ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರೋತ್ಸವ ಆಚರಣೆಗೆ ಭೂಮಿ ಹಕ್ಕು ಹೋರಾಟಗಾರರ ನಿರ್ಧಾರ

ಕಾರವಾರ :ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಈ ಸಲದ ಸ್ವಾತಂತ್ರೋತ್ಸವವನ್ನು ನಮಗೇಂದು ಭೂಮಿ, ನಮಗೇಂದು ವಸತಿ, ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ ಎನ್ನುವ ಘೋಷಣೆಯೊಂದಿಗೆ ಕೋವಿಡ್ ಶಿಷ್ಟಾಚಾರ ಪಾಲಿಸಿ ಸ್ವಾತಂತ್ರೋತ್ಸವವನ್ನು ಭೂಮಿ ಹಕ್ಕು ಹೋರಾಟಗಾರರು ಆಚರಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ತಿಳಿಸಿದ್ದಾರೆ.
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.೧೫ರಂದು ಸ್ವಾತಂತ್ರೋತ್ಸವದ ಅಂಗವಾಗಿ ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ ಎನ್ನುವ ಲಾಂಛನ ಬಿಡುಗಡೆಗೊಳಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ೧೦,೫೭೧ ಚ.ಕೀ.ಮೀ ವೀಸ್ತಿರ್ಣ ಹೊಂದಿದ್ದು, ಅವುಗಳಲ್ಲಿ ೮,೫೦೦ ಚ.ಕೀ.ಮೀ ಅರಣ್ಯ. ೨,೦೭೧ ಚ.ಕೀ.ಮೀ ನಲ್ಲಿ ೧೪ ಲಕ್ಷ ಜನಸಂಖ್ಯೆ ಜೀವನ ಮಾಡುತ್ತಿದ್ದಾರೆ. ಮಲೆನಾಡು, ಬಯಲುಸೀಮೆ ಮತ್ತು ಕರಾವಳಿ ಪ್ರದೇಶ ವಿಭಿನ್ನವಾದ ನೈಸರ್ಗಿಕ ಗುಣಧರ್ಮ ಹೊಂದಿದ್ದು ವಿಶೇಷ. ಅವುಗಳಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಭೂಮಿ ಹಕ್ಕಿನ ಮಂಜೂರಿಯ ನಿರೀಕ್ಷೆಯಲ್ಲಿ ೧ ಲಕ್ಷಕ್ಕೂ ಮೀರಿ ಕುಟುಂಬವು ಜಿಲ್ಲೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಇವರೆಲ್ಲ ನಿರಾಶ್ರಿತರಾಗುವ ಅತಂತ್ರತೆಯಲ್ಲಿ, ಭೂಮಿ ಹಕ್ಕಿನಿಂದ ವಂಚಿತರಾಗಿ ಸ್ವತಂತ್ರತೆಯ ಜೀವನ ನಡೆಸುವ ಡೋಲಾಯಮಾನ ಸ್ಥಿತಿಯಲ್ಲಿ ಇದೆ.
ಇಂತಹ ನಿವಾಸಿಗಳಿಗೆ ಆಡಳಿತ ವರ್ಗದಿಂದ ನಿರಂತರ ದೌರ್ಜನ್ಯ, ಕಿರುಕುಳ, ದೈಹಿಕ ಮತ್ತು ಮಾನಸಿಕ ಹಿಂಸೆ, ಒಕ್ಕಲೆಬ್ಬಿಸುವ ಭೀತಿ, ಕಾನೂನಿನ ಗದಪ್ರಹಾರ ಮುಂತಾದ ಸಮಸ್ಯೆಗಳಿಂದ ಪೂರ್ಣ ಪ್ರಮಾಣದ ನೆಮ್ಮದಿಯ ಸ್ವಾತಂತ್ರö್ಯದಿAದ ವಂಚಿತರಾಗಿ ಜೀವನದ ಅಭದ್ರತೆಯಿಂದ ಜೀವಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ನಿರಾಶ್ರಿತರಾಗುವ ಭೀತಿಯಲ್ಲಿರುವ ಕುಟುಂಬಗಳ ಸಮಸ್ಯೆಯನ್ನು ಗಂಭೀರವಾಗಿ ಸರಕಾರ ಗಮನ ಸೆಳೆಯುವ ಉದ್ದೇಶದಿಂದ ೭೪ ನೇ ಸ್ವಾತಂತ್ರೋತ್ಸವವನ್ನು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕಾರ್ಯಾಲಯ ಶಿರಸಿಯಲ್ಲಿ ಭೂಮಿ ಹಕ್ಕು ವಂಚಿತರಿಗೇಲ್ಲಿ ಸ್ವಾತಂತ್ರ್ಯ? ಎಂಬ ಘೋಷಣೆಯೊಂದಿಗೆ ಧ್ವಜಾರೋಹಣ ಮಾಡಲಾಗುವುದು ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ೮೫,೦೦೦ ಕುಟುಂಬ, ಕಂದಾಯ ೧೧,೦೦೦ ಕುಟುಂಬ, ಹಾಡಿ ೪೫೦೦ ಕುಟುಂಬ, ಬೆಟ್ಟ ಭೂಮಿಯಲ್ಲಿ ವಾಸ್ತವ್ಯಕ್ಕಾಗಿ ೬,೫೦೦ ಕುಟುಂಬ, ಗಾಂವಠಾಣ, ಗೋಮಾಳ, ಪಾರಂಪೂಕ, ಡೊಂಗರ ಮುಂತಾದ ಜಮೀನುಗಳಲ್ಲಿ ೧೦,೦೦೦  ಹೀಗೆ ಮುಂತಾದ ಸರಕಾರದ ಒಡೆತನದ ಭೂಮಿಯಲ್ಲಿ ವಸತಿ ಮತ್ತು ಸಾಗುವಳಿಗಾಗಿ ಶೇ. ೪೩ ರಷ್ಟು ಮತ್ತು ಕೃಷಿಗಾಗಿ ಶೇ. ೫೭ ರಷ್ಟು ಅನಧೀಕೃತ ನಿವಾಸಿಗಳಾಗಿ ಸುಮಾರು ೧,೨೫,೦೦೦ ಕುಟುಂಬ ಮುಂದಿನ ದಿನಗಳಲ್ಲಿ ನಿರಾಶ್ರಿತರಾಗುವ ಭೀತಿಯಲ್ಲಿ ಜೀವಿಸುತ್ತಿದ್ದಾರೆ. ಸುಮಾರು ೬೦೦೦ ಎಕರೆ ಪ್ರದೇಶ ಟಿಬೆಟಿಯನ್ನರಿಗೆ ದೇಶದ ಪ್ರಜಾ ರಾಜತಂತ್ರ ನೀತಿ ಅಡಿಯಲ್ಲಿ ಭೂಮಿ ನೀಡಿ ಆಶ್ರಯ ನೀಡಿದೆ. ದೇಶದ ಪ್ರಜೆಯನ್ನಾಗಿಸುವ ವಿದೇಶಿಗರನ್ನು ಕೇಂದ್ರ ಸರಕಾರ ಇತ್ತೀಚಿಗೆ ಕಾನೂನು ತಂದಿದೆ. ಆದರೆ, ದೇಶದ ಪ್ರಜೆಗಳನ್ನು ಕಾನೂನಿನ ನೇಪದಲ್ಲಿ ನಿರಾಶ್ರಿತರನ್ನಾಗಿ ಮಾಡುವ ಸರಕಾರದ ನೀತಿಯನ್ನು ಖಂಡಿಸುತ್ತೇವೆ. ಇಂತಹ ಗಂಭೀರ ಸ್ವರೂಪದ, ಸ್ವತಂತ್ರತೆ ಇಲ್ಲದ ಜಿಲ್ಲೆಯ ಜನಸಂಖ್ಯೆಯ ಒಂದು ಮೂರರಷ್ಟು ನಿವಾಸಿಗಳ ಸಮಸ್ಯೆ ಸರಕಾರದ ಗಮನಕ್ಕೆ ತರುವುದೇ ಸ್ವಾತಂತ್ರೋತ್ಸವದOದು ನಡೆಯುವ ಕಾರ್ಯಕ್ರಮದ ಉದ್ದೇಶವಾಗಿದೆ.
ನಿರಂತರವಾಗಿ ಭೂಮಿ ಹಕ್ಕಿಗಾಗಿ ಹೋರಾಟ ಜರಗುತ್ತಿದ್ದರೂ ಪ್ರತಿ ಚುನಾವಣೆಯಲ್ಲಿಯೂ ಎಲ್ಲಾ ಪಕ್ಷಗಳು ಚುನಾವಣೆ ಪ್ರನಾಳಿಕೆಯಲ್ಲಿ ಮಂಜೂರಿ ಆಶ್ವಾಸನೆ ನೀಡಿದ್ದಾಗಿಯೂ ಆಡಳಿತ ಪಕ್ಷ ಅತಿಕ್ರಮಣದಾರರ ಸಮಸ್ಯೆ ನಿರ್ಲಕ್ಷಿಸಿರುವುದು ವಿಷಾದಕರ. ಭೂಮಿ ಹಕ್ಕು ಭೀಕ್ಷೆಯಲ್ಲ ಸಂವಿಧಾನಾತ್ಮಕವಾದ ಹಕ್ಕು ಎಂದು ರವೀಂದ್ರ ನಾಯ್ಕ ಅವರು ಹೇಳಿದರು.
Raksha Deshpande

Recent Posts

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

15 mins ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

36 mins ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

44 mins ago

ಡ್ರಾಪ್​ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನ

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ ಡ್ರಾಪ್​ ಕೊಡುವ ನೆಪದಲ್ಲಿ  ತಡರಾತ್ರಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ…

58 mins ago

ಇಬ್ರಾಹಿಂ ರೈಸಿ ನಿಧನ: ನಾಳೆ ಭಾರತದಲ್ಲಿ ಒಂದು ದಿನದ ‘ಶೋಕಾಚರಣೆ’

ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ನಾಳೆ (ಮೇ 21) ಭಾರತದಲ್ಲಿ ಒಂದು ದಿನದ ರಾಜ್ಯ…

1 hour ago

ಪ್ರಕಟಣೆಯಾದ ಸಂಶೋಧನಾ ಬರಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ: ಡಾ. ಸುಧಾಕರ್ ವೈ.ಎನ್

ವಿದ್ಯಾರ್ಥಿಗಳು ಪ್ರಕಟಿಸುವ ಸಂಶೋಧನಾ ಬರಹಗಳು ಉನ್ನತ ವೇತನ ಶ್ರೇಣಿಯ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಉಪಯುಕ್ತವಾಗುತ್ತವೆ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್…

1 hour ago