News Karnataka Kannada
Thursday, May 09 2024
ಉಡುಪಿ

ದುಬೈಯಲ್ಲಿ ಕಲಿಯಲೆಂದು ತೆರಳಿದ್ದ ಉಡುಪಿ ಮೂಲದ ವಿದ್ಯಾರ್ಥಿ ನಿಧನ

Dubai
Photo Credit : News Kannada

ಉಡುಪಿ: ಪದವಿ ಶಿಕ್ಷಣ ಕಲಿಯಲೆಂದು ದುಬೈಗೆ ತೆರಳಿದ್ದ ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ವಿದ್ಯಾರ್ಥಿಯೋರ್ವ ಅನಾರೋಗ್ಯಕ್ಕೀಡಾಗಿ ಸೋಮವಾರ(ಡಿ.5)ದಂದು ನಿಧನರಾಗಿದ್ದಾರೆ.

ನಿಧನರಾದ ವಿದ್ಯಾರ್ಥಿಯನ್ನು ಕಾಪು ತಾಲೂಕಿನ ಅಹ್ಮದ್ ಬಿಲಾಲ್ ಕಾಪು(20) ಎಂದು ತಿಳಿದುಬಂದಿದೆ. ಉಡುಪಿಯಲ್ಲಿ ದ್ವಿತೀಯ ಪಿಯುಸಿ ಮುಗಿಸಿ ದುಬೈಗೆ ತೆರಳಿದ್ದ ಬಿಲಾಲ್, ಪದವಿ ಶಿಕ್ಷಣವನ್ನು ಗಳಿಸುವ ಉದ್ದೇಶದಿಂದ ತೆರಳಿದ್ದರು. ಆದರೆ ಆ ಬಳಿಕ ಜ್ವರಕ್ಕೆ ತುತ್ತಾಗಿದ್ದರು.

ನ್ಯುಮೋನಿಯಾ ಕೂಡ ಕಾಡಿದ್ದರಿಂದ ಚಿಕಿತ್ಸೆಗಾಗಿ ಶಾರ್ಜಾದಲ್ಲಿರುವ ಕುವೈಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 20 ದಿನಗಳಿಂದ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಡಿ 5ರ ಸೋಮವಾರದಂದು ನಿಧನರಾದರು ಎಂದು ತಿಳಿದುಬಂದಿದೆ.

“ಬಿಲಾಲ್ ತಂದೆ 35 ವರ್ಷಗಳಿಂದ ದುಬೈಯಲ್ಲಿ ಅನಿವಾಸಿ ಭಾರತೀಯನಾಗಿ ದುಡಿಯುತ್ತಿದ್ದ ಹಿನ್ನೆಲೆಯಲ್ಲಿ, ಪದವಿ ಶಿಕ್ಷಣ ಕಲಿಯಲು ಬಿಲಾಲ್ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ದುಬೈಗೆ ತೆರಳಿದ್ದರು. ಕೆಲದಿನಗಳ ಹಿಂದೆ ದಿಡೀರ್ ಅನಾರೋಗ್ಯಕ್ಕೀಡಾಗಿ ನಿಧನರಾದರು. ಮೃತದೇಹದ ಅಂತ್ಯ ಸಂಸ್ಕಾರವು ದುಬೈಯ ಅಲ್ಕೂಝ್ ಮಸೀದಿಯಲ್ಲಿ ಸೋಮವಾರ ರಾತ್ರಿ ನಡೆಯಲಿದೆ. ಸದ್ಯ ಬಿಲಾಲ್ ಕುಟುಂಬ ದುಬೈನಲ್ಲಿದೆ” ಎಂದು ಬಿಲಾಲ್ ಸಂಬಂಧಿ ಆಸಿಫ್ ಉಚ್ಚಿಲ ಮಾಹಿತಿ ನೀಡಿದ್ದಾರೆ.

ತಂದೆ ಅಬ್ದುಸ್ಸಲಾಂ ಸೂರಿಂಜೆ, ತಾಯಿ ಝೀನತ್ ಗುರುಪುರ ಸೇರಿದಂತೆ ಇಬ್ಬರು ಸಹೋದರಿಯರು, ಒಬ್ಬ ಸಹೋದರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು