ಹೊಸದಿಲ್ಲಿ: ಸಂಸತ್ ಅಧಿವೇಶನದಲ್ಲಿ “ಫ್ಲೈಯಿಂಗ್ ಕಿಸ್” ನೀಡಿದ ರಾಹುಲ್ ಗಾಂಧಿ ವರ್ತನೆ ಅನುಚಿತ, ಅಸಭ್ಯ ಎಂದು ಕೇಂದ್ರ ಕೃಷಿ ಮತ್ತು ರೈತರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
“ರಾಹುಲ್ ಗಾಂಧಿ, ಸ್ಮೃತಿ ಇರಾನಿ ಕಡೆಗೆ ಮತ್ತು ಎಲ್ಲಾ ಮಹಿಳಾ ಸದಸ್ಯರ ಕಡೆಗೆ ಫ್ಲೈಯಿಂಗ್ ಕಿಸ್ ಕೊಟ್ಟು ಹೊರಟು ಹೋದರು. ಇಂತಹ ಅಸಭ್ಯ ವರ್ತನೆ ಭಾರತದ ಸಂಸತ್ತಿನ ಇತಿಹಾಸದಲ್ಲಿ ಇದುವರೆಗೆ ಸಂಭವಿಸಿಲ್ಲ ಎಂದು ಹಿರಿಯ ಸದಸ್ಯರು ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಂಸತ್ತಿನ ಒಳಗೆ ಸದಸ್ಯರೊಬ್ಬರು ಫ್ಲೈಯಿಂಗ್ ಕಿಸ್ ಮಾಡಿದ್ದಾರೆ. ಈ ನಡವಳಿಕೆ ಏನನ್ನು ಸೂಚಿಸುತ್ತದೆ.
ಈ ಬಗ್ಗೆ ಲೋಕಸಭೆ ಸ್ಪೀಕರ್ ಅವರನ್ನು ಬಿಜೆಪಿಯ ಮಹಿಳಾ ಸಂಸದರೊಂದಿಗೆ ಭೇಟಿಯಾಗಿ ರಾಹುಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದ್ದಾರೆ.