ಚುನಾವಣೆಯಲ್ಲಿ ಮಹಿಳೆಯನ್ನು ಸೋಲಿಸಲು ಒಂದಾದ ಮಾಜಿಗಳು: ರೂಪಾಲಿ ನಾಯ್ಕ

ಕಾರವಾರ: ಮಹಿಳೆಯೊಬ್ಬಳನ್ನು ಸೋಲಿಸಲು ಅನೇಕ ಮಾಜಿಗಳು ಒಂದಾಗಿದ್ದಾರೆ. ಕೆಲವರು ಆಮಿಷಕ್ಕೆ ಬಲಿಯಾದ ಕಾರಣ ನಮಗೆ ಹಿನ್ನಡೆಯಾಗಿದೆ. ಆದರೆ ಇದನ್ನು ಸೋಲು ಎಂದು ಭಾವಿಸುವುದು ಸೂಕ್ತವಲ್ಲ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.

ನಗರದ ದೇವಳಿವಾಡದಲ್ಲಿ ರವಿವಾರ ಹಮ್ಮಿಕೊಂಡಿದ್ದ ನಗರ ಹಾಗೂ ಗ್ರಾಮೀಣ ಮಂಡಳದ ಪ್ರಮುಖರು, ಕಾರ್ಯಕರ್ತರು, ಪದಾಧಿಕಾರಿಗಳ ಹಾಗೂ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಕಾರ್ಯಕರ್ತರನ್ನು ಸಂತೈಸಿದ ಅವರು, ಕಾರ್ಯಕರ್ತರು, ಹಿತೈಷಿಗಳು ನಿತ್ಯವೂ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಅಲ್ಪ ಮತದ ಹಿನ್ನಡೆಯನ್ನು ಸೋಲು ಎಂದು ಭಾವಿಸಬೇಕಾಗಿಲ್ಲ. ನಾನು ಎಂದಿಗೂ ಅಧಿಕಾರಕ್ಕಾಗಿ ಖುರ್ಚಿಗಾಗಿ ಅಂಟಿಕೊಂಡವಳಲ್ಲ. ಕ್ಷೇತ್ರದ ಜನತೆ ನನಗೆ ಉತ್ತಮ ರಿತಿಯಲ್ಲಿಯೇ ಮತದಾನ ಮಾಡಿದ್ದಾರೆ. ಸಾವಿರ ಮತಗಳ ಅಂತರದಿಂದ ಹಿನ್ನಡೆಯಾಗಿದೆ. ಆದರೆ ಮುಂದೆಯೂ ನಿಮ್ಮ ಜೊತೆ ನಿಂತು ಕೆಲಸಮಾಡುವುದಾಗಿ ತಿಳಿಸಿದರು.

ಮಹಿಳೆಯನ್ನು ಸೋಲಿಸುವುದಕ್ಕಾಗಿ ಎಲ್ಲ ದೊಡ್ಡ ಮುಖಂಡರು ಒಂದಾಗಿದ್ದರು. 25 ಸಾವಿರ ಮತಗಳಿಂದ ಗೆಲ್ಲುವುದಾಗಿ ಹೇಳಿಕೊಂಡವರು ಕೇವಲ 2 ಸಾವಿರ ಮತ ಅಂತರ ಪಡೆದಿದ್ದಾರೆ. ಅವರಿಗೆ ಇದು ಸೋಲಾಗಿದೆ. ಕುತಂತ್ರದಿಂದ ಜಯ ಗಳಿಸಿದ್ದಾರೆ. ನಮ್ಮ ಕಾರ್ಯಕರ್ತರ ಮನೆ ಮುಂದೆ ಪಟಾಕಿ ಸಿಡಿಸಿದ್ದಾರೆ. ಇದು ಹೇಡಿಗಳ ಲಕ್ಷಣ. ಈಗಾಗಲೇ ಪ್ರವಾಸಿ ಮಂದಿರಗಳಲ್ಲಿ ಅಧಿಕಾರಿಗಳ ಬಳಿ ಪರ್ಸಂಟೇಜ್ ಬಗ್ಗೆ ಮಾತನಾಡುತ್ತಿರುವ ಮಾಹಿತಿ ಇದೆ ಎಂದು ಆರೋಪಿಸಿದರು.

ಇನ್ನು ಇದಕ್ಕೂ ಮೊದಲು ಕಾರ್ಯಕರ್ತರು ಪಕ್ಷದ ಮುಖಂಡರು ಮಾತನಾಡಿ ಇದನ್ನು ಸೋಲು ಎಂದು ಭಾವಿಸಬೇಕಾಗಿಲ್ಲ. ಮುಂದಿನ ಗೆಲುವಿಗೆ ಈ ಸೋಲೆ ಮೆಟ್ಟಿಲಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಗೆ ತಾವೇ ಸ್ಪರ್ಧೆ ಮಾಡಬೇಕು. ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ನಾವೆಲ್ಲರು ಒತ್ತಾಯ ಮಾಡುವುದಾಗಿ ಅಭಿಪ್ರಾಯ ಹಂಚಿಕೊಂಡರು.

ಮಹಿಳೆಯನ್ನು ಸೋಲಿಸಲು ಕುತಂತ್ರ ಮಾಡಿದವರು ಹೇಡಿಗಳು. ಮುಂದಿನ ದಿನ ಕಾಯಿರಿ, ಅವರಿಗಿದೆ ಮಾರಿ ಹಬ್ಬ, ಮುಂದೆ ಹೋಗಿ ಒಂದು ಹೆಜ್ಜೆ ಹಿಂದೆ ಬಂದಿದೆ ಎಂದರೆ ಅದರ ಹಿಂದೆ ಅರ್ಥವಿರುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸಾಮರ್ಥ್ಯ ತೋರಿಸಬೇಕಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.ರೂಪಾಲಿ ನಾಯ್ಕ ಯಾವತ್ತೂ ಕಾರ್ಯಕರ್ತರ ಜೊತೆ ಇದ್ದಾಳೆ. ಬಿಜೆಪಿ ಕಾರ್ಯಕರ್ತರ ಋಣ ತೀರಿಸಲು ಸಾಧ್ಯವಿಲ್ಲ. ಯಾವತ್ತೂ ಅಧಿಕಾರಕ್ಕಾಗಿ, ಕುರ್ಚಿಯಲ್ಲಿರಲು ಯಾವತ್ತೂ ಆಸೆ ಪಟ್ಟವಳಲ್ಲ. ಅಧಿಕಾರ ಶಾಶ್ವತವೆಂದು ಹೋರಾಡಿದವಳೂ ಅಲ್ಲ. ಕಾರ್ಯಕರ್ತರ ನೋವು ನನಗೆ ಸಹಿಸಲಾಗಿಲ್ಲ. ಕರೆಯದಿದ್ದರೂ ಇಷ್ಟೊಂದು ಜನ ಸೇರಿರುವುದು ನೀವು ನನ್ನ ಮೇಲಿಟ್ಟ ಪ್ರೀತಿಗೆ ಸಾಕ್ಷಿ.

ಇದರಿಂದಲೇ ನಾನಿನ್ನೂ ಇಲ್ಲಿ ಗಟ್ಟಿಯಾಗಿ ನಿಂತಿದ್ದೇನೆ ಎಂದರು.ಮತದಾರರೇ ದೇವರು, ಕಾರವಾರ- ಅಂಕೋಲಾ ಕ್ಷೇತ್ರದ ಜನತೆ ನನಗೆ ಎಲ್ಲಿಯೂ ಕಡಿಮೆ ಮಾಡಿಲ್ಲ. ಕೇವಲ 2100 ಮತಗಳಷ್ಟೇ ಕಡಿಮೆ ಆಗಿರುವುದು. ಇದು ಸೋಲಲ್ಲ. ಜನತೆ ನನ್ನನ್ನ ಗೆಲ್ಲಿಸಿದ್ದಾರೆ. 75 ಸಾವಿರ ಮತ ಕೊಟ್ಟ ಜನರಿಗೆ ನಾನು ಚಿರ ಋಣಿ. ಏಕ ಮಹಿಳೆಯನ್ನ ಸೋಲಿಸಲು ಎಲ್ಲಾ ನಾಯಕರು ಒಂದಾಗಿದ್ದರು, ನಾಚಿಕೆ ಆಗಬೇಕು ಅವರಿಗೆ. ನಮಗೆ ಸೋಲಾಗಿಲ್ಲ, ಅವರಿಗಾಗಿದ್ದು ಸೋಲು. 25 ನಾಯಕರುಗಳೆಂದುಕೊಂಡರೂ 2100 ಸೋತ ಮತಗಳನ್ನ ವಿಭಜಿಸಿದರೆ ಒಬ್ಬ ನಾಯಕನ ಅರ್ಹತೆ ಕೇವಲ 25 ಮತಗಳು. ಅವರು 40- 50 ಸಾವಿರ ಮತಗಳಿಂದ ಗೆದ್ದಿದ್ದಾರೆಂಬಂತೆ ಖುಷಿ ಪಡುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಮನೆಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಿಸುವವರಿಗೆ ನಾಚಿಕಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ, ಅಷ್ಟರಲ್ಲೇ ಐಬಿಯಲ್ಲಿ ಶೇ.5 ಕಮಿಷನ್ ದು ಮಾತುಕತೆ ಮಾಡುತ್ತಿದ್ದಾರಂತೆ. ನನಗೆಷ್ಟು ಟಾರ್ಚರ್ ಮಾಡಿದರು. ಸುಳ್ಳನ್ನೇ ಸತ್ಯ ಮಾಡಲು ಹೊರಟರು. ಆದರೆ ದೇವರ ಸಾಕ್ಷಿಯಾಗಿ ಹೇಳುತ್ತೇನೆ, ಅವರಿಗೆ ಮುಂದೆ ಮಾರಿ ಹಬ್ಬ ಕಾದಿದೆ. ಕಾರ್ಯಕರ್ತರು ಹೆದರಬೇಡಿ, ನಾನಿದ್ದೇನೆ. ನಾವು ಹುಲಿಗಳು, ಇಲಿಗಳಲ್ಲ. ಧೈರ್ಯ ಕಳೆದುಕೊಳ್ಳಬೇಡಿ. ಈ ದೇಹ, ಅಧಿಕಾರ ಯಾವತ್ತೂ ಶಾಶ್ವತವಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದರು. ಈ ವೇಳೆ ನಗರಸಭೆ ಉಪಾಧ್ಯಕ್ಷ ಪಿ.ಪಿ. ನಾಯ್ಕ, ಸುಭಾಸ್ ಗುನಗಿ, ನಾಗೇಶ ಕುರ್ಡೇಕರ್, ಶಾಂತಾ ಬಿಕ್ಕು ಬಾಂದೇಕರ್, ಶುಭಂ ಕಳಸ, ಮನೋಜ್ ಬಾಂದೇಕರ್, ಸಂಜಯ್ ಸಾಳುಂಕೆ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Ashika S

Recent Posts

ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅಮೀನಾ ಖಾನ್ ರಾಜ್ಯಕ್ಕೆ ದ್ವಿತೀಯ

ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ನಂಜನಗೂಡಿನ 8 ವರ್ಷದ ಬಾಲಕಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದು ಕೀರ್ತಿ…

12 mins ago

ಬಿಜೆಪಿ ಅವಧಿಯಲ್ಲಿ ಭಾರತ ಬದಲಾಗಿದೆ: ಪ್ರಧಾನಿ ಮೋದಿ

ನಮ್ಮ ರಾಷ್ಟ್ರವನ್ನು ರಕ್ಷಿಸಲು ಹೋದ ಜಾರ್ಖಂಡ್ ಮತ್ತು ಬಿಹಾರದ ಜನರು ಗಡಿಯಲ್ಲಿ ದೇಶಕ್ಕಾಗಿ ಸಾಯುತ್ತಿದ್ದ ಸಮಯವಿತ್ತು. ಬಿಜೆಪಿ ಅವಧಿಯಲ್ಲಿ ಭಾರತ…

14 mins ago

ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ “ನೋವು ಮುಕ್ತ ಮಂಗಳೂರು” ಅಭಿಯಾನ

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ರುಮಟಾಲಜಿ (ಸಂಧಿವಾತ) ವಿಭಾಗ ಹಾಗೂ ಫಿಸಿಕಲ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಶನ್ (ದೈಹಿಕ ಔಷಧ ಮತ್ತು ಪುನರ್ವಸತಿ)…

30 mins ago

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಸ್ಪೋಟ ಬೆದರಿಕೆ : ಪೊಲೀಸ್‌ ಭದ್ರತೆ

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಪೋಟಿಸುವುದಾಗಿ ಬೆದರಿಕೆಯನ್ನು ಇಮೇಲ್‌ ಮೂಲಕ ಬಂದಿರುವುದಾಗಿ ವರದಿಯಾಗಿದೆ. ಬೆದರಿಕೆ ಹಿನ್ನಲೆಯಲ್ಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿ…

44 mins ago

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರ ಬಂಧನ

ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ ಕೊಲೆ ಪ್ರಕರಣ ಹಿನ್ನಲೆ  ಈ  ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.ರಾಯಲ್ ಕೆನಡಿಯನ್ ಮೌಂಟೆಡ್…

1 hour ago

ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಮಹಿಳೆ ನಾಪತ್ತೆ

ತನ್ನ ತಾಯಿಯೊಂದಿಗೆ ನಗರದ ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಯುವತಿ ಕಾಣೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

1 hour ago