ಯಾವುದೇ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ 17 ಕೋಣಗಳ ರಕ್ಷಣೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಭಟ್ಕಳ, ಮಂಗಳೂರು, ಕೇರಳ ಭಾಗಗಳಿಗೆ ಅಕ್ರಮ ಜಾನುವಾರುಗಳ ಸಾಗಟ ಜಾಲ ನಿರಂತರವಾಗಿ ಮುಂದುವರಿದಿದ್ದು, ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್ ಬಳಿ ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಯಾವುದೇ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ 17 ಕೋಣಗಳನ್ನು ಅಂಕೋಲಾ ಪೊಲೀಸರು ರಕ್ಷಿಸಿದ್ದಾರೆ.

ಲಾರಿ, ಮತ್ತು ಬೆಂಗಾವಲಾಗಿ ಬಂದಿದ್ದ ಇನೋವಾ ವಾಹನ ಸೇರಿದಂತೆ ಸುಮಾರು 12 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಳ್ತಂಗಡಿ ನಿವಾಸಿ ಲಾರಿ ಚಾಲಕ ಹೈದರ್ ರೆಹಮನ್ ಬ್ಯಾರಿ(40) ಅಂಕೋಲಾ ಶಿರಗುಂಜಿಯ ಬೊಮ್ಮಯ್ಯ ಬೀರಣ್ಣ ನಾಯಕ(80) ಹಾಸನ ಹಳೇಕೊಪ್ಪಲಿನ ಮಂಜೇಗೌಡ ಜವರೇಗೌಡ(62) ಕೇರಳ ಕಾಸರಗೋಡದ ಅಬ್ದುಲ್ ರಿಯಾಜ್ ಮಹಮ್ಮದ್ (27) ಬಂಧಿತ ಆರೋಪಿಗಳಾಗಿದ್ದು ಇನ್ನೊರ್ವ ಆರೋಪಿ ಕೇರಳದ ಅಬುಬಕರ್ ರಿಯಾಜ್ ಎಂಬಾತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.

ಆರೋಪಿತರಿಂದ 2ಲಕ್ಷ 25 ಸಾವಿರ ಮೌಲ್ಯದ 17 ಕೋಣಗಳು, 6ಲಕ್ಷ ಮೌಲ್ಯದ ಲಾರಿ 3 ಲಕ್ಷ ಮೌಲ್ಯದ ಇನೋವಾ ವಾಹನ, 47 ಸಾವಿರ ಮೌಲ್ಯದ ಮೂರು ಮೊಬೈಲ್ ಪೋನುಗಳು ಮತ್ತು 30 ಸಾವಿರ ನಗದು ಹಣ ವಶಪಡಿಸಿಕೊಳ್ಳಲಾಗಿದೆ.

Sneha Gowda

Recent Posts

ಕಾಂಗ್ರೆಸ್‌ ಪಕ್ಷಕ್ಕೆ ಮುಸ್ಲಿಮರ ಮತ ಬೇಕು, ಆದರೆ ಮುಸ್ಲಿಮ್‌ ಅಭ್ಯರ್ಥಿ ಬೇಡ ಎಂದ ನಸೀಮ್‌ ಖಾನ್‌

ಕಾಂಗ್ರೆಸ್‌ಗೆ ಮುಸ್ಲಿಮರ ಮತ ಬೇಕು. ಆದರೆ ಮುಸ್ಲಿಮ್‌ ಅಭ್ಯರ್ಥಿ ಬೇಡ ಎಂದು ಹೇಳಿರುವ ನಸೀಮ್‌ ಖಾನ್‌ ಪಕ್ಷದ ವಿರುದ್ಧ ಸಿಟ್ಟಾಗಿದ್ದು…

17 mins ago

ಕದ್ದ ಬೈಕ್ ಪಾರ್ಕಿಂಗ್‌ ಮಾಡಿ ಪರಾರಿ : 30 ಬೈಕ್‍ ಪೊಲೀಸರ ವಶಕ್ಕೆ

ಬೈಕ್ ಕಳ್ಳತನ ಮಾಡಿ ಬಸ್ ನಿಲ್ದಾಣದ ಪಕ್ಕದ ಪೇ&ಪಾರ್ಕಿಂಗ್‌ನಲ್ಲಿ ಪಾರ್ಕ್ ಮಾಡಿ ಕಳ್ಳರು ಪರಾರಿಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪಾರ್ಕ್…

35 mins ago

ಬಿಸಿ ಗಾಳಿಗೆ ಕರ್ನಾಟಕದ ಜನ ತತ್ತರ; ಯಾವಾಗ ಮಳೆ ?

ಸೂರ್ಯನ ಶಾಖಕ್ಕೆ ರಾಜ್ಯ ಕಾದ ಕಾವಲಿಯಂತಾಗಿದೆ. ರಣ ಬಿಸಿಲಿನ ಉರಿ ಶೆಕೆ ಜನರನ್ನ ತತ್ತರಿಸಿದೆ. ಈಗಾಗಲೇ ದಾಖಲೆ ಬರೆದಿರೋ ತಾಪಮಾನ…

1 hour ago

ರಾಕ್ಷಸನಂತೆ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದ ಪಾಪಿ

ಸಾಲದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆಯುತ್ತಿದ್ದ ಜಗಳದಲ್ಲಿ ವ್ಯಕ್ತಿಯೊಬ್ಬ ಮೂರು ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು, ತುಳಿದು…

2 hours ago

ಇಂದಿನಿಂದ ವನಿತಾ ಟಿ20 ಕ್ರಿಕೆಟ್‌ ಸರಣಿ ಆರಂಭ

ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ವನಿತಾ ತಂಡಗಳ ನಡುವಿನ ವನಿತಾ ಟಿ20 ಕ್ರಿಕೆಟ್‌ ಸರಣಿ ಇಂದಿನಿಂದ ಸಿಲ್ಹೆ ಟ್‌ನಲ್ಲಿ ಆರಂಭವಾಗಲಿದೆ.…

2 hours ago

ಹೆಚ್ಚಾದ ಬಿಸಿಲ ಬೇಗೆ; ಗಗನಕ್ಕೇರಿದ ತರಕಾರಿ ಬೆಲೆ

ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕಾರಣ ತರಕಾರಿ ಬೆಲೆ ಭಾರಿ ದುಬಾರಿಯಾಗಿದೆ. ಬೀನ್ಸ್ ದರ…

2 hours ago