News Karnataka Kannada
Wednesday, May 08 2024
ಉತ್ತರಕನ್ನಡ

ಕಾರವಾರ: ಬರುವ ಮೂರು ವರ್ಷದಲ್ಲಿ ಕೋಸ್ಟ್ ಗಾರ್ಡ್ ಮುಖ್ಯ ಕಚೇರಿ ನಿರ್ಮಾಣ

I G
Photo Credit : By Author

ಕಾರವಾರ: ಅಮದಳ್ಳಿಯ ೨೬ ಎಕರೆ ಪ್ರದೇಶದಲ್ಲಿ ೧೪೦ ಕೋಟಿ ವೆಚ್ಚದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ನ ನೂತನ ಕಚೇರಿಗೆ ಕಟ್ಟಡ ನಿರ್ಮಾಣವಾಗಲಿದ್ದು ೩ ವರ್ಷಗಳಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಐಜಿ ಮನೋಜ ಬಾಡ್ಕರ ತಿಳಿಸಿದ್ದಾರೆ.

ಅರ್ಗಾದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಳೆದ ೧೨ ವರ್ಷಗಳಿಂದ ಕೋಸ್ಟ್ ಗಾರ್ಡ್ ಕಚೇರಿ ನಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ನಗರದಲ್ಲಿ ಕಡಲತೀರದ ಬಳಿ ಕಚೇರಿಗಾಗಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತವು ಸೂಕ್ತ ಜಾಗವನ್ನು ಗುರುತಿಸಿ ಕೋಸ್ಟ್ ಗಾರ್ಡ್ ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿತ್ತು. ಈ ಸ್ಥಳದಲ್ಲಿ ಹಾವರ್ ಕ್ರಾಪ್ಟರ್ ಹಾಗೂ ಹೆಲಿಕ್ಯಾಪ್ಟರ್ ನಿಲುಗಡೆ ಸೇರಿದಂತೆ ವಿವಿಧ ಯೋಜನೆ ಸೇರಿದ್ದವು. ಆದರೆ ಇದರಿಂದ ಸ್ಥಳೀಯ ಮೀನುಗಾರರಿಗೆ ತೊಂದರೆ ಉಂಟಾಗುತ್ತದೆ ಎಂದು ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲಾಗಿತ್ತು. ದೇಶದ ಗಡಿ ರಕ್ಷಣೆ, ಮೀನುಗಾರರ ರಕ್ಷಣೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಸಮಯದಲ್ಲಿ ನೆರವಾಗಲು ಕೋಸ್ಟ್ ಗಾರ್ಡ್ ಅತೀ ಅವಶ್ಯಕವಾಗಿದ್ದರಿಂದ ಕಾರವಾರ ತಾಲೂಕಿನ ವಿವಿಧೆಡೆ ಕಚೇರಿ ನಿರ್ಮಾಣಕ್ಕೆ ಜಾಗದ ಹುಡುಕಾಟ ನಡೆದಿತ್ತು. ಅಂತಿಮವಾಗಿ ಅಮದಳ್ಳಿಯ ಕಂತ್ರಿವಾಡಾ, ಕಿಳಕೋಣ, ತೋಟನಕೇರಿ ಈ ಗ್ರಾಮಗಳ ಮಧ್ಯ ಭಾಗದಲ್ಲಿ ಇರುವ ಖಾಲಿ ಜಾಗವನ್ನು ಗಮನಿಸಿ ಇದು ಯೋಗ್ಯ ಸ್ಥಳ ಎಂದು ತೀರ್ಮಾನಿಸಿ ಈ ಜಾಗದ ಮಾಲೀಕರೊಂದಿಗೆ ಚರ್ಚಿಸಿದ ಆಧಿಕಾರಿಗಳು ಅವರಿಂದ ಮಾರುಕಟ್ಟೆ ದರದಲ್ಲಿ ಒಟ್ಟೂ ೨೬ ಎಕರೆ ಜಾಗವನ್ನು ಖರೀದಿಸಿದ್ದರು. ಈ ಜಾಗದಲ್ಲಿ ಅವಶ್ಯಕವಾದ ವಿವಿಧ ರೀತಿಯ ಹಲವು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಲಾಗಿದೆ.

ಕೋಸ್ಟ್ ಗಾರ್ಡ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಿವಾಹ ವಸತಿ ಮತ್ತು ಓಟಿಎಂ(ವಿವಾಹೇತರ) ಮೂಲ ಸೌಕರ್ಯ ಒದಗಿಸಲು ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಮೂಲ ಸೌಕರ್ಯಗಳಲ್ಲಿ ವಿಧ ೨ ರ ೫೪ ವಿವಾಹಿತ ವಸತಿ ಮತ್ತು ಇತರೆ ನಿರ್ವಾಹಕರ ೫೪ ಕಟ್ಟಡಗಳು, ವಿಧ ೩ ರ ೩೧ ಕಟ್ಟಡಗಳು, ವಿಧ ೪ ರ ೨ ಕಟ್ಟಡಗಳು, ವಿಶೇಷ ವಿಧ ೪ ರ ೭ ಕಟ್ಟಡಗಳು ಹಾಗೂ ವಿಧ ೫ ರ ೫ ಕಟ್ಟಡಗಳು ನಿರ್ಮಾಣವಾಗಲಿವೆ. ಇವುಗಳಲ್ಲಿ ಅಧಿಕಾರಿ, ಅಧೀನ ಅಧಿಕಾರಿ, ಏಕಾಂಗಿ ವಸತಿ, ಅಡುಗೆ ಮನೆ, ಊಟದ್ ಹಾಲ್, ವೈದ್ಯಕೀಯ ಕೊಠಡಿ, ಕಾವಲು ಕೊಠಡಿ, ಕಾವಲು ಗೋಪುರ, ಮಳೆ ನೀರಿನ ಸಂಗ್ರಹ, ವೃಕ್ಷ ಕೃಷಿ, ಕಂಪೌAಡ್ ಹಾಗೂ ರಸ್ತೆಯನ್ನು ಒಳಗೊಂಡಿದೆ.

ಇದಲ್ಲದೇ ಕಾರು ಪಾರ್ಕಿಂಗ್, ಎಸ್.ಟಿ.ಪಿ ಹಾಗೂ ಸ್ಯಾನಿಟರಿ ಅಳವಡಿಕೆ ವ್ಯವಸ್ಥೆ ಸೇರಿ ಪರಿಸರಕ್ಕೆ ಪೂರಕವಾದ ಹಸಿರು ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅಮದಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಕೋಸ್ಟ್ ಗಾರ್ಡ್ ಕಚೇರಿಯಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಾಗದು. ಹರಿದು ಹೋಗುವ ನೀರು ಮೊದಲಿನಂತೆಯೇ ಹೋಗಲಿದ್ದು ಯಾವುದೇ ಅಡೆತಡೆ ಮಾಡಲಾಗುವುದಿಲ್ಲ. ಇನ್ನು ಈ ಗ್ರಾಮಕ್ಕೆ ಬರುವ ರಸ್ತೆ ಕಿರಿದಾಗಿದ್ದು ಅದನ್ನು ನಮಗೆ ನೀಡಿದರೆ ಅಭಿವೃದ್ಧಿ ಮಾಡಿ ಶಾಶ್ವತವಾಗಿ ಕೋಸ್ಟ್ ಗಾರ್ಡ್ ವತಿಯಿಂದ ಅಭಿವೃದ್ಧಿ ಆಗಲಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು