News Karnataka Kannada
Saturday, May 04 2024
ಉತ್ತರಕನ್ನಡ

ತಂತಿ ಬೇಲಿಗೆ ಸಿಲುಕಿ ಕರಿ ಚಿರತೆ ಸಾವು

New Project (50)
Photo Credit :
ಕಾರವಾರ : ಕಾಡು ಹಂದಿ ಸೆರೆ ಹಿಡಿಯಲು ಹಾಕಿದ್ದ ತಂತಿಬೇಲಿಗೆ ಸಿಲುಕಿ ಕಪ್ಪು ಚಿರತೆಯೊಂದು ಮೃತಪಟ್ಟ ಘಟನೆ ಶುಕ್ರವಾರ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆ ಬಳಿ ನಡೆದಿದೆ.
ಶಿರಸಿ ತಾಲೂಕಿನ ಬನವಾಸಿ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾದ ಮೊದಲ ಕಪ್ಪು ಚಿರತೆ ಇದಾಗಿತ್ತು. ಅಂದಾಜು 5 ವರ್ಷದ ಹೆಣ್ಣು ಚಿರತೆ ಸೊಂಟದ ಭಾಗಕ್ಕೆ  ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದೆ. ಚಿರತೆ ಬೇಲಿಗೆ ಸಿಲುಕಿ ಒದ್ದಾಡುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಮೊದಲು ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಪ್ರಯತ್ನ ನಡೆಯಿತು. ಆದರೆ  ಜನ ಜಂಗುಳಿಯೂ ಹೆಚ್ಚಿತ್ತು. ಹೀಗಾಗಿ ಚಿರತೆ ಭಯದಿಂದಲೂ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು