News Karnataka Kannada
Thursday, May 02 2024
ಉತ್ತರಕನ್ನಡ

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.76.54ರಷ್ಟು ಮತದಾನ

Don't let the voter be a mute spectator at a political fair!
Photo Credit :

ಕಾರವಾರ: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಈ ಬಾರಿ ಶೇ.76.54 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿರುವ 11,94,714 ಮತದಾರರ ಪೈಕಿ ಒಟ್ಟೂ 9,14,381 ಜನರು ತಮ್ಮ ಮತ ಚಲಾಯಿಸಿದ್ದಾರೆ. ಈ ಪೈಕಿ 4,59,859 ಪುರುಷ, 45,45,17 ಮಹಿಳೆಯರು ಹಾಗೂ 5 ಜನ ಇತರೆ ಮತದಾರರ ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಬುಧವಾರ ಬೆಳಿಗ್ಗೆ ಆರಂಭವಾಗಿತ್ತು. ಅತಿ ಕಡಿಮೆ ಪ್ರಮಾಣದಲ್ಲಿ ಮತಯಂತ್ರಗಳಲ್ಲಿ ದೋಷ ಕಂಡುಬಂದಿದ್ದು ಬಿಟ್ಟರೆ ಉಳಿದಂತೆ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆಯಿತು.

ಜಿಲ್ಲೆಯಲ್ಲಿ ಬೆಳಿಗ್ಗೆ 9ಕ್ಕೆ ಶೇ.9.87, 11ಕ್ಕೆ ಶೇ.25.34, ಮಧ್ಯಾಹ್ನ 1ಕ್ಕೆ ಶೇ.42.43, 3 ಗಂಟೆಯ ಹೊತ್ತಿಗೆ ಶೇ.54.94 ಮತದಾನವಾದರೆ, ಮತದಾನ ಅಂತ್ಯಗೊಳ್ಳುವ ಒಂದು ತಾಸಿಗೂ ಮುನ್ನ, ಅಂದರೆ 5 ಗಂಟೆಗೆ ಶೇ.68.06 ಮತದಾನವಾಗಿತ್ತು. ಅಂತಿಮವಾಗಿ 6 ಗಂಟೆಗೆ ಎಲ್ಲೆಡೆ ಮತದಾನ ಮುಗಿದರೂ, ಮತಯಂತ್ರದ ದೋಷ ಕಂಡುಬಂದಿದ್ದ ಕೆಲವೆಡೆ ಅರ್ಧ ಗಂಟೆ ಹೆಚ್ಚುವರಿ ಸಮಯ ನೀಡಿ ಮತದಾನ ಮಾಡಿಸಲಾಯಿತು. ಸಂಜೆ 7ರ ಹೊತ್ತಿಗೆ ಅಂತಿಮವಾಗಿ ಮತದಾನ ಪ್ರಮಾಣ ಲಭ್ಯವಾಗಿದ್ದು, ಶೇ.76.54ರಷ್ಟು ಮತದಾನವಾಗಿದೆ.

ತಾಲೂಕುವಾರು ಮತದಾನದ ಪ್ರಮಾಣ :
ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.78, ಕುಮಟಾ ಶೇ.77.01, ಭಟ್ಕಳ ಶೇ.77.42, ಶಿರಸಿ 78.77, ಯಲ್ಲಾಪುರ 79.75 ಹಾಗೂ ಹಳಿಯಾಳದಲ್ಲಿ 76.33 ರಷ್ಟು ಮತದಾನವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು