News Karnataka Kannada
Tuesday, April 30 2024
ಉತ್ತರಕನ್ನಡ

ಭಟ್ಕಳ: ಆಕಾಶದಲ್ಲಿ ಸರಣಿ ಬೆಳಕಿನ ಓಟ

Karwar: Make community health officers permanent as per central government guidelines
Photo Credit :

ಭಟ್ಕಳ : ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ ಆಗಸದಲ್ಲಿ ಸರಣಿ ಬೆಳಕಿನ ಓಟ ಕಾಣಿಸಿಕೊಂಡಿದ್ದು ಜನರು ಒಮ್ಮೆ ಇದೆಂತಾ ವಿಸ್ಮಯ ಎಂದು ಆಶ್ಚರ್ಯಚಕಿತರಾಗಿದ್ದಾರೆ. ಒಂದೇ ಸಮನೆ ಆಕಾಶದಲ್ಲಿ ಬೆಳಕಿನ ಸರಣಿ ಓಡುತ್ತಿರುವುದನ್ನು ನೋಡಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.

ಆದರೆ ಇದು ಎಲಾನ್ ಮಾಸ್ಕ್ ಮಾಲೀಕತ್ವದಲ್ಲಿ ಬಾಹ್ಯಾಕಾಶ ಸಂಸ್ಥೆ ಅಮೇರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಸರಣಿ ಉಪಗ್ರಹಗಳು ಎನ್ನುವುದು ನಂತರ ತಿಳಿದು ಬಂದಿದೆ. ಕಳೆದ 2018ರಿಂದ ಸರಣಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಸ್ಪೇಸ್ ಎಕ್ಸ್ ಯಶಸ್ವಿಯಾಗಿದ್ದು ಅದರ ಒಂದು ಭಾಗ ಸೋಮವಾರ ಜಿಲ್ಲೆಯ ಆಗಸದಲ್ಲಿ ಗೋಚರಿಸಿದೆ. ಆರಂಭದಲ್ಲಿ ಕೆಲವರು ಇದು ನಕ್ಷತ್ರ ಪುಂಜಗಳೇ ಎನ್ನುವ ಸಂಶಯ ಬಂದಿದ್ದರೂ ಸಹ ಒಂದು ರೈಲಿನಷ್ಟು ಉದ್ದನೆಯ ಬೆಳಕಿನ ಸಾಲು ಕಂಡವರು ಇದೊಂದು ವಿಸ್ಮಯ ಎಂದು ಭಾವಿಸಿದ್ದರು.

ಶಿರಸಿಯ ಭೈರುಂಬೆಯಲ್ಲಿರುವ ಖಗೋಳ ವಿಜ್ಞಾನ ಸಂಸ್ಥೆಯ ವಸಂತ ಹೆಗಡೆ ಅವರು ಇದೊಂದು ಉಪಗ್ರಹಗಳ ಸರಣಿಯಾಗಿದ್ದು ಆಕಾಶದಲ್ಲಿ ಹೋಗುವಾಗ ಸೂರ್ಯನ ಕಿರಣಗಳು ಪ್ರತಿಫಲಿಸುವುದರಿಂದ ಬೆಳಕಿನಲ್ಲಿ ಮಿನುಗುತ್ತಿವೆ. ಭೂಮಿಗೆ ತೀರಾ ಹತ್ತಿರದಿಂದ ಹೋಗುತ್ತಿರುವುದರಿಂದ ಬರಿಗಣ್ಣಿಗೆ ಗೋಚರಿಸುತ್ತಿದೆ ಎಂದು ತಿಳಿಸಿದ್ದಾರೆ. ಆಕಾಶದಲ್ಲಿ ಬೆಳಕಿನ ಓಟವನ್ನು ನೋಡಿದ ಗುಳ್ಮಿಯ ಅಬ್ದುಲ್ ಮಜೀದ್ ಅವರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ ವಿವರ ತಿಳಿದುಕೊಳ್ಳುವುದಕ್ಕಾಗಿ ಪತ್ರಕರ್ತರೊಂದಿಗೆ ಹಂಚಿಕೊಂಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು