂ ಅವರು ಭೇಟಿಯಾದರು. ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡಿ ಸೆಲ್ಫಿ, ಫೊಟೊ ಕ್ಲಿಕ್ಕಿಸಿಕೊಳ್ಳಲು ಅನುವು ಮಾಡಿಕೊಟ್ಟರು.ತಾವು ಕಲಿತ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಭೇಟಿ ಮಾಡಿ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.

ವಿದ್ಯಾರ್ಥಿಗಳಿಗೆ ತಾವೂ ಮುಂದೊಂದು ದಿನ ನನ್ನಂತೆ ಅಥವಾ ನನಗಿಂತಲೂ ದೊಡ್ಡದಾದ ಹುದ್ದೆಯನ್ನ ಅಲಂಕರಿಸುವಂತಾಗಬೇಕೆಂದು ಶುಭ ಹಾರೈಸಿದರು. ಕಾರವಾರ ನಗರದಿಂದ ಹೊರಟ ಅವರು, ಸೀಬರ್ಡ್ ನೌಕಾನೆಲೆಗೆ ತೆರಳಿ ಅಲ್ಲಿ ಎಫ್‌ಒಕೆ ಭೇಟಿಯಾಗಿ, ಶನಿವಾರ ಜಿಲ್ಲಾಧಿಕಾರಿಗಳು, ಮೀನುಗಾರರು, ಭೇಟಿಯಾಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು