ಕಾರವಾರ :ನಿರ್ಮಲಾ ಕಾನ್ವೆಂಟ್ ಶಾಲೆಯ ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕುಳಿತಿದ್ದ ವೇಳೆ ಸ್ಟಾಬ್ ನ ಸಿಮೆಂಟ್ ಕುಸಿದು ಮಕ್ಕಳು ಗಾಯಗೊಂಡ ಘಟನೆ ಅಂಕೋಲಾದಲ್ಲಿ ಬುಧವಾರ ನಡೆದಿದೆ.
ಗಾಯಗೊಂಡ ಮಕ್ಕಳನ್ನು ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕನೇ ತರಗತಿಯ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮಕ್ಕಳ ಊಟದ ಸಮಯದಲ್ಲಿ ಸ್ಲಾಬ್ ನಿಂದ ಸಿಮೆಂಟ್ ತುಂಡುಗಳು ಒಂದೇ ಸಮನೆ ಕುಸಿದು, ಅಡಿಯಲ್ಲಿ ಕುಳಿತಿದ್ದ ಮಕ್ಕಳ ಮೈಮೇಲೆ ಬಿದ್ದಿವೆ. ಘಟನಾ ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ