ಜೀರೋ ಟ್ರಾಫಿಕ್‌ ಬೇಡ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ನಗರದೊಳಗೆ ಸಂಚಾರ ಮಾಡುವ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಟ್ವಿಟ್ಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದು, ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರಿ ಸ್ವೀಕರಿಸಿದ ಒಂದೇ ದಿನದಲ್ಲಿ ಈ ನಿರ್ಧಾರ ಕೈಗೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಬೆಂಗಳೂರಿನಲ್ಲಿ ತಮಗೆ ಝಿರೋ ಟ್ರಾಫಿಕ್ ಬೇಡ ಎಂದಿದ್ದರು. ಇದೀಗ ಬೊಮ್ಮಾಯಿ ಮಾದರಿಯನ್ನು ಸಿದ್ದರಾಮಯ್ಯನವರೂ ಸಹ ಅನುಸರಿಸಿದ್ದಾರೆ.

Ashika S

Recent Posts

ರಕ್ತದಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿ ಉಡುಗೊರೆ ನೀಡಲಿರುವ ಯುವಕ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ಯ ಪ್ರವಾಸದಲ್ಲಿದ್ದು, ಇಂದು ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ…

8 mins ago

ಎನ್‌ಡಿಎ ಸರ್ಕಾರ ಬಂದ್ರೆ ಮೆಕ್ಕಾಗೆ ಹೋಗುವ ಮುಸ್ಲಿಮರಿಗೆ 1 ಲಕ್ಷ ರೂ ನೆರವು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆಯುತ್ತಿದ್ದು, ರಾಜಕೀಯ ಬಿಸಿ ಹೆಚ್ಚಿದೆ.

13 mins ago

ಶ್ರೀನಿವಾಸ ಪ್ರಸಾದ್‌ ನಿಧನ; ಪ್ರಧಾನಿ ಮೋದಿ ಸಂತಾಪ

ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

21 mins ago

ಶ್ರೀನಿವಾಸ ಪ್ರಸಾದ್‌ರಂತಹ ಧೀಮಂತರು ಈಗೆಲ್ಲಿದ್ದಾರೆ: ರಾಜು ಆಲಗೂರ್ ತೀವ್ರ ಕಳವಳ

ವಿ.ಶ್ರೀನಿವಾಸ್ ಪ್ರಸಾದ ಅವರು ಒಬ್ಬ ಧೀಮಂತ ಹಾಗೂ ಜನಾನುರಾಗಿ ನಾಯಕರಾಗಿದ್ದರು ಎಂದು ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು…

26 mins ago

ಶಬ್ದ ಮಾಲಿನ್ಯದಿಂದ ನಿದ್ರೆಗೆ ಭಂಗ: ಹೃದಯಾಘಾತದ ಆತಂಕ ಹೆಚ್ಚಳ

ಇಂದು ಶಬ್ದ ಮಾಲಿನ್ಯ ಮಾತ್ರವಲ್ಲದೆ ಪ್ರತಿಯೊಂದು ಮಾಲಿನ್ಯವು ಪರಿಸರದ ಗುಣಮಟ್ಟಕ್ಕೆ ಮಾತ್ರವಲ್ಲದೆ ಮನುಷ್ಯನ ಜೀವನಕ್ಕೂ ಗಂಭೀರ ಅಪಾಯವಾಗಿದೆ. ಶಬ್ದ ಮಾಲಿನ್ಯವು…

53 mins ago

ಮಂಗಳೂರು: ಗುದನಾಳದಲ್ಲಿ ಬಚ್ಚಿಟ್ಟು 54 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ !

ಗುದನಾಳದಲ್ಲಿ ಬಚ್ಚಿಟ್ಟು 54 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.…

1 hour ago