News Karnataka Kannada
Monday, May 06 2024
ಉತ್ತರಕನ್ನಡ

ಸಂಘಟನೆ ಮೂಲಕ ಶ್ರೀಮಠಕ್ಕೆ ಹೊಸ ಆಯಾಮ: ರಾಘವೇಶ್ವರ ಶ್ರೀ

A new dimension to Sri Matha through organization: Raghaveshwara Sri
Photo Credit : News Kannada

ಗೋಕರ್ಣ: ಸಮಸ್ತ ಶಿಷ್ಯಸ್ತೋಮದ ಬುದುಕು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂಬ ಸದುದ್ದೇಶದಿಂದ ಶ್ರೀಶಂಕರಾಚಾರ್ಯರು ಅಶೋಕೆಯಲ್ಲಿ ಆರಂಭಿಸಿದ ಶ್ರೀ ರಘೂತ್ತಮ ಮಠ (ಇಂದಿನ ರಾಮಚಂದ್ರಾಪುರ ಮಠ) ಇದೀಗ ಸಂಘಟನಾತ್ಮಕವಾಗಿ ಹೊಸ ಆಯಾಮ ಪಡೆದಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಬುಧವಾರ ಸಿದ್ದಾಪುರ, ಬಿದ್ರಕಾನ, ತಾಳಗುಪ್ಪ- ಇಡವಾಣಿ ಮತ್ತು ಬಾನ್ಕುಳಿ ವಲಯಗಳ ಸಮಸ್ತ ಶಿಷ್ಯರಿಂದ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. “ವೃತ್ತ ಆರಂಭದ ಬಿಂದುವಿನಲ್ಲೇ ಮತ್ತೆ ಅಂತ್ಯವಾಗುವಂತೆ 1300 ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ಆರಂಭಿಸಿದ ಮಠಕ್ಕೆ ಇಂದು ಇಡೀ ಶಿಷ್ಯಸಮೂಹ ಬಂದು ಸೇರುತ್ತಿದೆ. ಮಠವೂ ಮೂಲಕ್ಕೆ ಬಂದಿದೆ. ಶಿಷ್ಯರೂ ಬಂದಿದ್ದಾರೆ” ಎಂದು ಬಣ್ಣಿಸಿದರು.

ಈ ಅವಿಚ್ಛಿನ ಪರಂಪರೆಯ 36 ಪೀಠಾಧಿಪತಿಗಳು ಈ ಧರ್ಮಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಈ ಅವಧಿಯಲ್ಲಿ ಸಂಘಟನಾತ್ಮಕವಾಗಿ ಶ್ರೀಮಠ ಹೊಸ ಸ್ವರೂಪ ಪಡೆದಿದ್ದು, ಜೇನುಗೂಡಿನಂಥ ವ್ಯವಸ್ಥಿತ ಸಂಘಟನೆ ಶ್ರೀಮಠದ ಅಧೀನದಲ್ಲಿ ರೂಪುಗೊಂಡಿದೆ. ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಇದನ್ನು ಮುನ್ನಡೆಸುವುದು ಶಿಷ್ಯರ ಹೊಣೆ ಎಂದು ಸೂಚಿಸಿದರು.

ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು. ಸಮಾಜದಲ್ಲಿ ಜನಸಂಖ್ಯೆ ಕ್ಷೀಣವಾಗುತ್ತಿದ್ದು, ಸಾಂಪ್ರದಾಯಿಕ ಕೇಂದ್ರಗಳು ದುರ್ಬಲವಾಗುತ್ತಿವೆ. ಯುವಕರು ಉದ್ಯೋಗ ಅರಸಿ ಪಟ್ಟಣಗಳ ಹಾದಿ ಹಿಡಿಯುತ್ತಿದ್ದು, ಮತ್ತೆ ಕೆಲವೇ ವರ್ಷಗಳಲ್ಲಿ ಅವರು ಮರಳಿ ಹಳ್ಳಿಗಳಿಗೆ ಬರುವುದು ನಿಶ್ಚಿತ. ಅದುವರೆಗೂ ನಮ್ಮ ಸಂಸ್ಕøತಿ ದೀಪ ಆರದಂತೆ ಕಾಪಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಇದಕ್ಕೆ ಸಂಘಟನೆ ಬಲಗೊಳ್ಳಬೇಕಾದ್ದು ಅನಿವಾರ್ಯ ಎಂದರು.

ಸಮಾಜದಲ್ಲಿ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ಜತೆಗೆ, ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಆಗಬೇಕು. ಎಲ್ಲ ವಲಯ ಮಟ್ಟದಲ್ಲಿ ನಿರ್ದಿಷ್ಟ ದಿನದಂದು ಶ್ರೀಮಠಕ್ಕೆ ಸೇವೆ ಸಲ್ಲಿಸಿ ಗತಿಸಿದ ಕಾರ್ಯಕರ್ತರನ್ನು ನೆನಪಿಸಿಕೊಳ್ಳುವ ಕಾರ್ಯ ಆಗಬೇಕು. ಮನೆಗೊಬ್ಬ ಕಾರ್ಯಕರ್ತ ನಿರ್ಮಾಣವಾಗಬೇಕು; ಪ್ರತಿ ಕಾರ್ಯಕರ್ತರನ್ನು ಒಂದು ಕಾರ್ಯಕ್ಕೆ ನಿಯೋಜಿಸಿ ಅವರು ಸಕ್ರಿಯರಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಶ್ರೀಸಂಸ್ಥಾನ ಹಾಗೂ ಶ್ರೀಮಠದ ಸ್ವರ್ಣಪಾದುಕೆ ಸಮಾಜದ ಮೂಲೆ ಮೂಲೆಗೂ ಸಂಚರಿಸುವ ಯೋಜನೆ ರೂಪಿಸಲಗಿದೆ. ಇದು ಪ್ರತಿಯೊಬ್ಬ ಶಿಷ್ಯಭಕ್ತರಿಗೆ ಪುಣ್ಯ ಸಂಪಾದನೆಗೆ ಮತ್ತು ಪುರುಷಾರ್ಥ ಸಾಧನೆ ಎರಡಕ್ಕೂ ಸುಲಭ ಮಾರ್ಗವಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಿವಿವಿ ಸಮಿತಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿವಿವಿ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಸಿದ್ದಾಪುರ ಮಂಡಲಾಧ್ಯಕ್ಷ ಮಹೇಶ್ ಚಟ್ನಳ್ಳಿ, ಕಾರ್ಯದರ್ಶಿ ಚಂದನ ಶಾಸ್ತ್ರಿ, ಉಪಾಧ್ಯಕ್ಷ ಸತೀಶ್ ಹೆಗಡೆ ಆಲ್ಮನೆ, ಮೋಹನ ಭಟ್ ಹರಿಹರ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು