News Karnataka Kannada
Thursday, May 02 2024
ಉತ್ತರಕನ್ನಡ

75 ಲಕ್ಷ ರೂ.‌ಮೌಲ್ಯದ ಸ್ವತ್ತು ಮರಳಿಸಿದ ಪೊಲೀಸ್ ಇಲಾಖೆ

New Project 2021 12 08t110229.193
Photo Credit :
ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ವಿಭಾಗದಲ್ಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ದರೋಡೆ ಹಾಗೂ ವಂಚನೆ ಪ್ರಕರಣದಲ್ಲಿ ಕಳ್ಳರಿಂದ ವಶಕ್ಕೆ ಪಡೆದ ಸುಮಾರು 75 ಲಕ್ಷ ರೂ. ಸ್ವತ್ತುಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಂಬಂಧಪಟ್ಟರಿಗೆ ಮರಳಿಸುವ ಕಾರ್ಯಕ್ರಮ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು. ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ನಡೆದ 204 ದರೋಡೆ, ಸುಲಿಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆ ಪೊಲೀಸರು 98 ಪ್ರಕರಣ ಭೇದಿಸಿ 75 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಪತ್ತೆ ಮಾಡಿದ್ದಾರೆ.
ದಾಖಲಾದ ಪ್ರಕರಣದ ಪೈಕಿ ಶೇ.50ಕ್ಕೂ ಹೆಚ್ಚು ಪ್ರಕರಣವನ್ನು ವಿವಿಧ ವಿಭಾಗದ ಪೊಲೀಸರು ಭೇದಿಸಿದ್ದಾರೆ.  ವಿವಿಧ ಸ್ವತ್ತುಗಳನ್ನು ಮಾಲೀಕರಿಗೆ ವಾಪಸ್ ನೀಡುವ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಸುಮನ್ ಪೆನ್ನೇಕರ್ ಮಾತನಾಡಿ ಜಿಲ್ಲೆಯಲ್ಲಿ 204 ಪ್ರಕರಣಗಳಲ್ಲಿ 98 ಪ್ರಕರಣ ಭೇದಿಸಲಾಗಿದೆ. ಉಳಿದವುಗಳನ್ನು ಶೀಘ್ರದಲ್ಲಿ ಭೇದಿಸುತ್ತೇವೆ.

ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 18 ಕೊಲೆ ಪ್ರಕರಣ ನಡೆದಿದೆ. ಅದೆಲ್ಲವನ್ನು ಭೇದಿಸಲಾಗಿದೆ. ವಶಕ್ಕೆ ಪಡೆದುಕೊಂಡು ಪ್ರಕರಣಗಳಲ್ಲಿ ಮುಂಡಗೋಡದಲ್ಲಿ ನಡೆದ ದರೋಡೆ ಪ್ರಕರಣ, ಅಸ್ತಿ ಪಂಚರ ದೊರೆತ ಪ್ರಕರಣ ಸಹ ಸೇರಿದೆ ಎಂದರು.  ಈ ವರ್ಷ ಮುಂಡಗೋಡದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ  ಒಟ್ಟೂ 22.50 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.  ಪ್ರಸಕ್ತ ಸಾಲಿನಲ್ಲಿ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 18 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಸುಮಾರು  12 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. 12 ವಾಹನ ಕಳವು, 21 ಸಾದಾ ಕಳವು ಪ್ರಕರಣಗಳನ್ನೂ ಪತ್ತೆ ಹಚ್ಚಲಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು