News Karnataka Kannada
Sunday, May 12 2024
ಉತ್ತರಕನ್ನಡ

ಕಾರವಾರ: ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ನರೇಗಾದಡಿ ಬ್ಲ್ಯಾಕ್ ಫಾರೆಸ್ಟ್ ಕಾಮಗಾರಿ

Karwar: Black forest works under NAREGA in social forestry area
Photo Credit : By Author

ಕಾರವಾರ: ಜಿಲ್ಲೆಯ ಮುಂಡಗೋಡ ತಾಲೂಕಿನ ಗುಂಜಾವತಿ ಗ್ರಾಮ ಪಂಚಾಯತ್‌ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಡಿ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಬ್ಲ್ಯಾಕ್ ಫಾರೆಸ್ಟ್ ಕಾಮಗಾರಿಕೈಗೊಂಡು ಜಿಲ್ಲಾ ಪಂಚಾಯತ್‌ನಿಂದ ನೀಡಲಾದ ಗುರಿ ಮೀರಿ ಮಾನವ ದಿನಗಳನ್ನ ಸೃಜಿಸಲಾಗಿದೆ.

ಗುಂಜಾವತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಕಾರಿಗಳ ನಿರ್ದೇಶನದಂತೆ ಕಾಮಗಾರಿಕೈಗೆತ್ತಿಕೊಂಡಿದ್ದು, ಈಗಾಗಲೇ ಜಿಲ್ಲಾ ಪಂಚಾಯತ್‌ನಿಂದ ನೀಡಲಾದ ೩೩೦೦ ಮಾನವ ದಿನಗಳ ಗುರಿಯ ಪೈಕಿ ಈವರೆಗೆ ೮೫೦೦ ಮಾನವ ದಿನಗಳನ್ನು ಸೃಜಸಿ ಗುರಿ ಸಾಧಿಸಲಾಗಿದೆ. ಇನ್ನು ಈ ಕಾಮಗಾರಿಯಲ್ಲಿ ಪ್ರಮುಖವಾಗಿ ಪ್ರತಿ ನಿತ್ಯ ಸಿದ್ದಿ ಜನಾಂಗದ ನೂರಾರು ಕೂಲಿಕಾರರು ತೊಡಗಿಕೊಂಡಿದ್ದಾರೆ. ಜೊತೆಗೆ ಕೂಲಿಕಾರರ ೧೦೦ ದಿನಗಳ ಕೆಲಸವು ಕೂಡಾ ಪೂರ್ಣಗೊಳ್ಳುತ್ತಿದೆ.

ಡೆಪ್ಯೂಟಿ ಆರ್‌ಎಫ್‌ಒ ಗೋವಿಂದ ಬಸಾಪುರ ಮಾತನಾಡಿ, ಸಾಮಾಜಿಕ ಅರಣ್ಯ ಇಲಾಖೆಯಡಿ ೨೦೨೨-೨೩ನೇ ಸಾಲಿನಲ್ಲಿ ಪ್ಲಾಂಟಿಂಗ್, ಪಿಟ್, ಬರಾವು ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ೪ ರಸ್ತೆ ಬದಿ ಗಿಡ ನೆಡುವ ಕಾಮಗಾರಿಕೈಗೊಂಡು ಪೂರ್ಣಗೊಳಿಸಲಾಗಿದ್ದು, ಒಟ್ಟು ೨೦೦೦ ಸಸಿಗಳನ್ನು ನೆಡಲಾಗಿದೆ. ಇನ್ನೂ ೪ ಬ್ಲ್ಯಾಕ್ ಫಾರೇಸ್ಟ್ ಕಾಮಗಾರಿಗಳು ಹಾಗೂ ೩ ಕಡೆ ಟ್ರೇಂಚ್ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯತ್ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾತನಾಡಿ, ನರೇಗಾ ಯೋಜನೆಯಡಿ ಕೂಲಿಕಾರರಿಗೆ ಸಿಗುವ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಕೂಲಿಕಾರರಿಗೆ ಎನ್.ಎಮ್.ಎಮ್.ಎಸ್. ಆ್ಯಪ್ ಸಹಾಯಧನ, ಇಶ್ರಮಕಾರ್ಡ್ನ ಅನುಕೂಲತೆಗಳನ್ನು ಕಾಮಗಾರಿ ಸ್ಥಳದಲ್ಲಿದ್ದ ಕೂಲಿಕಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಬಿಎಫ್‌ಟಿ ಮಂಜುನಾಥ ಪೂಜಾರಿ, ಮೇಟ್‌ಕರೀಂ ಸಾಬ್ ಸೇರಿದಂತೆ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು