ಕಾರವಾರ: ಸೋಲಿನಿಂದ ವಿಚಲಿತರಾಗಬೇಕಿಲ್ಲ, ಸಂಘಟನೆ ಬಲಪಡಿಸೋಣ- ರೂಪಾಲಿ ನಾಯ್ಕ

ಕಾರವಾರ: ಚುನಾವಣೆ ಅಂದಾಗ ಸೋಲು ಗೆಲುವು ಸಹಜ. ಆದರೆ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಇಷ್ಟೊಂದು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಜನತೆ ಹಗಲಿರುಳು ದುಡಿದಿರುವುದು ನನಗೆ ಹೃದಯತುಂಬಿ ಬಂದಿದೆ. ಸೋಲಿನಿಂದ ಯಾರೂ ಅಧೀರರಾಗಬೇಕಿಲ್ಲ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಅಪಾರ ಕಾರ್ಯಕರ್ತರು, ಅಭಿಮಾನಿಗಳು, ಜನತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಅತೀವ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಸೋಲಿನಿಂದ ಯಾವೊಬ್ಬ ಕಾರ್ಯಕರ್ತರೂ ವಿಚಲಿತರಾಗಬೇಕಿಲ್ಲ. ಹತಾಶರಾಗಬೇಕಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆಯೊಂದಿಗೆ ಸದಾ ನಾನು ಇದ್ದೇನೆ. ಕಾರ್ಯಕರ್ತರ ಹಾಗೂ ಎಲ್ಲರ ಶ್ರಮದಿಂದಾಗಿಯೇ ನಮ್ಮ ಭಾರತೀಯ ಜನತಾ ಪಾರ್ಟಿ ಕ್ಷೇತ್ರದಲ್ಲಿ ಇಷ್ಟೊಂದು ಬಲಿಷ್ಠವಾಗಿ ಬೆಳೆದುನಿಂತಿದೆ. ಮುಂದೆಯೂ ಕಾರ್ಯಕರ್ತರೊಂದಿಗೆ ಸೇರಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಸದ್ಯದಲ್ಲೇ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ವಿಚಾರ ವಿನಿಮಯ ನಡೆಸಲು ಸಭೆ ನಡೆಸಲಾಗುವುದು.

ಪಕ್ಷ ತಾಯಿ ಇದ್ದಂತೆ. ಪಕ್ಷ ನಿಷ್ಠರಾದ ಸಾವಿರಾರು ಕಾರ್ಯಕರ್ತರ ಶ್ರಮದಿಂದ ಪಕ್ಷ ಅಗಾಧವಾಗಿ ಬೆಳೆದುನಿಂತಿದೆ. ಮುಂಬರುವ ದಿನಗಳಲ್ಲಿ ಎಲ್ಲರೂ ಸೇರಿ ಪಕ್ಷವನ್ನು ಮತ್ತಷ್ಟು, ಇನ್ನಷ್ಟು ಬೆಳೆಸೋಣ. ಯಾವುದೇ ಕಾರಣಕ್ಕೂ ಧೃತಿಗೆಡುವ ಅವಶ್ಯಕತೆ ಇಲ್ಲ. ಇದು ಸೋಲಲ್ಲ ನಮ್ಮ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆಯ ಗೆಲುವು ಎಂದು ಅವರು ಪ್ರಕಟಣೆಯ ಮೂಲಕ ಕಾರ್ಯಕರ್ತರು, ಅಭಿಮಾನಿಗಳು, ಜನತೆಯಲ್ಲಿ ವಿನಂತಿಸಿದ್ದಾರೆ.

Gayathri SG

Recent Posts

ಟಿ20 ವಿಶ್ವಕಪ್‌ : ಕೆ.ಎಲ್‌. ರಾಹುಲ್‌ಗೆ ಇಲ್ಲ ಅವಕಾಶ

ಇಂದು ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ 15 ಸದಸ್ಯರ ಬಳಗದ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ತಂಡವನ್ನು…

12 mins ago

ರಾಜು ಆಲಗೂರರಿಗೆ ‘ಶುಭ’ತಂದ ಮಂಗಳ ಮುಖಿಯರು

ಮಂಗಳವಾರ ಇಲ್ಲಿನ ಕಾಂಗ್ರೆಸ್ ಕಾರ್ಯಾಲಯ ಕಳೆಗಟ್ಟಿತ್ತು. ಇದಕ್ಕೆ ಕಾರಣ, ಮಂಗಳ ಮುಖಿಯರ ನಗು ಮೊಗದ ಕಲರವ. ಹೌದು, ಅವರೆಲ್ಲ ಕಾಂಗ್ರೆಸ್…

39 mins ago

ಟಿ20 ವಿಶ್ವಕಪ್​​: ಟೀಮ್​ ಇಂಡಿಯಾದಲ್ಲಿ ದಿನೇಶ್​ ಕಾರ್ತಿಕ್​ಗೆ ಇಲ್ಲ ಸ್ಥಾನ !

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯೋ ಚುಟುಕು…

1 hour ago

ಬಾವಿಗೆ ಇಳಿದ ಇಬ್ಬರು ಸ್ನೇಹಿತರ ದಾರುಣ ಸಾವು

ವಿಜಯಪುರ ಜಿಲ್ಲೆಯಲ್ಲಿ ಇಂದು 40 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಸುಡುತ್ತಿರುವ ಬಿಸಿಲಿನ ಧಗೆ ತಡೆಯಲಾರದೆ ಇಬ್ಬರು ಸ್ನೇಹಿತರು ಬಾವಿಗಿಳಿದು ನೀರಲ್ಲಿ…

1 hour ago

ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿರುವ ಅಕ್ಷತ್‌ ಕುಲಾಲ್‌ ಚಿಕಿತ್ಸೆ ಗೆ ನೆರವಾಗೋಣ

ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿರುವ ಯುವನೋರ್ವನಿಗೆ ಸಹಾಯದ ಹಸ್ತ ಬೇಕಾಗಿದೆ. ಹೌದು. . ಮಿತ್ತೂರಿನ ಯುವಕ ಅಕ್ಷತ್‌ ಕುಲಾಲ್‌ ಎಂಬಾತ…

1 hour ago

ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರ ಆಕ್ರೋಶ : ಬ್ರಹತ್ ಪ್ರತಿಭಟನೆ

ಪ್ರಜ್ವಲ್ ರೇವಣ್ಣ ವಿರುದ್ಧ ಹುಬ್ಬಳ್ಳಿ ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೀಪಾ ನಾಗರಾಜ ಗೌರಿ ನೇತೃತ್ವದಲ್ಲಿ ಬಿಜೆಪಿ ವಿರುದ್ಧ…

2 hours ago