ಉಡುಪಿ: ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಮೊಬೈಲ್ ಕದ್ದುಕೊಂಡು ಪರಾರಿಯಾದ ಘಟನೆ ಇಂದ್ರಾಳಿಯಲ್ಲಿರುವ ಹೆರ್ಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಇಂದು ನಡೆದಿದೆ.
ಸೊಸೈಟಿಯ ಬಾಗಿಲು ತೆರೆದು ಒಳಗೆ ಬರುವ ಕಳ್ಳನು, ವ್ಯವಹಾರಕ್ಕಾಗಿ ಬಂದಿರುವಂತೆ ನಟಿಸಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ. ಬಳಿಕ, ಸೊಸೈಟಿ ಸಿಬ್ಬಂದಿ ಬೇರೊಂದು ಗ್ರಾಹಕರ ಜೊತೆ ವ್ಯವಹಾರ ನಡೆಸುವ ಸಂದರ್ಭವನ್ನು ಬಳಸಿಕೊಂಡು ಆತ, ಅಲ್ಲೆ ಟೇಬಲ್ ಮೇಲಿರುವ ಸಿಬ್ಬಂದಿಯ ಮೊಬೈಲ್ ಅನ್ನು ಪ್ಯಾಂಟ್ ಕಿಸೆಗೆ ಹಾಕಿಕೊಂಡು ಅಲ್ಲಿಂದ ಎಸ್ಕೇಪ್ ಆಗುತ್ತಾನೆ.
ಈ ಖತರ್ನಾಕ್ ಕಳ್ಳನ ಕೈಚಳಕ ಸೊಸೈಟಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.