ವಿರುಪಾಪುರ : ಮನುಷ್ಯರ ಮುಖವನ್ನೇ ಹೋಲುವ ವಿಚಿತ್ರ ಮೀನೊಂದು ಕರ್ನಾಟಕದಲ್ಲಿ ಪತ್ತೆಯಾಗಿದೆ.ಕೊಪ್ಪಳದ ವಿರುಪಾಪುರ ಗಡ್ಡೆಯ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಮೀನು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹಂಪಿ ಮತ್ತು ವಿರುಪಾಪುರ ಗಡ್ಡೆ ಮಧ್ಯೆ ಹರಿಯುವ ನದಿಯಲ್ಲಿ ಪತ್ತೆಯಾಗಿರುವ ಮೀನಿನ ಬಾಯಿಯಲ್ಲಿ ಮನುಷ್ಯನಂತೆ ಹಲ್ಲುಗಳು ಇವೆ.ರಫಿ ಎನ್ನುವ ವ್ಯಕ್ತಿ ಮೀನು ಹಿಡಿಯುವಾಗ ಗಾಳಕ್ಕೆ ಈ ವಿಚಿತ್ರ ಮೀನು ಸಿಕ್ಕಿ ಬಿದ್ದಿದೆ. ನಿತ್ಯ ಹಂಪಿ ಹಾಗೂ ವಿರುಪಾಪುರ ಗಡ್ಡಿ ನದಿಯಲ್ಲಿ ಬೋಟ್ ನಡೆಸುವ ರಫಿ, ಈ ಹಿಂದೆ ಎಂದೂ ಈ ರೀತಿಯ ಮೀನನ್ನು ನೋಡಿಲ್ಲವಂತೆ.
ಮೀನನ್ನು ನೋಡಿ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಸ್ಥಳೀಯರು ಕೂಡ ಇದೇ ಮೊದಲ ಬಾರಿ ನಾವು ಇಂಥಹ ಮೀನನ್ನು ನೋಡಿದ್ದು ಎನ್ನುತ್ತಿದ್ದಾರೆ. ಅಪರೂಪದ ಮೀನನನ್ನು ಮತ್ತೆ ನದಿಗೆ ಬಿಟ್ಟಿರುವುದಾಗಿ ರಫಿ ತಿಳಿಸಿದ್ದಾರೆ.