Categories: ಇತರೆ

ಅಮೆಜಾನ್ ಪ್ರೈಮ್ ಸದಸ್ಯತ್ವ ಮೊದಲಿಗಿಂತ ಶೇಕಡಾ 50ರಷ್ಟು ಏರಿಕೆ

ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವ ಗ್ರಾಹಕರ ಜೇಬಿಗೆ ಶೀಘ್ರವೇ ಕತ್ತರಿ ಬೀಳಲಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವ ಮೊದಲಿಗಿಂತ ಶೇಕಡಾ 50ರಷ್ಟು ಹೆಚ್ಚಾಗಲಿದೆ.

ಇ-ಕಾಮರ್ಸ್ ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ಕಂಪನಿ ತನ್ನ ಪ್ರೈಮ್ ಸದಸ್ಯತ್ವದ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ತನ್ನ ಸದಸ್ಯತ್ವ ಶುಲ್ಕವನ್ನು ಹೆಚ್ಚಿಸಿದೆ. ಈಗ ಅಮೆಜಾನ್ ಸರದಿ. 2017 ರ ನಂತರ ಮೊದಲ ಬಾರಿಗೆ ಅಮೆಜಾನ್ ತನ್ನ ಸದಸ್ಯತ್ವ ವೆಚ್ಚದಲ್ಲಿ ಹೆಚ್ಚಳ ಮಾಡಲಿದೆ.

ಅಮೆಜಾನ್ ಪ್ರೈಂ ಮಾಸಿಕ ದರ 129 ರೂಪಾಯಿಯಿದ್ದು, ಅದು 179 ರೂಪಾಯಿಯಾಗಲಿದೆ. ಮೂರು ತಿಂಗಳ ದರ 329 ರೂಪಾಯಿಯಿಂದ 459 ರೂಪಾಯಿಯಾಗಲಿದೆ. ವಾರ್ಷಿಕ ದರ ಪ್ರಸ್ತುತ 999 ರೂಪಾಯಿಯಿದ್ದು, ಅದು 1,499 ರೂಪಾಯಿ ತಲುಪಲಿದೆ.

ಬೆಲೆ ಏರಿಕೆ ಯಾವಾಗ ಜಾರಿಗೆ ಬರಲಿದೆ ಎನ್ನುವ ಬಗ್ಗೆ ಅಮೆಜಾನ್ ಸ್ಪಷ್ಟನೆ ನೀಡಿಲ್ಲ. ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಜುಲೈ 2016 ರಲ್ಲಿ ಭಾರತದಲ್ಲಿ 499 ರೂಪಾಯಿಗೆ ಆರಂಭಿಸಲಾಗಿತ್ತು. ಅಕ್ಟೋಬರ್ 2017 ರಲ್ಲಿ ಅದನ್ನು 999 ರೂಪಾಯಿಗೆ ಹೆಚ್ಚಿಸಲಾಯಿತು.

Gayathri SG

Recent Posts

ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರೋದೇ ಡೌಟ್; ರಿಟರ್ನ್‌ ಟಿಕೆಟ್‌ ಕ್ಯಾನ್ಸಲ್

ಹಾಸನದ ಅಶ್ಲೀಲ ವಿಡಿಯೋ ವೈರಲ್ ಹಾಗೂ ಪೆನ್‌ಡ್ರೈವ್‌ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ…

1 min ago

ರಾಧಾ ರಮಣ ಧಾರವಾಹಿಯ ಜನಪ್ರಿಯ ನಟಿ ಪವಿತ್ರ ಜಯರಾಂ ನಿಧನ

ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ ಪವಿತ್ರ ಜಯರಾಂ ಅವರು ನಿಧನರಾಗಿದ್ದಾರೆ.

19 mins ago

ಹಣ್ಣಕ್ಕೆ ಬೇಡಿಕೆ ಇಟ್ಟು ಮರ್ಮಾಂಗಕ್ಕೆ ವಿದ್ಯುತ್​ ಶಾಕ್​ ನೀಡಿ ಚಿತ್ರಹಿಂಸೆ

ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮಾಡಿ ಘನಘೋರವಾಗಿ ಚಿತ್ರಹಿಂಸೆ ನೀಡಿರುವ ಘಟನೆ…

42 mins ago

ಮಾಜಿ ಸಿಎಂ ಎಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ: ಕಾಂಗ್ರೆಸ್​ ಶಾಸಕ

ಹೆಚ್​ಡಿ ರೇವಣ್ಣರಂತೆ ಮಾಜಿ ಸಿಎಂ ಹೆಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ. ಅವರ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಅವರು…

53 mins ago

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ

ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನ ಹಲವು ಪ್ರದೇಶಗಳಲ್ಲಿ…

1 hour ago

ಕ್ರಿಕೆಟ್ ಪಂದ್ಯದ ವೇಳೆ 21 ವರ್ಷದ ಯುವಕನನ್ನು ಥಳಿಸಿ ಹತ್ಯೆ

ವಾಯುವ್ಯ ದೆಹಲಿಯ ಭಾರತ್ ನಗರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ತನ್ನ ಸಹೋದರ ಮತ್ತು ಇತರ ಆಟಗಾರರ ನಡುವಿನ ಜಗಳದಲ್ಲಿ…

1 hour ago