Categories: ವಿದೇಶ

ಖಾರ್ಟೂಮ್: ಸುಡಾನ್‌ ಘರ್ಷಣೆ ಕನಿಷ್ಠ 676 ಮಂದಿ ಸಾವು

ಖಾರ್ಟೂಮ್: ಸುಡಾನ್ ಸೇನೆ ಮತ್ತು ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವಿನ ಘರ್ಷಣೆಯಲ್ಲಿ ಇದುವರೆಗೆ ಕನಿಷ್ಠ 676 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎ) ವರದಿ ತಿಳಿಸಿದೆ.
“ಸುಡಾನ್ ಸಶಸ್ತ್ರ ಪಡೆಗಳು ಮತ್ತು ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಘರ್ಷಣೆಗಳು ಸತತ 30 ದಿನದಿಂದ ಮುಂದುವರಿಯುತ್ತಿದೆ. ಖಾರ್ಟೂಮ್ ಮತ್ತು ಸುತ್ತಮುತ್ತ ಕನಿಷ್ಠ 676 ಜನರು ಸಾವನ್ನಪ್ಪಿದ್ದಾರೆ ಮತ್ತು 5,576 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ಏಪ್ರಿಲ್ 15 ರಿಂದ 9,36,000 ಕ್ಕೂ ಹೆಚ್ಚು ಜನರು ಸಂಘರ್ಷದಿಂದ ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. 2,00,000 ಜನರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಏಪ್ರಿಲ್ ಮಧ್ಯದಲ್ಲಿ ಘರ್ಷಣೆಗಳು ಪ್ರಾರಂಭವಾದಾಗಿನಿಂದ, ಸುಡಾನ್ ರಾಜಧಾನಿ ಖಾರ್ಟೂಮ್‌ನ ನಿವಾಸಿಗಳು ತೀವ್ರ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಭಾನುವಾರ, ಸುಡಾನ್ ಸೇನೆಯು ಓಮ್‌ಡುರ್‌ಮನ್ ನಗರದ ಅಲ್-ಮಸಲ್ಮಾ ಪ್ರದೇಶದ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಆರಾಧಕರನ್ನು ಗುಂಡಿಕ್ಕಿದೆ ಆರ್‌ಎಸ್‌ಎಫ್ ಆರೋಪಿಸಿದೆ.

Umesha HS

Recent Posts

ಕೋವಿಶೀಲ್ಡ್ ಪಡೆದ ಬಳಿಕ ಭಾರತದ ಇಬ್ಬರು ಹೆಣ್ಮಕ್ಕಳು ಸಾವು !

ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್​ ಮುಂದೆ ಒಪ್ಪಿಕೊಂಡಿದೆ.

6 mins ago

ಏಳು ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಪ್ರಯಾಣಿಕ ಹಡಗು

ಏಳು ವರ್ಷಗಳ ಬಳಿಕ ಮತ್ತೆ ಮಂಗಳೂರು ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭವಾಗಿದ್ದು, ಗುರುವಾರ ಸಂಜೆ ಲಕ್ಷದ್ವೀಪದಿಂದ 150ಕ್ಕೂ…

15 mins ago

ಬೃಹತ್ ಗಾತ್ರದ ಮರ ಬಿದ್ದು ಹೊಸ ಕಾರು ಜಖಂ

ನಿಂತಿದ್ದ ಹೋಂಡಾ ಎಲಿವೇಟ್ SUV ಬ್ರಾಂಡ್ ಹೊಸ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಘಟನೆ ಲಾವೆಲ್ಲೇ ರೋಡ್​ನಲ್ಲಿ ನಡೆದಿದೆ.

34 mins ago

ಈ ನಾಯಕನ ರಾಸಲೀಲೆಗೆ ವರ್ಷಕ್ಕೆ 25 ಹುಡುಗಿಯರು ಬೇಕಂತೆ!

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ತನ್ನ ವಿಚಿತ್ರ ನಿರ್ಧಾರಗಳಿಂದಲೇ ಸುದ್ದಿಯಾದವರು.ಸದ್ಯ ಇವರ ಮೇಲೆ ಯೆನ್ಮಿ ಪಾರ್ಕ್…

44 mins ago

ಕಬಕದಲ್ಲಿ ಸರಣಿ ಅಪಘಾತ: ಆ್ಯಂಬುಲೆನ್ಸ್ ಗೆ ಡಿಕ್ಕಿ ಹೊಡೆದ ಕಾರು

ಮಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸಿಗೆ ನ್ಯಾನೋ ಕಾರು ಡಿಕ್ಕಿ ಹೊಡೆದಿದ್ದು, ನ್ಯಾನೋ ಕಾರಿಗೆ ಮಂಗಳೂರಿನಿಂದ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿಯಾದ…

53 mins ago

ಸಂಸದ ಪ್ರಜ್ವಲ್‌ ಗೆ ಅಭಿಮಾನಿಯಿಂದ ಶುಭಾಶಯ ಪತ್ರ

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳು ದೇಶಾದ್ಯಂತ ಭಾರೀ ಚರ್ಚೆ ಯಾಗುತ್ತಿದ್ದು, ಈ ನಡುವೆ ಅಭಿಮಾನಿಯೊಬ್ಬ ಪ್ರಜ್ವಲ್‌…

1 hour ago