ಕುಂದಾಪುರ: ತಾಲೂಕಿನ ಹಕ್ಲಾಡಿ ಗ್ರಾಮದ ಪ್ರಸಿದ್ಧ ಕೆಳಾಕಳಿ ಶ್ರೀಮಾರಿಕಾಂಬಾ ದೇವಿ ದೇವಸ್ಥಾನದಲ್ಲಿ ೮ನೇ ವರ್ಷದ ಶ್ರೀ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮ ಸೆ.೨೬ ಸೋಮವಾರ ದಿಂದ ಅ.೦೫ ಬುಧವಾರದ ವರೆಗೆ ದಿನಂಪ್ರತಿ ನಾನಾ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಮತ್ತು ಶ್ರೀದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ.
ಕೆಳಾಕಳಿ ಅಮ್ಮನವರ ಸನ್ನಿಧಾನದಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಅ.೪ ರಂದು ದುರ್ಗಾಹೋಮ,ಭಕ್ತಿ ರಸಮಂಜರಿ ಕಾರ್ಯಕ್ರಮ,ಮಹಾಪೂಜೆ,ಶ್ರೀದೇವಿಯ ದರ್ಶನ ಸೇವೆ,ಆಕರ್ಷಕ ಹುಲಿವೇಷ ಕುಣಿತ,ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಸೇವೆ,ಸಂಜೆ ಮನರಂಜನೆಯ ಆಟಗಳ ಸ್ಪರ್ಧೆ ಜರುಗಲಿದೆ ಎಂದು ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಜಯರಾಜ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.