News Karnataka Kannada
Monday, April 29 2024
ಉತ್ತರಕನ್ನಡ

ಕಾರವಾರ: ಪರಿಸರ ಕಾಳಜಿ ಇಂದು ತೀರಾ ಅನಿವಾರ್ಯ – ಪ್ರಭುಲಿಂಗ ಕವಳಿಕಟ್ಟಿ

Environmental concerns are absolutely inevitable today- Prabhulinga Kavalikatti
Photo Credit : News Kannada

ಕಾರವಾರ: ಇಂದಿನ ದಿನಗಳಲ್ಲಿ ಪರಿಸರ ಸ್ವಚ್ಚತೆ ಕಾಪಾಡುವುದು ಪ್ಲಾಸ್ಟಿಕ್ ಹಾಗೂ ಕೊಳೆಯದೆ ಇರುವ ವಸ್ತುಗಳ ಅತಿಯಾದ ಬಳಕೆಯ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ನಗರದ ರವೀಂದ್ರನಾಥ ಕಡಲತೀರದಲ್ಲಿ ವಿಶ್ವ ಸಾಗರ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಕುರಿತ ಬಳಕೆಯಲ್ಲಿ ಕೇವಲ ಸರಕಾರದ ಕೆಲಸವಾಗದೆ ಎಲ್ಲ ಜನಸಾಮಾನ್ಯರು ಕ್ರಿಯಾತ್ಮಕವಾಗಿ ಪಾಲ್ಗೊಂಡಾಗ ಮಾತ್ರ ಇಂತಹ ಕಾರ್ಯಕ್ರಮ ಯಶಸ್ವಿಯಾಗುತ್ತವೆ. ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್‌ಗಳನ್ನು  ತಡೆಯಲು ಕೇಂದ್ರ ಸರಕಾರವು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ತರಲಿದೆ ಎಂದರು. ಬಳಿಕ ಡಾ.ರಾಠೋಡ್‌,  ಜಯೇಶ ಎ.ಸಿ.ಎಸ್‌ ಅ ವರು ಕಾರ್ಯಕ್ರಮದ ಮಹತ್ವದ ಬಗೆ ಮತ್ತು ಸಾಗರ ಮಾಲಿನ್ಯದ ಇಂದಿನ ಸ್ಥಿತಿಗತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಮಾರು 1 ಕಿ.ಮಿ ಕ್ರಮಿಸಿ 566 ಕೆ.ಜಿ ವಿವಿಧ ರೀತಿಯ ತ್ಯಾಜ್ಯವನ್ನು ಸಂಗ್ರಹಿಸಿದರು.

140 ಕೆ.ಜಿ ಯಷ್ಟು ಗಾಜಿನ ಮದ್ಯದ ಬಾಟಲಿ, 70 ಕೆ.ಜಿ ಡೈಪರ್, 83 ಕೆ.ಜಿ ಇತರೆ ವಿವಿಧ ಪ್ಲಾಸ್ಟಿಕ್‌  ವಸ್ತುಗಳು, 28 ಕೆ.ಜಿ ಚಪ್ಪಲಿ ಮತ್ತು ಶೂಗಳು, ಆಹಾರ ಪೊಟ್ಟಣಗಳು, 5 ಕೆ.ಜಿ ಗಾಜಿನ ಬಾಟಲಿಗಳು, 4 ಕೆ.ಜಿ ಪ್ಲಾಸ್ಟಿಕ್ ಕಪ್, 5 ಕೆ.ಜಿ ಥರ್ಮೊಕೊಲ್‌  ಇತ್ಯಾದಿ ತ್ಯಾಜ ವಸ್ತುಗಳಿದ್ದವು.

ಈ ಕಾರ್ಯಕ್ರಮದಲ್ಲಿ, ಕ.ವಿ.ವಿ ಸ್ನಾತಕೋತ್ತರ ಕೇಂದ್ರ ಆಡಳಿತಾಧಿಕಾರಿ ಶಾಹಿನ ಶೇಖ್, ಡಾ. ಜಗನ್ನಾಥ ಎಲ್.ರಾಠೋಡ, ಡಾ. ಶಿವಕುಮಾರ ಹರಗಿ, ಪ್ರಮೋದ ನಾಯಕ ಅರಣ್ಯ, ಅನು ನಾಯರ ಡಾ.ಗುಲ್ನಾಪ್ ಡಾ. ಪ್ರಜ್ಞಾ ಬಾಂದೇಕರ, ಡಾ. ಶ್ರೀದೇವಿ ಹಕ್ಕಿಮನಿ, ಕುಮಾರಿ ಸುಜಲ ರೇವಣಕರ, ಸೂರಜ ಪೂಜಾರ, ಶಾನವಾಜ ಕಡಪ, ಶ್ರೀ ರಾಮು ರಾಠೋಡ ಹಾಗೂ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು