News Karnataka Kannada
Sunday, April 28 2024
ಉಡುಪಿ

ಉಡುಪಿ: ಡಿ. 26- 27ರಂದು ಅವಲಕ್ಕಿಪಾರೆಯಲ್ಲಿ ಅಂತರಾಷ್ಟ್ರೀಯ ಶಿಲಾಯುಗ ಬಂಡೆ ಚಿತ್ರಗಳ ಹಬ್ಬ

D. International Stone Age Rock Painting Festival to be held at Avalakkipare on 26th-27th
Photo Credit : News Kannada

ಉಡುಪಿ: ಶಿರ್ವ ಮುಲ್ಕಿ ಸುಂದರರಾಮ್ ಶೆಟ್ಟಿ‌ ಕಾಲೇಜಿನ ಪುರಾತತ್ವ ಇತಿಹಾಸ ವಿಭಾಗ ವತಿಯಿಂದ ಅಂತರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು, ಉಡುಪಿ ಪ್ರವಾಸೋದ್ಯಮ, ಅರಣ್ಯ ಇಲಾಖೆ, ಇಡೂರು-ಕುಂಜಾಡಿ ಗ್ರಾಪಂ‌ ಆಶ್ರಯದಲ್ಲಿ ಅಂತರಾಷ್ಟ್ರೀಯ ಶಿಲಾಯುಗ ಬಂಡೆ ಚಿತ್ರಗಳ ಹಬ್ಬ (ರಾಕ್ ಆರ್ಟ್ ಫೆಸ್ಟಿವಲ್) ಇದೇ ಬರುವ ಡಿ. 26 ಮತ್ತು‌ 27ರಂದು ಇಡೂರು-ಕುಂಜಾಡಿಯ‌ ಸಮೀಪದ ಅವಲಕ್ಕಿಪಾರೆಯಲ್ಲಿ ನಡೆಯಲಿದೆ.

ಈ ಕುರಿತು ಉಡುಪಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ, ಪುರಾತತ್ವ ವಿದ್ವಾಂಸ ಪ್ರೊ. ಟಿ. ಮುರುಗೇಶಿ‌ ಅವರು, ಮೂರು ವರ್ಷಗಳ ಹಿಂದೆಯೇ ಅವಲಕ್ಕಿಪಾರೆಯಲ್ಲಿ ಶಿಲಾಯುಗದ ಬಂಡೆ ಚಿತ್ರಗಳನ್ನು ಗುರುತಿಸಲಾಗಿತ್ತು. ಇದು ವನ್ಯಜೀವಿ ಸಂರಕ್ಷಿತ ಪ್ರದೇಶವಾಗಿದ್ದು, ಅರ್ಧ ಎಕರೆ ವಿಸ್ತೀರ್ಣದಲ್ಲಿ ಬಂಡೆ ಚಿತ್ರಗಳನ್ನು ಕಾಣಬಹುದಾಗಿದೆ ಎಂದರು.

ಇದೊಂದು ಅತ್ಯಂತ ವಿನೂತನ ಕಾರ್ಯಕ್ರಮ. ಪ್ರಸಿದ್ದ ಕಲಾ ಇತಿಹಾಸಕಾರ ಡಾ. ಇರ್ವಿನ್ ನ್ಯೂಮೇಯರ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಡಿ.26ರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು, ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ಪುರಾತತ್ವ ವಿದ್ವಾಂಸರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಟ್ರೀಯಾದ ಕಲಾ ಇತಿಹಾಸಕಾರ ಡಾ. ಇರ್ವಿನ್ ನ್ಯೂಮೇಯರ್, ಸಂಶೋಧನಾ ವಿದ್ಯಾರ್ಥಿ ಕ್ರಿಸ್ಟೋಫರ್, ಕಾಲೇಜಿನ ಪುರಾತತ್ವ ವಿದ್ಯಾಾರ್ಥಿಗಳಾದ ವಿಶಾಲ್ ರೈ, ದಿಶಾಂತ್, ಅರುಣ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು